ವಿಷಯಕ್ಕೆ ಹೋಗಿ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಕವಯಿತ್ರಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರು ಬರೆದ ಕನ್ನಡ ವರ್ಣಮಾಲೆಗಳ ಅಕ್ಷರಗಳಲ್ಲಿ ವಿಶಿಷ್ಟ ವಾಗಿ ರಚಿತವಾದ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ದಾಖಲೆಗೆ ಸೇರ್ಪಡೆಗೊಂಡ "ಅಕ್ಷರ ಭಾಗ್ಯ" ಚುಟುಕು ಕಾವ್ಯ ಗ್ರಂಥವನ್ನು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದ ಡಾ.ಚಂದ್ರಶೇಖರ್ ಕಾಳನ್ನವರ್ ಹೊಲದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಇವರುಗಳ ಸಯುಂಕ್ತ ಆಶ್ರಯದಲ್ಲಿ ಎಳ್ಳ ಅಮಾವಾಸ್ಯೆ ಹಾಗೂ ರೈತ ದಿನಾಚರಣೆ ನಿಮಿತ್ಯ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ ಪ್ರತಿ ವಿಭಾಗದ ಸಂಶೋಧಕರಾದ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಬಿಡುಗಡೆ ಮಾಡಿದರು,ಬಾದಾಮಿ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಪಟ್ಟಣಶೆಟ್ಟರ್,ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಶ್ರೀ ಸಿದ್ಧರಾಮ ಮನಹಳ್ಳಿ,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಹಣಮಂತ ಮಾವಿನಮರದ ,ನಿವೃತ್ತ ತಹಸಿಲ್ಧಾರ ಶ್ರೀ ಬೀಮಪ್ಪ ತಳವಾರ,ಡಾ.ಸಿ ಎಮ್ ಜೋಶಿ,ವೇಟ್ ಲಿಪ್ಟಿಂಗದಲ್ಲಿ ಸುವರ್ಣ ಪದಕ ವಿಜೇತ ಶ್ರೀ ಸುರೇಂದ್ರ ಬಸುಪಟ್ಟದ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅದ್ಯಕ್ಷ ರಾದ ಶ್ರೀ ಶಿವಾನಂದ ಶೆಲ್ಲಿಕೇರಿ ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಆನಂದ ದಲಬಂಜನ್,ಬಿಟಿಡಿಎ ಸಿಇಒ ಶ್ರೀ ಮಲ್ಲಿಕಾರ್ಜುನ ಶೆಲ್ಲಿಕೇರಿ,ಗುಳೇದಗುಡ್ಡ ತಾಲೂಕ ಕಸಾಪ ಅಧ್ಯಕ್ಷರಾದ ಶ್ರೀ ಎಚ್.ಎಸ್.ಗಂಟಿ,ಶ್ರೀ ಪಿಂಟು ರಾಠೋಡ,ವಕೀಲರಾದ ಶ್ರೀ ವೀರಯ್ಯ ಮಣ್ಣೂರಮಠ,ಶ್ರೀ ಕುಲಕರ್ಣಿ ಕವಡಿಮಠ,ಡಾ.ಸಂತೋಷ ಕಾಳನ್ನವರ್,ಶ್ರೀ ಸಿದ್ಧು ಕುಬಗಟ್ಟಿ,ಕ.ಸಾ.ಪ.ಮಾ.ಕಾರ್ಯದರ್ಶಿ ಶ್ರೀ ಸಂಗಮೇಶ ಬಡಿಗೇರ, ಶ್ರೀ ಯಲ್ಲಪ್ಪ ಶೆಡ್ಲಿಗೇರಿ, ಡಾ.ಚಂದ್ರಶೇಖರ ಕಾಳನ್ನವರ್,ಶ್ರೀ ಮಂಜಯ್ಯ ಗಲಗಲಿಮಠ.ಮುಂತಾದವರು ಪಾಲ್ಗೋಂಡಿದ್ಧರು.-----------
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು