ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ರಸ್ತೆಗಳ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ, ಚಿಕ್ಕೋಡಿ ಪಟ್ಟಣದ ಕೃಷ್ಣ ಸರ್ಕಲ್ ಹತ್ತಿರ ಕರವೇಯಿಂದ ಭೃಹತ್ತ ಪ್ರತಿಭಟನೆ, ಕಳೆದ ಹಲವಾರು ತಿಂಗಳುಗಳಿಂದ ಗೋಟೂರ ವಿಜಯಪುರ ರಸ್ತೆಯಲ್ಲಿ ಭಯಂಕರವಾದ ಗುಂಡಿಗಳು ಬಿದ್ದಿದ್ದು, ದಿನಂಪ್ರತಿ ಹಲವಾರು ಅಪಘಾತಗಳು ಆಗುತ್ತಲಿವೆ, ಆದರೆ ಇದನ್ನು ಗಮಣಕ್ಕೆ ತಗೆದುಕೊಳ್ಳದ ಸರಕಾರ ಮತ್ತು ಅಧಿಕಾರಿಗಳ ವಿರುದ್ಧ, ಚಿಕ್ಕೋಡಿ ಪಟ್ಟಣದ ಕೃಷ್ಣ ಸರ್ಕಲ್ ದಲ್ಲಿ ಕರವೇ ಮತ್ತು ಇತರ ಪ್ರಗತಿಪರರ ಸಂಯುಕ್ತದಲ್ಲಿ, ರಸ್ತೆ ತಡೆದು ಭೃಹತ್ತ ಪ್ರತಿಭಟನೆ ಮಾಡಲಾಯಿತು, ಸರಕಾರ ಮತ್ರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾಯಿತು, ನಂತರ ಸಂಭಂಧಿತ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದಾಗ ಮಾನ್ಯ ಸಿ.ಪಿ.ಆಯ್ ಸಾಹೇಬರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿದಾಗ, ಮುಸ್ಕರವನ್ನು ಹಿಂಪಡೆಯಲಾಯಿತು. ಈ ಸಂಧರ್ಭದಲ್ಲಿ ಕರವೇ ಜಿಲ್ಲಾ ಸಂಚಾಲಕರಾದ ಸಂಜು ಬಡಿಗೇರ, ಅಧ್ಯಕ್ಷ ನಾಗೇಶ ಮಾಳಿ, ಕಾರ್ಯಕರ್ತರಾದ ಬಸವರಾಜ ಸಾಜನೆ, ಮಹೇಶ ಕಾಂಬಳೆ, ಅಮೂಲ ನಾವಿ, ಸಚಿನ ದೊಡ್ಡಮನಿ, ಶ್ರೀಕಾಂತ ಅಸೋದೆ, ಖಾನಪ್ಪಾ ಬಾಡ್ಕರ, ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು