ಪೋಸ್ಟ್‌ಗಳು
ವಿಜಯಪುರ : ಕೇವಲ 62.8 ಸೆಂಟಿಮೀಟರ್ ಉದ್ದವಿರುವ ಜಗತ್ತಿನ ಅತ್ಯಂತ ಕುಬ್ಜ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜ್ಯೋತಿ ಆಮಗೆ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ.2011ರಲ್ಲಿ ಗಿನ್ನಿಸ್ ಸಂಸ್ಥೆ ಈ ವಿಶ್ವ ದಾಖಲೆಯನ್ನು ದಾಖಲಿಸಿ ಪ್ರಕಟಿಸಿತ್ತು. ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು ಮತ್ತು ಅವರು ನಟಿಯಾಗಿಯೂ ಕೆಲಸ ಮಾಡುತ್ತಿದ್ದು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಾಥ್ ನೀಡಿ ಮತ್ತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಈ ಎಲ್ಲ ಅಪೂರ್ವ ಸಾಧನೆ ಮಾಡಿರುವ ಅವರು ವಿಜಯಪುರಕ್ಕೆ ಪ್ರಥಮವಾಗಿ ಭೇಟಿ ನೀಡಿದರು. ಇಂದು ವಿಜಯಪುರದ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನು ಭೇಟಿ ನೀಡಿ ಸ್ಮಾರಕಗಳ ವೈಭವ ಕಂಡು ಆನಂದಿಸಿದರು.ರವಿವಾರ ದಿನಾಂಕ 10 ರಂದು ಸಾಯಂಕಾಲ 5 ಗಂಟೆಗೆ ಅಮಿರ ಟಾಕೀಜ ಎದುರಿಗೆ ಖಾಸ್ ಪ್ರಿಮಿಯಮ್ ಫ್ಯಾಶನ್ ಸ್ಟೋರ್‌ದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವರದಿ : ಜಾವೀದ ಜಮಾದಾರ ವಿಜಯಪುರ ಮೊ. 9448128980
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ. ವಿದ್ಯುತ್ ತಗುಲಿ ಮನೆಯ ಮೇಲಿಂದ ಬಿದ್ದು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಸಾನ್ವಿ ಕಾಂಬಳೆ (9) ಎಂದು ಗುರುತಿಸಲಾಗಿದೆ. ಆಕೆ ಇಂಗಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ನಿನ್ನೆ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ, ಮನೆಯ ಮೇಲಿದ್ದ ವಿದ್ಯುತ್ ತಂತಿಯ ಮೇಲೆ ಸ್ಕಿಪ್ಪಿಂಗ್ ಹಗ್ಗ ಬಿದ್ದಿದೆ. ಹಗ್ಗವನ್ನು ತೆಗೆದುಕೊಳ್ಳಲು ಮೇಲಕ್ಕೆ ಹೋದಾಗ ಬಾಲಕಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ, ಪರಿಣಾಮ ಮನೆಯ ಮೇಲಿಂದ ಕೆಳಗೆ ಬಿದ್ದ ಕೂಡಲೇ ತಕ್ಷಣವೇ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವರದಿ : ಮುಕೇಶಕುಮಾರ ಲಂಬುಗೋಳ, ಚಿಕ್ಕೋಡಿ .
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ಸರಕಾರಿ ಕನ್ನಡ ಶಾಲೆಯ ಜಾಗೆಯ ದುರ್ಬಳಕೆ ಕುರಿತು ಕರವೇಯಿಂದ ಪ್ರತಿಭಟನೆ, ಹಿರೆಕೋಡಿ ಗ್ರಾಮದಲ್ಲಿ ಕನ್ನಡ ಸರಕಾರಿ ಶಾಲೆಯು ಕಳೆದ ಶತಮಾನಗಳಿಂದ ಅಚ್ಚು ಕಟ್ಟಾಗಿ ತನ್ನ ಕಾರ್ಯವನ್ನು ಮಾಡುತ್ತ ಬಂದಿದೆ, ಈ ಶಾಲೆಯು ಜನರಿಂದ ದಾನ ಪಡೆದ ಜಾಗೆಯನ್ನು ಹೊಂದಿದ್ದು, ಶಾಲೆಯ ಜಾಗೆಯನ್ನು ಕಬಳಿಸುವ ಕುತಂತ್ರ ನಡೆದಿದೆ, ಗ್ರಾಮದ ನಾಗರಿಕರ ಹಾಗೂ ಕರವೇ ಕಾರ್ಯಕರ್ತರ ವಿರೋಧದ ನಡುವೆಯೂ ಶಾಲೆಯ ಜಾಗೆಯನ್ನು ಅತಿಕ್ರಮಿಸಿ ರಸ್ತೆ ಮಾಡುತ್ತಿದ್ದಾರೆ, ಇದನ್ನು ಖಂಡಿಸಿ ಕರವೇ ಸೇನಾನಿಗಳು ಹಾಗೂ ಹಿರೆಕೋಡಿ ಗ್ರಾಮಸ್ಥರು, ಚಿಕ್ಕೋಡಿ ತಹಶಿಲ್ದಾರರ ಕಚೇರಿಯ ಎದುರಿಗೆ ಪ್ರತಿಭಟಿಸಿ ಮನವಿ ಸಲ್ಲಿಸಿದರು ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದರಲ್ಲಿ ಆಸಕ್ತಿ ಇಲ್ಲ, ರಾಜ್ಯದಲ್ಲಿ ಎಷ್ಟೋ ಸರಕಾರಿ ಕನ್ನಡ ಶಾಲೆಗಳು ಮುಚ್ಚಿ ಹೋಗಿವೆ, ಅಲ್ಲಲ್ಲಿ ಉಳಿದಿರುವ ಕೆಲವು ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಹಿರೆಕೋಡಿ ಸರಕಾರಿ ಕನ್ನಡ ಸರಕಾರಿ ಶಾಲೆಯ ಜಾಗೆಯಲ್ಲಿ ರಸ್ತೆ ನಿರ್ಮಿಸಿ ಖಾಸಗಿಯವರಿಗೆ ಮನೆ ಹಾಕುತ್ತಿರುವುದು ಖಂಡನೀಯ, ನಾವು ನಮ್ಮ ಭಾಗದ ಸರಕಾರಿ ಕನ್ನಡ ಶಾಲೆಗಳ ಹಾಗೂ ಅದರ ಆಸ್ತಿಗಳ ಅಳಿವಿಗಾಗಿ ಬಿಡುವುದಿಲ್ಲ, ಬೇರೆಡೆಗೆ ರಸ್ತೆ ನಿರ್ಮಿಸುವ ಮೂಲಕ ಈಗ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಈಗಿನ ಕಾಲದಲ್ಲಿ ಬಡವರ ಶಾಲೆಗೆ ಜನರು ದಾನವಾಗಿ ನೀಡಿರುವ ಭೂಮಿಯನ್ನೂ ಬಿಡುತ್ತಿಲ್ಲ, ತಮ್ಮ ಸ್ವಾರ್ಥಕ್ಕಾಗಿ ಶಾಲೆಯ ಭೂಮಿಯಲ್ಲಿ ರಸ್ತೆ ನಿರ್ಮಿಸುವುದು ಎಷ್ಟೊಂದು ಸಮಂಜಸ ಎಂಬುದನ್ನು ಜನಪ್ರತಿನಿಧಿಗಳು ವಿಚಾರ ಮಾಡಬೇಕು, ಈ ಪ್ರಕಾರ ಶಾಲೆಯ ಆವರಣದಲ್ಲಿ ರಸ್ತೆ ನಿರ್ಮಿಸುವ ಮೂಲಕ ಅಭಿವೃದ್ಧಿ ತೋರಿಸುವ ಜನಪ್ರತಿನಿಧಿಗಳ ನಿರ್ಧಾರದಿಂದ, ಮುಂದಿನ ಪೀಳಿಗೆಗೆ ಸರಕಾರಿ ಶಾಲೆಗಳ ಆಸ್ತಿ ಉಳಿಯಬಹುದಾ ? ಎಂಬುದು ಯಕ್ಷ ಪ್ರಶ್ನೆಯಾಗಿದೆ, ಸರಕಾರಿ ಶಾಲೆಗಳ ಆಸ್ತಿಗಳಲ್ಲಿ ಬೆಳವಣಿಗೆ ಆಗಬೇಕು ಹೊರತಾಗಿ ಕಡಿಮೆಯಾಗಬಾರದು, ಒಂದು ವೇಳೆ ಹೀಗೆಯೇ ಮುಂದೆವರೆದರೆ ಸರಕಾರಿ ಕನ್ನಡ ಶಾಲೆಗಳನ್ನು ಹುಡುಕುವ ಸ್ಥಿತಿ ಎದುರಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಸುಭಾಷ್ ಬಾಳಿಕಾಯಿ, ರಾಜೇಂದ್ರ ಕಾಂಬಳೆ, ರಜನಿಕಾಂತ ಬಡಿಗೇರ, ಮೊಷಿನ ಪಟೇಲ,ರಶೀದ ಮಕಾನದಾರ, ರಫೀಕ್ ಪಠಾಣ, ರಮೇಶ ಡಂಗೇರ, ಅಮೂಲ ನಾವಿ, ಪಾರೀಶ ಬಾಳಿಕಾಯಿ, ಶಂಕರ ಚೌಗಲಾ, ಚಿದಾನಂದ ಚೌಗಲಾ, ಸಾತ್ವಿರ ಕಟ್ಟಿ, ಸುರೇಶ ಪೂಜಾರಿ, ಅಣ್ಣಪ್ಪ ಪೂಜಾರಿ, ಸಾಗರ ನಿಂಗಾಗೋಳ, ಸುರೇಶ ಫರಿತೆ, ಚನ್ನಪ್ಪ ಮಂಟೂರ ಸೇರಿದಂತೆ ಹಲವಾರು ಕನ್ನಡ ಶಾಲಾ ಪ್ರೇಮಿಗಳು ಉಪಸ್ಥಿತರಿದ್ದರು..
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ರಾಯಬಾಗ : ರಾಯಬಾಗ ತಾಲೂಕು ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ:16.04.2026ರಂದು ಮುಂಜಾನೆ 10:30 ರಿಂದ ಸಾಯಂಕಾಲ 5:30ರವರೆಗೆ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಭಾಂಗಣದಲ್ಲಿ *ಆರೋಗ್ಯ ತಪಾಸಣಾ ಶಿಬಿರ* ಆಯೋಜಿಸಲಾಗಿದ್ದು, ಸದರಿ ಶಿಬಿರದಲ್ಲಿ 1.ಜನರಲ್ ಮೆಡಿಸಿನ್. 2.ಚರ್ಮರೋಗ 3.ನೇತ್ರ ಚಿಕಿತ್ಸೆ. 4.ಮೂಳೆ ಚಿಕಿತ್ಸೆ 5.ಮಕ್ಕಳಚಿಕಿತ್ಸೆ 6.ENT. 7.ಪ್ರಸೂತಿ ಮತ್ತು ಸ್ತ್ರೀರೋಗ 8.ಇತರೆ ವಿಭಾಗಗಳಿಗೆ ಸಂಬಂಧಿಸಿದಂತೆ, ನುರಿತ ತಜ್ಞರು ಹಾಗೂ ಸಿಬ್ಬಂದಿಗಳಿಂದ ಉಚಿತ ಔಷಧೋಪಚಾರದೊಂದಿಗೆ ತಪಾಸಣೆ ಜರುಗಲಿದ್ದು, ಕಾರಣ ರಾಯಬಾಗ ತಾಲೂಕಿನ ಸಮಸ್ತ ಸರ್ಕಾರಿ ನೌಕರರು ಸದರಿ ಶಿಬಿರದ ಸದುಪಯೋಗ ಪಡೆದುಕೊಳ್ಳಲು ವಿನಂತಿ..
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಚಿಕ್ಕೋಡಿ : ಕರ್ನಾಟಕ ಸರ್ಕಾರದ ಶಿಕ್ಷಣ ಕ್ಷೇತ್ರದಲ್ಲಿ ದ್ವಿಭಾಷೆ ನೀತಿ ಜಾರಿ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಹಿಂದಿ ಭಾಷೆಯನ್ನು ಕೈಬಿಟ್ಟಿರೋದು ಸ್ವಾಗತರ್ಹವೆಂದು ತಾಲೂಕ ಕರವೇ ಅಧ್ಯಕ್ಷ ಸಂಜು ಬಡಿಗೇರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಯುತರು ಮಾತನಾಡಿ ರಾಜ್ಯದಲ್ಲಿ ಕನ್ನಡದ ಮಕ್ಕಳಿಗೆ ಒತ್ತಾಯದ ಹಿಂದಿ ಭಾಷೆ ಹೇರಿಕೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಕಳೆದು 15 ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆರುತ್ತಾ ಬಂದಿದೆ. ಆ ಹೋರಾಟದ ಪರಿಣಾಮದಿಂದ ಕರವೇಯ ಅನೇಕ ಹೋರಾಟಗಾರರ ಮೇಲೆ ಸಾಕಷ್ಟು ಕೇಸು ಖಟಲೆ ಪ್ರಕರಣಗಳು ದಾಖಲಾಗಿದ್ದು ಅಲ್ಲದೆ ಅನೇಕ ಹೋರಾಟಗಾರರು ಜೈಲುವಾಸವನ್ನು ಕೂಡ ಅನುಭವಿಸಿರುತ್ತಾರೆ. ಅಲ್ಲದೆ ಕೇಂದ್ರ ಸರ್ಕಾರ ಬಹುತೇಕ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಏರಿಕೆ ಹೇಳಿಕೆ ಮಾಡಲು ಹೊರಟಿದ್ದು. ಈದಕ್ಕೆ ವಿರೋಧಿಸಿ ಅದಕ್ಕೆ ತಕ್ಕ ಉತ್ತರ ನೀಡಲು ಪರೀಕ್ಷಾ ಸಂದರ್ಭದಲ್ಲಿ ಹಿಂದಿ ಭಾಷೆ ಪರೀಕ್ಷೆ ವಿರೋಧಿಸಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ವಿನೂತನ ಹೋರಾಟಕ್ಕೆ ವೇದಿಕೆಯ ಕಾರ್ಯಕರ್ತರು ಮುಂದಾಗಿದ್ದರು. ಆದರೆ ಈಗ ನಮ್ಮ ಕರ್ನಾಟಕ ಘನ ರಾಜ್ಯ ಸರ್ಕಾರ ಇತಿಹಾಸದಲ್ಲಿ ಇದೇ ಮೊದಲು ಬಾರಿಗೆ ಹಿಂದಿ ಭಾಷಾಂಕಗಳನ್ನು ಪರಿಗಣನೆ ಮಾಡದೆ ದ್ವಿಭಾಷಾ ನೀತಿಗೆ ಒಲವು ವ್ಯಕ್ತಪಡಿಸಿರುವುದು ಸ್ವಾಗತರ್ಹವಾಗಿದೆ ರಾಜ್ಯದ ಈ ನಿಲುವಿನ ಜೋತೆ ರಾಜ್ಯದ ಆಡಳಿತರೂಡ ಇತರೆ ಎಲ್ಲಾ ವಲಯದಲ್ಲಿ ಎಲ್ಲಾ ಹಂತದಲ್ಲೂ ಕನ್ನಡ ಭಾಷೆಗೆ ಸೂಕ್ತ ಮುನ್ನಡೆ ಸಿಗುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು ಇಲ್ಲದೆ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರು ನೇತೃತ್ವದಲ್ಲಿ ರಾಜ್ಯದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಪರಿಣಾಮಕಾರಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಮತ್ತಷ್ಟು ಉಗ್ರ ಹೋರಾಟ ರೂಪಿಸಲಾಗುವುದು ಸರ್ಕಾರ ಇದಕ್ಕೆ ಆಸ್ಪದ ನೀಡದೆ ತಾವುಗಳು ಹೊರಡಿಸಿದ ಸುತ್ತೋಲೆಗಳಲ್ಲಿ ಸ್ಪಷ್ಟಪಡಿಸಿದ್ದನ್ನೆ ಪರಿಣಾಮಕಾರಿಯಾಗಿ ಕಾರ್ಯರೂಪಗೊಳಿಸಿ ಜಾರಿಗೆ ತರಬೇಕೆಂದು ಶ್ರೀ ಸಂಜು ಬಡಿಗೇರವರು ಆಗ್ರಹಿಸಿದರು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಗವಾಡ 22: ತಾಲೂಕಿನ ಜುಗೂಳ ಗ್ರಾಮದ ಬಜಾರ ಪೇಟೆಯಲ್ಲಿರುವ ಸುಮಾರು 12ರಿಂದ 15 ಅಂಗಡಿಗಳಿಗೆ ಶನಿವಾರ ದಿ. 21ರ ಮಧ್ಯರಾತ್ರಿ ಸುವಾರು 12ರಿಂದ 1 ಗಂಟೆಯ ಸುಮಾರಿಗೆ ವಿದ್ಯುತ್ ಶಾರ್ಟ ಸಕ್ರೀಟ್‌ನಿಂದಾಗಿ ಬೆಂಕಿಹೊತ್ತಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ.ಗ್ರಾಮದ ಸಿದ್ದೇಶ್ವರನೀರಾವರಿ ಸಂಘ, ಗೋಮ್ಮಟೇಶ್ವರ ನೀರಾವರಿ ಸಂಘ, ಸಾಗರ ನೀರಾವರಿ ಸಂಘ, ಅಡಿವೆಪ್ಪಾ ಭನಾಜ ಜೈ ಜೀನೇಂದ್ರ ಹೊಟೇಲ್, ಪ್ರಕಾಶ ಮಡಿವಾಳ ಲಾಂಡ್ರಿ ಅಂಗಡಿ, ಸಿದ್ಧಾಂತ ಶಿರಗುಪ್ಪೆ ಕೀಟನಾಶಕ ಮತ್ತು ಕೃಷಿ ಔಷಧ ಅಂಗಡಿ, ಅಮೀತ ಶಿಂಧೆ ಸಲೂನ್, ಶೋಭಾ ಘಟಗೆ ಪೈಪ್ ಅಂಗಡಿ, ಭೋಲೆನಾಥ ಐಸ್ಟ್ರೀಮ್ ಅಂಗಡಿ, ಕುಂಥಿನಾಥ ಭನಾಜ ಅಂಗಡಿ, ಮಾರುತಿ ಮಿಣಚೆ ಫೋಟೋ ಸ್ಟಡಿಯೋ ಮತ್ತು ಕಂಪ್ಯೂಟರ್ ಸೆಂಟರ್ ಹೀಗೆ ಹತ್ತು ಹಲವಾರು ಅಂಗಡಿಗಳು ಬೆಂಕಿಯಿಂದ ಸುಟ್ಟ ಕರಕಲಾಗಿವೆ.ಕೂಡಲೇ ಸ್ಥಳಕ್ಕೆ ರಾಯಬಾಗ, ಅಥಣಿ ಮತ್ತು ಉಗಾರ ಸಕ್ಕರೆ ಕಾರ್ಖಾನೆಯ ಅಗ್ನಿಶಾಮಕ ದಳಗಳು ಆಗಮಿಸಿ, ಬೆಂಕಿನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.ಇನ್ನೂ ರವಿವಾರ ದಿ. 22 ರಂದು ಬೆಳಿಗ್ಗೆ ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ, ಪಿಎಸ್‌ಐ ರಾಘವೇಂದ್ರ ಖೋತ, ಹೆಸ್ಕಾಂ ಎಸ್ ಓ ಡಿ.ಎಸ್. ಅರಳಿಕಟ್ಟಿ ಸ್ಥಳಕ್ಕೆ ಭೇಟಿ ನೀಡಿ, ಪರೀಶಿಲನೆ ನಡೆಸುತ್ತಿದ್ದಾರೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು