ವಿಷಯಕ್ಕೆ ಹೋಗಿ
ಚಿಕ್ಕೋಡಿ ಸದಲಗಾ ವಿಧಾನ ಸಭಾ ಮತಕ್ಷೇತ್ರ ಚುನಾವಣೆಗೆ ರೈತ ಸಂಘದ ಅಭ್ಯರ್ಥಿ ಶ್ರೀ ಮಂಜುನಾಥ ಬಾಳು ಪರಗೌಡರು ನಾಮಪತ್ರ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂದು ಹಸಿರು ಸೇನೆ ರೈತ ಸಂಘದ ಪರವಾಗಿ ಶ್ರೀಯುತ ಮಂಜುನಾಥ ಪರಗೌಡರು ಇಂದು ಬೆಳಿಗ್ಗೆ ತಮ್ಮ ಕೇರೂರ ಗ್ರಾಮದ ಮಾಹಾದೇವ ಮಂದಿರದ ಬಳಿ ಬೆಳಗ್ಗೆ 9-30 ಕ್ಕೆ ತಮ್ಮ ಬೆಂಬಲಿಗರಿಗೆ ಕರೆಕೊಟ್ಟು, ಇವತ್ತು ಶುಭ ಮಹೂರ್ತ ದೊಂದಿಗೆ 1.:37 ಮಧ್ಯಾಹ್ನ ಸುಮಾರಿಗೆ ಚಿಕ್ಕೋಡಿ ತಹಸಿಲ್ದಾರ ಕಚೇರಿಯಲ್ಲಿ ತಮ್ಮ ನಾಮ ಪತ್ರವನ್ನು ಸಲ್ಲಿಸಿದರು. ತದ ನಂತರ ಮಾದ್ಯಮ ದೊಂದಿಗೆ ಮಾತನಾಡಿ ರೈತ ಸಂಘದಿಂದ ನಾವು ಚುನಾವಣೆಗೆ ಇಳಿದಿರುವುದರಿಂದ ಯಾವದೇ ರೀತಿಯ ಸ್ವಾರ್ಥ ಇರುವುದಿಲ್ಲ, ನಿಸ್ವಾರ್ಥ ಸೇವೆಗೋಸ್ಕರ ಎಲ್ಲರೂ ಬೆಂಬಲ ನೀಡಿ, ಪ್ರಾಮಾಣಿಕ ರಾಜಕಾರಣ ಮಾಡುತ್ತೇವೆ. ಪ್ರಾಮಾಣಿಕ ವಾಗಿ ಎಲ್ಲರೂ ಕೂಡ ಬರುವ ಚುನಾವಣೆಗೆ ಮತದಾನ ಮಾಡಿ, ಎಂದು ತಿಳಿಸುತ್ತಾ.ಜೈ ಜವಾನ ಜೈ ಕಿಸಾನ ಎಂದು ಘೋಷಿಸುತ್ತಾ ನಮಸ್ಕರಿಸಿದರು.ಸತ್ಯಪ್ಪ ದೇವಾನಗೊಳ,ಜ್ಯೋತಿ ಮಗದುಮ್ಮ ,ಬಾಳಗೌಡ ಪಾಟೀಲ, ಶಂಕರ ಹೆಗಡೆ, ಬಾಬು ಹವಾಲ್ದಾರ್, ಯೋಗೇಶ್ ಬನಗೆ,.ಮಾರುತಿ ಮಾಳಿ, .ಬಾಪು ಕುತ್ತೆ.,ಕೆದಾರಿ ಮಾಂಗನುರೆ,. ಇಟಪ್ಪಾ ಬಿಳಗೆ,. ಶಿವಪ್ಪ ಬಾನಕರೆ.,ಸದಾಶಿವ ಪಾಟೀಲ,.ಹಾಗೂ ಎಲ್ಲ ರೈತರು ಉಪಸ್ಥಿತರಿದ್ದರು
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು