ವಿಷಯಕ್ಕೆ ಹೋಗಿ
ಆಧಾರ್ ಕಾರ್ಡ್ ಫ್ಯಾನ್ ಕಾರ್ಡ್ ಲಿಂಕ್ ಮಾಡಲು 1000.ದಂಡ ವಿಧಿಸುತ್ತಿರುವ ಕುರಿತು. ಚಿಕ್ಕೋಡಿ ತಾಲೂಕು ಹಸಿರು ಸೇನೆ ಅಧ್ಯಕ್ಷರು ಮಂಜುನಾಥ ಬಾಳಗೌಡ ಪರಗೌಡರು ಮತ್ತು ರೈತರು ಸೇರಿ ಮನವಿ ಮಾಡಿದರು. . ಆಧಾರ್ ಕಾರ್ಡ್ ಫ್ಯಾನ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡ ಮಾಡಿದ್ದು ರೈತರಿಗೆ ಬಡವರಿಗೆ ಕೂಲಿಕಾರ್ಮಿಕರಿಗೆ ಚಾಲಕರಿಗೆ ತುಂಬಲು ಅಡಚಣೆ ಆಗುತ್ತಿದ್ದು.ಕೂಲಿ ಮಾಡಿ ತಿನ್ನುವ ಜೀವನಕ್ಕೆ ತುಂಬಾ ತೊಂದರೆ ಆಗುತ್ತಿದೆ.1000 ರೂಪಾಯಿ ಅಂದ್ರೆ ಮೂರು ನಾಲ್ಕು ದಿನದ ಕೂಲಿ ಕೊಡಬೇಕಾಗುತ್ತಿದೆ.ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲಾ ರೈತರು ಸಾಲದಲ್ಲಿ ಮುಳುಗಿದ್ದಾರೆ.ಚಾಲಕರು ವಾಹನ ಮಾಲೀಕರು ತಾವು ಜೀವನ ನಡೆಸಲು ತೆಗೆದ ಸಾಲ ತುಂಬುತ್ತಾ ಜೀವನ ನಡೆಸುತ್ತಿದ್ದಾರೆ.ಅಂತಹದರಲ್ಲಿ ಈ ರೀತಿ ದಂಡ ವಿಧಿಸಿ ಬಡವರ ಜೀವನಕ್ಕೆ ತೊಂದರೆ ಆಗಬಾರದು..ಕೂಲಿಕಾರ್ಮಿಕರು ದಿನದ ಕೂಲಿ ನಂಬಿ ಜೀವನ ನಡೆಸುತ್ತಿದ್ದಾರೆ.ಹಿಂದೆ ತಾವು ಉಚಿತವಾಗಿ ಲಿಂಕ್ ಮಾಡಲು ಆದೇಶ ಹೊರಡಿಸಿದ್ದು ಪ್ರತಿಯೊಬ್ಬ ನಾಗರಿಕರಿಗೆ ಮಾಹಿತಿ ಮುಟ್ಟದ ಕಾರಣ ತಾವುಗಳು ಜನರ ಹಿತಾಸಕ್ತಿಗೋಸ್ಕರ ಮುಂದಿನ ಆರು ತಿಂಗಳು ಕಾಲ ಉಚಿತ ಮಾಡಿ ಆಮೇಲೆ ದಂಡದ ಆದೇಶ ಹೊರಡಿಸಿ ಇಲ್ಲವಾದಲ್ಲಿ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈ ಗೋಳ್ಳಬೇಕಾಗುತ್ತದೆ.ಎಂದು ಚಿಕ್ಕೋಡಿ ತಾಲೂಕು ಹಸಿರು ಸೇನೆ ಅಧ್ಯಕ್ಷರು ಮಂಜುನಾಥ ಬಾಳಗೌಡ ಪರಗೌಡರು ಎಚ್ಚರಿಕೆ ಗಂಟೆ ಬಾರಿಸಿದ್ದಾರೆ .ನಿಜಕ್ಕೂ ಮಂಜುನಾಥ ಪರಗೌಡರು ರೈತರ ಬಡವರ ಚಾಲಕರ ಮಾಲೀಕರ ಕೂಲಿಕಾರ್ಮಿಕರ ಜನ ಸಾಮಾನ್ಯರ ಪರವಾಗಿ ಧ್ವನಿ ಎತ್ತಿದ್ದಾರೆ. ಈ ವೇಳೆ ಜ್ಯೋತಿಬಾ ಮಗದುಮ. ಬಾಳಗೌಡ ಪಾಟೀಲ.ಸತ್ಯಪ್ಪ ದೇವಾಣಗೊಳ.ರಫೀಕ್ ಪಠಾಣ್.ಇನ್ನಿತರರು ರೈತರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು