ವಿಷಯಕ್ಕೆ ಹೋಗಿ
ಶಾಲಾ ಮಕ್ಕಳು ಹಾಗೂ ಪ್ರಯಾಣಿಕರು ಬಸ್ಸಿನಲ್ಲಿ ಸಂಚರಿಸುವುದು ತುಂಬಾ ಅಪಾಯಕಾರಕವಾಗಿದೆ, ರಾಜ್ಯ ಸಾರಿಗೆ ಸಂಸ್ಥೆ ಸಾವಿರಾರು ಶಾಲಾ ಮಕ್ಕಳಿಗೆ ಪಾಸ್ ನೀಡುತ್ತಲಿದೆ ಆದರೆ ಸಮರ್ಪಕ ಬಸ್ಸುಗಳ ವ್ಯವಸ್ಥೆ ಇಲ್ಲ, ಜನರು ಶಾಲಾ ಮಕ್ಕಳು ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಸಂಚರಿಸುತ್ತಿದ್ದಾರೆ, ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು, ಮುಂಜಾನೆ ಮತ್ತು ಸಂಜೆ ಶಾಲಾ ಸಮಯಕ್ಕೆ ಎಲ್ಲ ಬಸ್ಸುಗಳು ಪೂರ್ಣವಾಗಿ ತುಂಬುತ್ತಿರುವುದರಿಂದ, ಇಂತಹ ಸಂಧರ್ಭಗಳು ಹೆಚ್ಚಿಗೆಯಾಗಿ ಕಂಡು ಬರುತ್ತಲಿದೆ. ಹೇಳಿಕೆ : ರಾಜ್ಯ ಸಾರಿಗೆ ಸಂಸ್ಥೆಯವರಿಗೆ ಎಲ್ಲ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಸಾಗಿಸಲು ಆಗದಿದ್ದರೆ, ಯಾವ ಕಾರಣಕ್ಕೆ ಬಸ್ ಪಾಸ್ ಕೊಡುತ್ತಿರುವಿರಿ ?, ಕೂಡಲೇ ಶಾಲಾ ಮಕ್ಕಳಿಗಾಗಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಇವರು ಎಚ್ಚರಿಸಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು