ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಚಿಕ್ಕೋಡಿ /ಮಿರಜ್ ರಸ್ತೆ "BK college" ಎದುರಲ್ಲಿ ಕಳೆದ ತಿಂಗಳ ಹಿಂದೆ ರಸ್ತೆ ಅಪಘಾತ ನಡೆದಿದ್ದು ಆ ಅಪಘಾತದಲ್ಲಿ ವಿದ್ಯಾರ್ಥಿಯ ಸಾವು ಸಂಭವಿಸಿದೆ.ಕಾರಣ 20 ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳು ಸೇರಿ ಇಲ್ಲಿ ವಾಹನಗಳು ತುಂಬಾ ಜೋರಾಗಿ ಸಂಚರಿಸುತ್ತಿದ್ದು ಇನ್ನೂ ಮುಂದೆ ಯಾವುದೇ ಅಪಘಾತಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆವಾಗಿ ವಾಹನಗಳು ನಿಧಾನವಾಗಿ ಸಂಚರಿಸಲು ರೋಡ ಬ್ರೇಕ್ ಹಾಕುವಂತೆ ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರತಿಭಟನೆ ನಡೆಸಿದರು.ಸ್ಥಳಕ್ಕೆ ಪೊಲೀಸ ಇಲಾಖೆ ಮತ್ತು ತಹಸೀಲ್ದಾರ್ ಬೇಟಿ ನೀಡಿ ಪ್ರತಿಭಟನೆಗೆ ಸ್ಪಂದಿಸಿ ಜೆಸಿಬಿ ಮೂಲಕ ರೋಡನ್ನು ಅಗೆದರು. ರೋಡ ಬ್ರೇಕ್ ರೀತಿ ಇರುವ ಗುಂಡಿಯಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದೆ.ತಕ್ಷಣವೇ ವಿದ್ಯಾರ್ಥಿಗಳ ರಕ್ಷಣೆಗೆ ಹಾಗೂ ಸವಾರರ ಹಿತಾಸಕ್ತಿಗೆ ಅಗೆದ ಗುಂಡಿಯನ್ನು ಮುಚ್ಚಿ ರೋಡ ಬ್ರೆಕ್ ಹಾಕಿ ಪಾದಚಾರಿ ಮಾರ್ಗ ರಚಿಸಿ ಎಂದು ಚಿಕ್ಕೋಡಿ ತಾಲೂಕು ಹಸಿರು ಸೇನೆ ಅಧ್ಯಕ್ಷರು ಮಂಜುನಾಥ ಪರಗೌಡರು ಎಲ್ಲರ ಕಾಳಜಿ ವಹಿಸುತ್ತಾ ಸಂಭಂದ ಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು