ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರ ಜನ್ಮೋತ್ಸವ, ಮಕ್ಕಳ ದಿನಾಚರನೆಯ ನಿಮಿತ್ಯ, ಚಿಕ್ಕೋಡಿ ಪಟ್ಟಣದ ಖ್ಯಾತ ಹೃದ್ರೋಗ ತಜ್ಞರಾದ ಡಾ. ಶ್ರೀಧರ ಕುಲಕರ್ಣಿ ಇವರು, ತಮ್ಮ ಹುಟ್ಟು ಹಬ್ಬವನ್ನು ಕನ್ನಡ ಸರಕಾರಿ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಿಕೊಂಡರು. ಪಟ್ಟಣದ ಶ್ರೀ ಅಲ್ಲಮಪ್ರಭು ಅನ್ನದಾನ ಸಮಿತಿಯ ಮೂಲಕ, ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರ ಜನ್ಮೋತ್ಸವ, ಮಕ್ಕಳ ದಿನಾಚರನೆಯ ನಿಮಿತ್ಯ, ಚಿಕ್ಕೋಡಿ ಪಟ್ಟಣದ ಖ್ಯಾತ ಹೃದ್ರೋಗ ತಜ್ಞರಾದ ಡಾ. ಶ್ರೀಧರ ಕುಲಕರ್ಣಿ ಇವರು, ತಮ್ಮ ಹುಟ್ಟು ಹಬ್ಬವನ್ನು ಚಿಕ್ಕೋಡಿ ತಾಲೂಕಿನ, ಚಿಂಚಣಿ ಗ್ರಾಮದ ಕನ್ನಡ ಸರಕಾರಿ ಶಾಲೆಯಲ್ಲಿಯ ಮಕ್ಕಳಿಗೆ ನೋಟ ಬುಕ್ಕ, ಪೆನ್ನ ಮತ್ತು ಸಿಹಿ ಹಂಚುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡರು. ದಿವ್ಯ ಸಾನಿದ್ಯವನ್ನು ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ ಇವರು ವಹಿಸಿಕೊಂಡಿದ್ದರು, ಶಾಲೆಯ ಮುಖ್ಯೋಪಾದ್ಯಾಯರಾದ ಎನ್ ಎಸ್ ಕಾಂಬಳೆ ಇವರು ಸ್ವಾಗತಿಸಿ ವಂದಿಸಿದರು, ಪ್ರಾಸ್ತಾವಿಕವಾಗಿ ಚವ್ಹಾನ ಸರ್ ಮಾತನಾಡಿದರು, ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಡಾ. ಶ್ರೀಧರ ಕುಲಕರ್ಣಿ ಇವರು ಸರಕಾರಿ ಶಾಲೆಯಲ್ಲಿ ಕಲೆತಿದ್ದು, ಇವರು ಯಾವಾಗಲೂ ಸರಕಾರಿ ಶಾಲಾ ಮಕ್ಕಳ ಬಗ್ಗೆ ಗೌರವ ಹೊಂದಿದ್ದಾರೆ, ತಾವೂ ಸಹ ಶೃದ್ಧೆಯಿಂದ ಅಭ್ಯಾಸ ಮಾಡಿ ಸಾಧನೆ ಮಾಡಬೇಕೆಂದು ಹೇಳಿದರು, ಡಾ. ಶ್ರೀಧರ ಕುಲಕರ್ಣಿ ಇವರು ಮಾತನಾಡಿ ನಾನೂ ಸಹ ರೈತಾಪಿ ಕುಟುಂಬದಿಂದ ಬಂದಿದ್ದು, ಕಷ್ಟದಿಂದ ಶಿಕ್ಷಣ ಪಡೆದು ವೈದ್ಯನಾಗಿದ್ದೇನೆ, ತಾವೆಲ್ಲರೂ ಕಷ್ಟಪಟ್ಟು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು, ಶ್ರೀ ಅಲ್ಲಮಪ್ರಭು ಸ್ವಾಮೀಜಿ ಇವರು ಆಶೀರ್ವಚನ ನೀಡುತ್ತಾ ಶಾಲೆಯ ಸ್ವಚ್ಛತೆ ಮತ್ತು ಮಕ್ಕಳ ಸಿಸ್ತಿನ ಬಗ್ಗೆ ಪ್ರಶಂಶೆ ವ್ಯಕ್ತ ಪಡಿಸಿ, ನಮ್ಮ ಊರಿಗೆ ಅಲ್ಲಮನ ಆಶೀರ್ವಾದವಿದೆ ಈ ಶಾಲೆಯಲ್ಲಿ ಕಲಿತ ನೂರಾರು ಜನರು ಉಣ್ಣತ ಹುದ್ದೆಗಳಿಗೆ ಹೋಗಿದ್ದಾರೆ, ತಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಆಶೀರ್ವದಿಸಿದರು. ಈ ಸಮಾರಂಭಕ್ಕೆ ಚಿಕ್ಕೋಡಿ ಪಟ್ಟಣದ ಮುಖಂಡರು ಆದ ವರ್ಧಮಾನ ಸದಲಗೆ, ಕರ್ನಾಟಕ ರಕ್ಷಣಾ ವೇದಿಕೆಯರ ಮುಖಂಡರಾದ ಸಂಜು ಬಡಿಗೇರ, ಶಾಲಾ ಸಿಬ್ಬಂದಿ ಮತ್ತು ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು