ವಿಷಯಕ್ಕೆ ಹೋಗಿ
ಕಾಗವಾಡ 22: ತಾಲೂಕಿನ ಜುಗೂಳ ಗ್ರಾಮದ ಬಜಾರ ಪೇಟೆಯಲ್ಲಿರುವ ಸುಮಾರು 12ರಿಂದ 15 ಅಂಗಡಿಗಳಿಗೆ ಶನಿವಾರ ದಿ. 21ರ ಮಧ್ಯರಾತ್ರಿ ಸುವಾರು 12ರಿಂದ 1 ಗಂಟೆಯ ಸುಮಾರಿಗೆ ವಿದ್ಯುತ್ ಶಾರ್ಟ ಸಕ್ರೀಟ್‌ನಿಂದಾಗಿ ಬೆಂಕಿಹೊತ್ತಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ.ಗ್ರಾಮದ ಸಿದ್ದೇಶ್ವರನೀರಾವರಿ ಸಂಘ, ಗೋಮ್ಮಟೇಶ್ವರ ನೀರಾವರಿ ಸಂಘ, ಸಾಗರ ನೀರಾವರಿ ಸಂಘ, ಅಡಿವೆಪ್ಪಾ ಭನಾಜ ಜೈ ಜೀನೇಂದ್ರ ಹೊಟೇಲ್, ಪ್ರಕಾಶ ಮಡಿವಾಳ ಲಾಂಡ್ರಿ ಅಂಗಡಿ, ಸಿದ್ಧಾಂತ ಶಿರಗುಪ್ಪೆ ಕೀಟನಾಶಕ ಮತ್ತು ಕೃಷಿ ಔಷಧ ಅಂಗಡಿ, ಅಮೀತ ಶಿಂಧೆ ಸಲೂನ್, ಶೋಭಾ ಘಟಗೆ ಪೈಪ್ ಅಂಗಡಿ, ಭೋಲೆನಾಥ ಐಸ್ಟ್ರೀಮ್ ಅಂಗಡಿ, ಕುಂಥಿನಾಥ ಭನಾಜ ಅಂಗಡಿ, ಮಾರುತಿ ಮಿಣಚೆ ಫೋಟೋ ಸ್ಟಡಿಯೋ ಮತ್ತು ಕಂಪ್ಯೂಟರ್ ಸೆಂಟರ್ ಹೀಗೆ ಹತ್ತು ಹಲವಾರು ಅಂಗಡಿಗಳು ಬೆಂಕಿಯಿಂದ ಸುಟ್ಟ ಕರಕಲಾಗಿವೆ.ಕೂಡಲೇ ಸ್ಥಳಕ್ಕೆ ರಾಯಬಾಗ, ಅಥಣಿ ಮತ್ತು ಉಗಾರ ಸಕ್ಕರೆ ಕಾರ್ಖಾನೆಯ ಅಗ್ನಿಶಾಮಕ ದಳಗಳು ಆಗಮಿಸಿ, ಬೆಂಕಿನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.ಇನ್ನೂ ರವಿವಾರ ದಿ. 22 ರಂದು ಬೆಳಿಗ್ಗೆ ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ, ಪಿಎಸ್‌ಐ ರಾಘವೇಂದ್ರ ಖೋತ, ಹೆಸ್ಕಾಂ ಎಸ್ ಓ ಡಿ.ಎಸ್. ಅರಳಿಕಟ್ಟಿ ಸ್ಥಳಕ್ಕೆ ಭೇಟಿ ನೀಡಿ, ಪರೀಶಿಲನೆ ನಡೆಸುತ್ತಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು