ವಿಷಯಕ್ಕೆ ಹೋಗಿ
4 ನೇಯ ದಿನದ ಚಿಕ್ಕೋಡಿ ಜಿಲ್ಲಾ ಹೋರಾಟ ಮುಂದೆವರಿದಿದ್ದು, ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರು ಆದ ಸಿ. ಎಸ್. ಕುಲಕರ್ಣಿ ಇವರು ವೇದಿಕೆಗೆ ಭೆಟ್ಟಿ ನೀಡಿ, ಜಿಲ್ಲಾ ಹೋರಾಟಗಾರರ ಬೇಡಿಕೆಯ ಬಗ್ಗೆ ಸರಕಾರದ ಗಮಣಕ್ಕೆ ತರಲಾಗುವುದು ಎಂದು ಹೇಳಿದರು, ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಮಂಜುನಾಥ ಪರಗೌಡರ ವೇದಿಕೆಗೆ ಆಗಮಿಸಿ, ಬೆಂಬಲ ಸೂಚಿಸಿ ಮಾತನಾಡಿ 20 ವರ್ಷಗಳಿಂದ ಜಿಲ್ಲೆಗಾಗಿ ಹೋರಾಟ ನಡೆದಿದ್ದು, ಸರಕಾರ ಗಮನ ಹರಿಸದೇ ನಮ್ಮ ಭಾಗದ ಜನರ ತಾಳ್ಮೆಯನ್ನು ನೋಡುತ್ತಲಿದೆ, ಈಗಿನ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಿಸದಿದ್ದರೆ, ಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಕಾಶಿನಾಥ ಕುರಣಿ, ಉಪಾಧ್ಯಕ್ಷರಾದ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಹೋರಾಟಗಾರರಾದ ರಮೇಶ ಕರನೂರೆ, ಬಸವರಾಜ ಸಾಜನೆ, ಭೀಮಾ ಶಿರಗಾವೆ, ರಮೇಶ ಡಂಗೇರ, ಮಾಳಪ್ಪಾ ಕರೆಣ್ಣವರ, ಸತ್ಯಪ್ಪಾ ಕಾಂಬಳೆ, ವಿಜಯ ರಾನೂಗೋಳ, ರಫೀಕ್ ಪಠಾಣ, ಖಾನಪ್ಪಾ ಬಾಡ, ಶಿವಾನಂದ ಕೋಳಿ, ಸುರೇಶ ಕೋಳಿ, ಸಿದ್ದಪ್ಪಾ ಕೋಳಿ, ಅಣ್ಣಪ್ಪಾ ಮೋಡಕೆ, ಸುಭಾಶ ಸಾಜನೆ, ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು...
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು