ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಹಸಿಲ್ದಾರ್ ಕಾರ್ಯಲಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಿಂಗಳ ಸಭೆಯನ್ನು ಕರೆಯಲಾಗಿತ್ತು ನೂತನವಾಗಿ ಆಗಮಿಸಿದ ಮಾನ್ಯ ತಹಸಿಲ್ದಾರ್ ಸುರೇಶ್ ಮುಂಜೆ ಸಾಹೇಬರನ್ನು ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಸಂಚಾಲಕರು ಸೇರಿಕೊಂಡು ಸತ್ಕಾರ ಮಾಡಿದರು ಈ ಸಂದರ್ಭದಲ್ಲಿ ಸರ್ಕಾರದ ಆಹಾರ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿ ಎಲ್ಲ ನ್ಯಾಯಬೆಲೆ ಅಂಗಡಿಗಳ ಸಂಚಾಲಕರು ಸಹಕರಿಸಬೇಕೆಂದು ತಾಲೂಕಿನ ತಹಶೀಲ್ದಾರ್ ಸುರೇಶ್ ಮುಂಜೆ ರವರು ಹೇಳಿದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಮಚಂದ್ರ ಹೆಗಡೆ ಕಾರ್ಯದರ್ಶಿಯಾದ ವಸಂತ ಕಾಂಬಳೆ ಸಂಚಾಲಕರಾದ ಸಲೀಂ ಅತ್ತಾರ್ ಎಸ್ ಎಲ್ ಕಟ್ಟಿ ಗಜಾನನ್ ಕೊಕಾಟೆ ವಿಲಾಸ್ ಮಿರ್ಜೆ ಕೇದಾರಿ ಮಾಳಿ ಅರುಣ್ ಮಾವರ್ಕರ್ ಮಹಾದೇವ್ ಹುಕ್ಕೇರಿ ಸಂತೋಷ್ ಮತ್ತು ತಾಲೂಕು ನ್ಯಾಯಬೆಲೆ ಅಂಗಡಿಗಳ ಸಂಚಾಲಕರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು