ವಿಷಯಕ್ಕೆ ಹೋಗಿ
ಶುಧ್ದ,ಸುಂದರ ಸಮಾಜ ನಿರ್ಮಾಣಕ್ಕೆ ಶ್ರೀಶೈಲ್ ಜಗದ್ಗುರುಗಳು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಕಲ್ಲಿದಲು ಗಣಿ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು..ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಶ್ರೀಶೈಲ್ ಜಗದ್ಗುರುಗಳ ಪಾದಯಾತ್ರೆಯ ಚಾಲನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಅವರು ಶ್ರಿಶೈಲ್ ಜಗದ್ಗುರುಗಳು ಯಡೂರದಿಂದ ಶ್ರೀಶೈಲ್ ದವರೆ ಪಾದಯಾತ್ರೆಯನ್ನು ಕೈಗೊಂಡು ಅದರಲ್ಲಿ ಸಾಮಾಜಿಕ ಜನಜಾಗೃತಿ ಮಾಡುವ ಮೂಲಕ ಶುಧ್ದ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ.ಹಳ್ಳಿ ಹಳ್ಳಿಗಳಿಗೆ ಧರ್ಮ ಜಾಗೃತಿ,ಲಿಂಗದಿಕ್ಷೆ,ದುಶ್ಚಟಗಳ ಭಿಕ್ಷೆ,ಪಾದಯಾತ್ರೆಯ ಮಾರ್ಗದ ಎರಡೂ ಬದಿಗೆ ವೃಕ್ಷಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು..ನಂತರ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಧರ್ಮ,ಸಮಾಜಗೊಸ್ಕರ ಅದಲ್ಲದೇ ಹಲವು ರೀತಿಯ ಜನಜಾಗೃತಿಯ ವಿಷಯಗಳನ್ನು ಒಳಗೊಂಡು ಪಾದಯಾತ್ರೆಯನ್ನು ಯಡೂರದಿಂದ ಶ್ರೀಶೈಲ್ ದವರೆಗೆ ಶ್ರೀಶೈಲ್ ಜಗ್ದುರುಗಳು ಪಾದಯಾತ್ರೆ ಕೈಗೊಂಡಿರುವುದು ಕಾರ್ಯ ಶ್ಲಾಘನೀಯ ಎಂದರು..ಕಾಶಿ ನೂತನ ಜದ್ಗುರು ಡಾ! ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ,ಶ್ರಿಶೈಲ್ ಜಗದ್ಗುರು ಡಾ! ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ, ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ ವಿಧಾನಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ, ಕೆಎಲ್ಇ ಕಾರ್ಯಾಧ್ಯಕ್ಷ ಡಾ! ಪ್ರಭಾಕರ ಕೋರೆ,ಶಾಸಕ ಎ ಎಸ್ ಪಾಟೀಲನಡಹಳ್ಳಿ,ಶ್ರಿಶೈಲ್ ಶಾಸಕ ಚಕ್ರಪಾನ ರೆಡ್ಡಿ,ವಿಆರ್ ಎಲ್ ಮುಖ್ಯಸ್ಥ ವಿಜಯ ಸಂಕೇಶ್ವರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು…ಈ ಸಂಧರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಎಂಎಲ್ಸಿ ಹನುಮಂತ ನಿರಾಣಿಶಾಸಕ ದುರ್ಯೋಧನ ಐಹೊಳೆ, ಮಾಜಿ ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸಿದ್ರಾಮ ಮೇತ್ರೆ,ಚಿಂಚಲಿಯ ಅಲ್ಲಮಪ್ರಭು ಸ್ವಾಮೀಜಿ,ರಘು ಸಾರಂಗ ಶ್ರೀಗಳು,ನಾಗನಸೂರು ಶ್ರೀಗಳು,,ಶಹಾಪೂರ ಶ್ರೀಗಳು ,ಜೈನಾಪೂರದ ಶ್ರೀಗಳು, ದೇವರಹಿಪ್ಪರಗಿ ಶ್ರೀಗಳು, ಮಾಂಜರಿ ಶ್ರೀಗಳು,ಬನಹಟ್ಟಿ ಶ್ರೀಗಳು,ಜಮಖಂಡಿ ಶ್ರೀಗಳು ಗುಳೆದಗುಡ್ಡ ಶ್ರೀಗಳು, ಅಂತಾಪೂರ ಶ್ರೀಗಳು,ಅಂಬಿಕಾನಗರ ಶ್ರೀಗಳು ,ನೂಲ ಶ್ರೀಗಳು,ಎಕ್ಕಂಚಿ ಶ್ರೀಗಳು, ಬಾರಶಿ ಶ್ರೀಗಳು,ಮದ್ರೂಪ ಶ್ರೀಗಳು,ಮಸಬಿನಾಳ ಶ್ರೀಗಳು, ಬಾಗೇವಾಡಿ ಶ್ರೀಗಳು,ಇಂಗಳೇಶ್ವರ ಶ್ರೀಗಳು ಸೇರಿದಂತೆ ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು…
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು