ವಿಷಯಕ್ಕೆ ಹೋಗಿ
10 ನೇಯ ದಿನದ ಚಿಕ್ಕೋಡಿ ಜಿಲ್ಲಾ ಹೋರಾಟ ಮುಂದೆವರಿದಿದ್ದು, ಹೋರಾಟಗಾರರು ಚಿಕ್ಕೋಡಿ ಪ್ರವಾಸಿ ಮಂದಿರದಿಂದ ತಹಶೀಲ್ದಾರ ಕಾರ್ಯಾಲಯದ ವರೆಗೆ ದೀಡನಮಸ್ಕಾರ ಹಾಕುತ್ತ , ಪ್ರತಿಭಟನೆ ಕೈಗೊಂಡರು, ಕೆಲ ಸಮಯ ಸಂಚಾರ ಅಸ್ತ ವ್ಯಸ್ತವಾಗಿತ್ತು, ತಹಶೀಲ್ದಾರ ಕಚೇರಿಯ ಬಾಗಿಲಿಗೆ ಪಟ್ಟು ಹಿಡಿದು ಕೂತ ಹೋರಾಟಗಾರರು, ಸರಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷನೆ ಕೂಗಿದರು, ತಹಶೀಲ್ದಾರರು ಕಚೇರಿಗೆ ಆಗಮಿಸಿದಾಗ ಅವರಿಗೆ ದಿಗ್ಭಂಧನ ಹಾಕುವ ಮೂಲಕ ಪ್ರತಿಭಟಿಸಿದರು, ಕಾರ್ಯಾಲಯವನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿರುವ ಪ್ರತಿಭಟನಾಕಾರರನ್ನು, ಸಿ.ಪಿ.ಆಯ್. ಆರ್. ಆರ್. ಪಾಟೀಲ ಮತ್ತು ಪಿ. ಎಸ್. ಆಯ್. ಯಮಣಪ್ಪಾ ಮಾಂಗ ಇವರ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡರು, ಕೆಲ ಕಾಲಗಳ ನಂತರ ಬಿಡುಗಡೆಗೊಳಿಸಿದರು, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಕಾಶಿನಾಥ ಕುರಣಿ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಹೋರಾಟ, ಯಾವೊಂದು ಸರಕಾರ ಚಿಕ್ಕೋಡಿ ಜಿಲ್ಲೆ ಘೋಷನೆ ಮಾಡದೇ, ಚಿಕ್ಕೋಡಿ ವಿಭಾಗದ ಜನರಿಗೆ ಮೋಸ ಮಾಡುತ್ತಿದೆ, ಚಿಕ್ಕೋಡಿ ಜಿಲ್ಲೆಯಾದರೆ, ಈ ಭಾಗದ ಹಳ್ಳಿಗಳು ಅಭಿವೃದ್ಧಿ ಆಗುವ ಜೊತೆಗೆ, ರೈತರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ಹಾಗೂ ರೈತರ ಉತ್ಪಣ್ಣಗಳಿಗೆ ಸೂಕ್ತ ಬೆಲೆ ಸಿಗಲಿದೆ, ಚಿಕ್ಕೋಡಿ ಜಿಲ್ಲೆಯಾದರೆ ಉದ್ಯಮಿ, ವ್ಯಾಪಾರಿ, ರೈತ, ಕೂಲಿಕಾರ, ವಿದ್ಯಾವಂತ ಯುವಕರಿಗೂ ಸಹ ಉದ್ಯೋಗ ಸಿಗಲಿದೆ, ಪ್ರತಿಯೊಂದು ಕುಟುಂಬವೂ ಸಹ ಸ್ವಾವಲಂಬಿ ಬದುಕು ಕಟ್ಟಲು ಮಾರ್ಗವಾಗಲಿದೆ, ಈ ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಿ ಘೋಷನೆಯಾಗಬೇಕು, ಎಂದು ಹೇಳಿದರು, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಎಷ್ಟೋ ಸಲ ಪ್ರತಿಭಟನೆ ಮಾಡಿದರೂ ಯಾವೊಬ್ಬ ಜನಪ್ರತಿನಿಧಿಯೂ ಚಿಕ್ಕೋಡಿ ಜಿಲ್ಲೆ ಮಾಡಲು ಮುಂದಾಗುತ್ತಿಲ್ಲ, ಚುನಾವಣೆ ಬಂದಾಗ ಮಾತ್ರ ಚಿಕ್ಕೋಡಿ ಜಿಲ್ಲೆಯ ಬಗ್ಗೆ ನೆನಪಾಗುತ್ತದೆ, ತದನಂತರ ತಮ್ಮದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ನಿರತರಾಗುತ್ತಾರೆ, ಬರುವ ಚುನಾವಣೆ ಸಮಯದಲ್ಲಿ ನಮ್ಮ ಭಾಗದ ಹಳ್ಳಿ ಹಳ್ಳಿಗಳಿಗೆ ತೆರಳಿ ನೋಟಾ ವೋಟು ಹಾಕುವಂತೆ ಜನರಲ್ಲಿ ಮನವಿ ಮಾಡುತ್ತೇವೆ, ಉತ್ತರ ಕರ್ನಾಟಕ ಭಾಗದ ಸ್ವಾರ್ಥ ರಾಜಕಾರಣಿಗಳು ಜನರ ಬೇಡಿಕೆಗೆ ಬೆಲೆ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಜಿಲ್ಲಾ ಮುಖಂಡರಾದ ಸಂಜು ಬಡಿಗೇರ ಮಾತನಾಡಿ, ನಮ್ಮ ಭಾಗದ ಜನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿ ಹೈರಾನಾಗಿದ್ದಾರೆ, ಚಿಕ್ಕೋಡಿ ಜಿಲ್ಲೆಯಾದರೆ ಹೆಚ್ಚು ಅನುದಾನ ಬರುವುದರಿಂದ ನೀರಾವರಿ ಸೌಲಭ್ಯಗಳು ಜಾರಿಯಾಗಲಿವೆ, ಚಿಕ್ಕೋಡಿ ಮಾರುಕಟ್ಟೆ ಆಗುವುದರಿಂದ ಎಲ್ಲ ಕ್ಷೇತ್ರಗಳಿಗೆ ಉತ್ತಮ ಸೌಲಭ್ಯಗಳು ದೊರೆಯಲಿವೆ, ಕೂಡಲೇ ಚಿಕ್ಕೋಡಿ ಜಿಲ್ಲೆ ಘೋಷನೆಯಾಗಬೇಕೆಂದು ಹೇಳಿದರು, ಈ ಸಂಧರ್ಭದಲ್ಲಿ ಹೋರಾಟಗಾರರಾದ ರಮೇಶ ಡಂಗೇರ, ಮಾಳಪ್ಪಾ ಕರೆಣ್ಣವರ, ರಫೀಕ್ ಪಠಾಣ, ಸಚೀನ ದೊಡ್ಡಮನಿ, ಸಿದ್ದು ಕಾಂಬಳೆ, ಅಮೂಲ ನಾವಿ, ವಿಜಯ ಬ್ಯಾಳೆ, ನಕುಲ ಕಂಬಾರ, ಖಾನಪ್ಪಾ ಬಾಡಕರ, ಶಿವು ಶಾಡಬಿದ್ರೆ, ಸತ್ಯಪ್ಪಾ ಕಾಂಬಳೆ, ಶ್ರೀಕಾಂತ ಅಸೋದೆ, ರೈತ ಮುಖಂಡ ಸಿದ್ರಾಮ್ ಕರಗಾಂವೆ, ನಾಗೇಶ ಮಾಳಿ, ಚನ್ನಪ್ಪಾ ಬಡಿಗೇರ ಸೇರಿದಂತೆ ಕನ್ನಡಪರ, ರೈತಪರ, ಮಹಿಳಾ ಮತ್ತು ದಲಿತ ಸಂಘನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು...
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು