ವಿಷಯಕ್ಕೆ ಹೋಗಿ
ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು