ವಿಷಯಕ್ಕೆ ಹೋಗಿ
ರಾಯಬಾಗ : ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷರಾದ ಉಮೇಶ ಭೂಪಾಲ ಪೋಳ ತಿಳಿಸಿದ್ದಾರೆ. 2026ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದವರು ಆನ್‌ಲೈನ್ ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು.https://powermedia.info. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YouTube ಚಾನಲ್‌ಗೆ ಭೇಟಿ ನೀಡಿ.**ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು: ವಿದ್ಯಾರ್ಥಿಯು 2026ರ SSLC/PUC ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು. ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು. ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ. Online ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು. ವಿದ್ಯಾರ್ಥಿಯ ಪಾಸ್‌ಪೋರ್ಟ್ ಭಾವಚಿತ್ರ ಮತ್ತು ದೃಢೀಕೃತ ಅಂಕಪಟ್ಟಿ ಇಲಾಖೆಯ ಸೇವಾ ದೃಢೀಕರಣ ಪತ್ರ**ಸಂಘದ ತಾಲ್ಲೂಕು ಅಧ್ಯಕ್ಷರಿಂದ ಪಡೆದ ದೃಢೀಕರಣ ಪತ್ರ. ಈ ಮೇಲ್ಕಂಡ ಲಗತ್ತುಗಳನ್ನು ನಿಗದಿತ JPG Formatನಲ್ಲಿ (1 MBಮೀರದಂತೆ) ಅಪ್ಲೋಡ್ ಮಾಡುವುದು.**ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್‌ಗೆ ಸ್ವೀಕೃತಿ ರವಾನೆಯಾಗಲಿದೆ.**ಶೇಕಡಾವಾರು ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ: ಬೆಳಿಗ್ಗೆ 10.30 ರಿಂದ ಸಂಜೆ 6.00ವರೆಗೆ:080-22354784/83
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು