ವಿಷಯಕ್ಕೆ ಹೋಗಿ
ಚಿಕ್ಕೋಡಿ : ಪಟ್ಟಣದಲ್ಲಿ ಜೈನ ಬಾಂಧವರು ಭಗವಾನ್ ಮಹಾವೀರರ 2,622ನೇ ಜಯಂತಿಯನ್ನು ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಮುಂಜಾನೆ ಧ್ವಜಾರೋಹಣ, ಮಹಾವೀರರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಾದ್ಯಘೋಷ ಮುಂತಾದ ಕಾರ್ಯಕ್ರಮಗಳು ನಡೆದವು. ಮಹಾವೀರ ಭಗವಾನರ ಪಲ್ಲಕ್ಕಿ ಉತ್ಸವ ಕುಂಭಮೇಳದೊಂದಿಗೆ ಮತ್ತು ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಾದ ಜೈನ್ ಪೇಟ, ಗುರುವಾರ ಪೇಟ, ಕೆ.ಸಿ.ರಸ್ತೆ, ಮಹಾವೀರ ವೃತ್ತ, ಎನ್.ಎಮ್.ರಸ್ತೆ, ಮಹಾವೀರ ನಗರ, ಜಯ ನಗರ, ಹೊಸಪೇಟ ಗಲ್ಲಿ, ಓತಾರಿ ಗಲ್ಲಿ, ಮುಖಾಂತರ ವಾದ್ಯ ಮೇಳಗಳೊಂದಿಗೆ ನಡೆಯಿತು. ಜೈನ ಮುಖಂಡ ವರ್ಧಮಾನ ಸದಲಗೆ ಮತ್ತು ಎಸ್. ಟಿ. ಮುನ್ನೋಳಿ ಇವರ ನೇತೃತ್ವದಲ್ಲಿ ಕಾರ್ಯಕ್ರಮವು ಶಾಂತಿಯುತವಾಗಿ ನೆರವೇರಿತು. ನಂತರ ಮಹಿಳೆಯರಿಂದ ನಾಮಕರಣ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ ಜರುಗಿತು.ಈ ಸಂದರ್ಭದಲ್ಲಿ ದರ್ಶನ ಉಪಾಧ್ಯ, ಸುಧರ್ಶನ ಉಪಾಧ್ಯೆ, ರಾವಸಾಹೇಬ ಕೇಸ್ತೆ, ಚಂದ್ರಕಾಂತ ಹುಕ್ಕೇರಿ, ಬಾಹುಬಲಿ ಹುಕ್ಕೇರಿ, ಅನೀಲ ಸದಲಗೆ, ಡಾ. ಪದ್ಮರಾಜ ಪಾಟೀಲ, ಶೀತಲ ಹಜಾರೆ, ಬಾಹುಬಲಿ ನಸಲಾಪುರೆ, ದೇವಾಕಾಂತ ಶೆಟ್ಟಿ, ಭರತ ಬೆಡಕಿಹಾಳೆ, ಅನೀಲ ಅಮ್ಮಣ್ಣವರ, ರೋಖಡೆ ಪರಿವಾರ, ವಿನಯ ಕಾಗೆ, ರಾಜು ಬೋರಗಾವೆ, ಮಹೇಂದ್ರ ಶಹಾ, ಸುಭಾಷ ಉತ್ತೂರೆ, ರಾಜೇಂದ್ರ ಪಾಟೀಲ, ಶಾಂತಿನಾಥ ಶೆಟ್ಟಿ, ಬ್ರಹ್ಮನಾಥ ಭೋಜಕರ, ಶಿರೀಶ ಮೆಹತಾ, ರಂಜೀತ ಸಂಗ್ರೋಳಿ, ಬಿ.ಬಿ.ಹಜಾರೆ ಗುರುಗಳು, ಶ್ರೀಪಾಲ ಉಪಾಧ್ಯೆ ಗುರುಜಿ, ವಾಸುದೇವ ಮಿರಜಿ,ಮನೋಜ ಇಂಗಳೆ, ಪಾರ್ಶ್ವನಾಥ ಮಾಂಗೂರೆ, ಮಹಾವೀರ ದಾಂಡಗೆ, ರಾಜು ಲಡಗೆ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜೈನ ಬಾಂಧವರು, ಮಹಿಳೆಯರು ಪಾಲ್ಗೊಂಡಿದ್ದರು.ಮಲಿಕವಾಡ, ಸದಲಗಾ, ಭೋಜ, ಬೋರಗಾಂವ, ಶಮನೇವಾಡಿ, ಬೇಡಕಿಹಾಳ, ಗಳತಗಾ, ಬೋರಗಾಂವ, ಕಲ್ಲೋಳ, ಮಾಂಜರಿ, ಇಂಗಳಿ, ಮಾಂಗೂರ, ಕಾರದಗಾ ಸೇರಿದಂತೆ ವಿವಿಧ ವಿವಿಧ ಗಡಿಗ್ರಾಮಗಳಲ್ಲಿ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು