ವಿಷಯಕ್ಕೆ ಹೋಗಿ
ಕೈ ರೋಹಿತ ಪ್ರದೀಪ ಮಂಗಸೂಳೆ, ಮಾಂಗೂರ, ಇವರ 8 ನೇಯ ಪುಣ್ಯತಿಥಿಯ ನಿಮಿತ್ಯ ಸರಕಾರಿ ಶಾಲೆಯ ಮಕ್ಕಳಿಗೆ ಸಾಹಿತ್ಯಗಳ ವಿತರನೆ... ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ, ಮಾಂಗೂರ ಗ್ರಾಮದಲ್ಲಿ ಆರ್. ಎಮ್. ಬಾಯೀಜ್ ಗ್ರುಪ್ ವತಿಯಿಂದ, ಕೈ. ರೋಹಿತ ಪ್ರದೀಪ ಮಂಗಸೂಳೆ ಇವರ 8 ನೇಯ ಪುಣ್ಯತಿಥಿಯ ನಿಮಿತ್ಯ, ರೋಹಿತ ಇವರ ಕನ್ಯಾ ಚಿಂ. ಸ್ವರಾ ಇವಳ ಅಮೃತ ಹಸ್ತದಿಂದ, ಮಾಂಗೂರ ಗ್ರಾಮದ ಹಿರೀಯ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಾಹಿತ್ಯಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಚಿಕ್ಕೋಡಿಯ ಸಮಾಜ ಸೇವಕರು ಮಾತನಾಡಿ, ರೋಹಿತ ಇವರ ಮಿತ್ರರು ಇಂತಹ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯವಾಗಿದೆ, ಇದರಿಂದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬಹಳ ಸಹಾಯವಾಗಲಿದೆ, ಸರಕಾರಿ ಶಾಲಾ ಮಕ್ಕಳ ಭವಿಷ್ಯಕ್ಕಾಗಿ ಇಂತಹ ಕಾರ್ಯಗಳನ್ನು ಮಾಡುವುದು ಬಹಳ ಮಹತ್ವದ್ದಾಗಿದೆ, ಒಬ್ಬ ಒಳ್ಳೆಯ ವ್ಯಕ್ತಿಗೋಸ್ಕರ, ಕಾದು ನೋಡಿದ ಸಮಯ ಒಂದು ಒಳ್ಳೆಯ ಕೆಲಸಗೋಸ್ಕರ, ಖರ್ಚು ಮಾಡಿದ ಹಣ ಎಂದೆಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೇಳಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಜೀತ ಜೋಕೆ ಯುವಕರು ಇಂತಹ ಜನಪರ ಕಾರ್ಯಗಳಲ್ಲಿ ಭಾಗವಹಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಹೇಳಿದರು, ಗಿರೀಶ ಪಾಟೀಲ ನಿರೂಪಿಸಿದರು, ಡಿ.ಎಮ್.ಬಲವಾನ ಇವರು ಸ್ವಾಗತಿಸಿ ವಂದಿಸಿದರು. ಈ ಸಂಧರ್ಭದಲ್ಲಿ , ಅಮೂಲ ಮೋರ್ಚೆ, ಸಂತೋಷ ಮಾನಕಾಪುರೆ, ಪ್ರದೀಪ ಶಿಂಧೆ, ಮಿಥುನ ಕುರಾಡೆ, ಪ್ರದೀಪ ಮಂಗಸೂಳೆ, ಸಂದೀಪ ಜಾಧವ, ಸಂತೋಷ ಮಾನಗಾವೆ, ಸಂದೀಪ ಬಾಚನೆ, ಸ್ವಪ್ನೀಲ ಮಾನಕಾಪುರೆ ಸೇರಿದಂತೆ ಶಾಲಾ ಆರ್. ಎಮ್. ಬಾಯೀಜ್ ಗ್ರುಪ್ ಕಾರ್ಯಕರ್ತರು, ಮುಖ್ಯೋಪಾದ್ಯಾಯರಾದ ಆರ್.ಎಸ್.ಕೋಳಿ, ಜಿ. ಎಸ್. ಮಾನೆ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು