ವಿಷಯಕ್ಕೆ ಹೋಗಿ
*ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ( KWJV) ಸಂಘಟನೆಯಿಂದ ಆಗಸ್ಟ್ 14, 2023 ಸೋಮವಾರ ರಂದು ನಾಡಿನ ಕಾರ್ಯನಿರತ ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಪ್ರತಿಭಟನೆಯ ಹೋರಾಟ* :- ಸ್ವಾತಂತ್ಯ್ರ ದೊರೆತು 76 ನೇ ವರ್ಷದತ್ತಾ ಸಾಗುತ್ತಿದ್ದರೂ ನಾಡಿನ ಕಾರ್ಯನಿರತ ಪತ್ರಕರ್ತರಿಗೆ ಇಂದಿಗೂ ಸ್ವಾತಂತ್ಯ್ರ ಹಾಗೂ ಮೂಲಭೂತ ಸೌಕರ್ಯ ದೊರೆಯದಿರುವುದು ದುರಾದೃಷ್ಟಕರ. ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಕರ್ತರುಗಳಿಗೆ ಕನಿಷ್ಠ ಸೇವಾಭದ್ರತೆ ಇಲ್ಲ, ಪತ್ರಕರ್ತರುಗಳಿಗೆ ರಕ್ಷಣೆ ಮರೀಚಿಕೆಯತ್ತಾ ಸಾಗುತ್ತಿದೆ, ಅಕ್ರಿಡೇಷನ್ ನೆಪದಲ್ಲಿ ವಾರ್ತಾ ಇಲಾಖೆ ಪತ್ರಕರ್ತರುಗಳ ಮಧ್ಯ ತಾರತಮ್ಯ ಹಾಗೂ ಅಸ್ಪೃಶ್ಯತೆ ನೀತಿ ಮಾಡುತ್ತಾ, ರಾಜ್ಯದಲ್ಲಿ ಹತ್ತು (10,000) ಸಾವಿರಕ್ಕೂ ಮೇಲ್ಪಟ್ಟು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದರೂ ಕೇವಲ 1500 ಪತ್ರಕರ್ತರಿಗೆ ಮಾತ್ರ ಪತ್ರಕರ್ತರ ಮಾನ್ಯತಾ ಪತ್ರ ನೀಡಿದ್ದು,ಇದರಲ್ಲಿ ಹವ್ಯಾಸಿ ಪತ್ರಕರ್ತರು 167, ಪತ್ರಿಕೆಯ ಮಾಲಿಕರು/ಸಂಪಾದಕರು 799, ಮಾಲಿಕರ ಹೆಂಡತಿ,ಮಕ್ಕಳು,ಅಳಿಯಂದಿರು ಸೇರಿ 134, ಒಟ್ಟು 1100 . ಇನ್ನುಳಿದಂತ 400 ಅಕ್ರಿಡೇಷನ್ ಕಾರ್ಡ್ ಗಳು, ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ದಿನ ಪತ್ರಿಕೆಯ ವರದಿಗಾರ ರೊಬ್ಬರಿಗೆ ಅಕ್ರಿಡೇಷನ್ ಪ್ರಸ್ತುತ ದೊರೆಯುತ್ತಿದೆ.ಜಿಲ್ಲೆಯ ಒಂದು ಪತ್ರಿಕೆಯಿಂದ ಒಬ್ಬರಿಗೆ ಈ ಸೌಲಭ್ಯ ದೊರೆತರೆ ಉಳಿದಂತ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅದೇ ಪತ್ರಿಕೆಯ ಪತ್ರಕರ್ತರ ಪಾಡೇನು. ಅವರೂ ಪತ್ರಕರ್ತರಲ್ಲವೆ ಅಥವಾ ನಕಲಿನಾ ಎಂಬುದರ ಕುರಿತು ಸ್ಪಷ್ಟನೇ ವಾರ್ತಾ ಇಲಾಖೆಯಿಂದ ದೊರೆಯಬೇಕಾಗಿದೆ. ಅಕ್ರಿಡೇಷನ್ ನಿಯಮ 9 ರ ನಿಯಮದಲ್ಲಿ "ಮಾನ್ಯತೆಯು ಸುದ್ದಿ ಮಾಧ್ಯಮದ ಪ್ರತಿನಿಧಿಗಳಿಗೆ ಅಧಿಕೃತ ಸ್ಥಾನಮಾನ ನೀಡುವುದಿಲ್ಲ. ಬದಲಿಗೆ ಇಂತಹ ಮಾಧ್ಯಮ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಂದಷ್ಟೇ ಗುರುತಿಸುತ್ತದೆ ಜೊತೆಗೆ ಮಾಧ್ಯಮ ಪ್ರತಿನಿಧಿಗಳು, ಪ್ರತಿನಿಧಿಸುವ ಮಾಧ್ಯಮಗಳಲ್ಲಿ ಮತ್ತು ಪರಿಚಯ ಪತ್ರಗಳಲ್ಲಿ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದವರು ಎಂದು ನಮೂದಿಸುವುದು ನಿಯಮ ಬಾಹಿರ ಎಂದು ಸ್ಪಷ್ಟವಾಗಿದ್ದರೂ ಇವರುಗಳಿಗೆ ಸರ್ಕಾರದಿಂದ ಹೆಚ್ಚಿನ ಆಧ್ಯತೆ,ವಿಧಾನಸೌಧ,ವಿಕಾಸಸೌಧ,ಉತ್ಸವಗಳ ಪ್ರವೇಶವಿರಬಹುದು,ಮೀಡಿಯಾ ಕಿಟ್ ವಿತರಣೆಯಾಗಿರಬಹುದು ಹಾಗೂ ಇನ್ನೀತರ ಸೌಲಭ್ಯಗಳಲ್ಲೂ ಮಾನ್ಯತೆ ಹೊಂದಿದವರಿಗೆ ಮಾತ್ರ ಎಂದು ಉಳಿದಂತ ಪತ್ರಕರ್ತರಿಗೆ ಕಿವಿಗೆ ಇಷ್ಟು ವರ್ಷಗಳ ಕಾಲ ಮಲ್ಲಿಗೆ ಹೂ ವಿಡುತ್ತಾ ಸಾಗಿರುವುದು ಕಾನೂನು ಸ್ಪಷ್ಟ ಉಲ್ಲಂಘನೆಯಾಗಿರತ್ತದೆ. ಆರ್.ಎನ್.ಐ. ಹೊಂದಿ ಕಾರ್ಯನಿರ್ವಹಿಸುವ ಪತ್ರಿಯೊಬ್ಬ ಪತ್ರಕರ್ತರು ಪತ್ರಕರ್ತರೇ.ಇವತ್ತು ವಾರ್ತಾ ಇಲಾಖೆಯಲ್ಲಿ ಬೇಕಾಬಿಟ್ಟಿಯಾಗಿ ಅಕ್ರಿಡೇಷನ್ ಕಾರ್ಡ್ ಸಿಕ್ಕ ಸಿಕ್ಕವರಿಗೆ ಅಂದರೆ ನಿಯಮಾನುಸಾರ ಪೂರ್ಣಾವಧಿಗೆ ಖಾಯಂ ನೇಮಕಾತಿ ಪತ್ರವಿರದಂತ ಅನೇಕರಿಗೆ ನೀಡಲಾಗಿದೆ. ಇನ್ನೂ ಕೆಲವರು ಆ ಸಂಸ್ಥೆಯನ್ನು ಬಿಟ್ಟಿದ್ದರೂ ಹಾಗೆ ಮುಂದುವೆರೆಸಿಕೊಂಡು ಅಕ್ರಿಡೇಷನ್ ದರ್ಬಾರ್ ಸಾಗಿಸುತ್ತಿದ್ದಾರೆ. ಈ ಕುರಿತು ನನ್ನ ಬಳಿ ಅನೇಕ ಸಾಕ್ಷಾಧಾರಗಳು ಇವೆ. ಇನ್ನೂ ಸಂಕಷ್ಟದಲ್ಲಿರುವ ಪತ್ರಕರ್ತರ ಮಸಾಶನ ನಿಯಮ 7 ರಲ್ಲಿ ವಾರ,ಪಾಕ್ಷಿಕ,ಮಾಸ ಹಾಗೂ ಇನ್ನೀತರ ಪತ್ರಿಕೆಗಳ ಪ್ರತಿನಿಧಿಗಳು ಮಾಸಾಶನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ಸ್ಪಷ್ಟವಾಗಿ ನಿಬಂಧನೆ ಹೊರಡಿಸಿರುವುದು ಕೂಡ ಕಾನೂನು ಬಾಹಿರ. ದಿನ ಪತ್ರಿಕೆಗಳ ರೀತಿಯಲ್ಲೇ ಇವರುನೂ Registrar of News Paper of India ವತಿಯಿಂದ ಪರವಾನಗೆ ಹೊಂದಿ ಪತ್ರಿಕೆಗಳನ್ನು ಹೊರತರುವ ಹಿನ್ನೆಲೆಯಲ್ಲಿ ಈ ಪ್ರತಿನಿಧಿಗಳಿಗೂ ಮಾಸಾಶನ ದೊರೆಯುವವರೆಗೂ ಧ್ವನಿ ವತಿಯಿಂದ ಹೋರಾಟ ನಿಲ್ಲೊಲ್ಲ. ಇನ್ನೂ ಮಾನ್ಯ ಸಿದ್ದರಾಮಯ್ಯನ ಸರ್ಕಾರ ರಾಜ್ಯಾಧ್ಯಂತ ಓಡಾಡಲು ಎರಡುವರೆ ಕೋಟಿ ಮಹಿಳೆಯರಿಗೆ,ವಿಧ್ಯಾರ್ಥಿನಿಯರಿಗೆ ಹಾಗೂ ಮಂಗಳಮುಖಿಯರಿಗೆ ಸೌಲಭ್ಯ ಒದಗಿಸಿರುವುದು ಸ್ವಾಗತಾರ್ಹ, ಆದರೆ ಕಳೆದ ಹಲವಾರು ವರ್ಷಗಳಿಂದ ಉಚಿತ ಬಸ್ ಪಾಸ್ ಗಾಗಿ ಹೋರಾಟ ನಡೆಸುತ್ತಾ ಮನವಿ ನೀಡಿದ್ದರೂ ಈ ಕುರಿತು ಕಾಳಜಿ ವಹಿಸದಿರುವುದು ದುರಾದೃಷ್ಟಕರ. ರಾಜ್ಯಾಧ್ಯಂತ ಬೇಡ ಕನಿಷ್ಠ ಜಿಲ್ಲಾ ವ್ಯಾಪ್ತಿಗಾದರೂ ಹತ್ತು ಸಾವಿರ ಪತ್ರಕರ್ತರಿಗೆ ಬಸ್ ಪಾಸ್ , ವಿಮಾ ಸೌಲಭ್ಯ ಹಾಗೂ ಮಜೀತಿಯಾ ವೇತನ ಮಂಡಳಿ ಆದೇಶದ ಅನುಷ್ಠಾನವನ್ನು ಕಾರ್ಮಿಕ ಆಯುಕ್ತರಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ಸರ್ಕಾರ ಈ ಕೂಡಲೇ ಕ್ರಮವಹಿಸಿ ಸಂಕಷ್ಟ,ಸಾವು ಬದುಕಿನ ಮಧ್ಯ ಜೀವನ ಸಾಗಿಸುತ್ತಿರುವ ವರದಿಗಾರರಿಗೆ ಆಸರೆಯಾಗಲೇಬೇಕೆಂಬ ವಿನಮ್ರ ಮನವಿಯೊಂದಿಗೆ . ಈ ಮನವಿಯ ಜೊತೆ ಬೆಂಗಳೂರು ಪೋಲಿಸ್ ಇಲಾಖೆಯು ದಿನಾಂಕ:-14/8/2023 ರ ಪ್ರೀಡಂ ಪಾರ್ಕಾ ನಲ್ಲಿ ನಡೆಸುವ ಪ್ರತಿಭಟನೆಯ ಹೋರಾಟಕ್ಕೆ ಸಂಘಟನೆಗೆ ನೀಡಿರುವ ಅನುಮತಿ ಪತ್ರದ ಪ್ರತಿ. *ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ. ಮೋ:-9535290300* *ವಿಶೇಷ ಗಮನಕ್ಕೆ:-ಸಮಸ್ತ ನಾಡಿನ ಕಾನಿಪ ಧ್ವನಿ ಸಂಘಟನೆಯ ರಾಜ್ಯ, ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳು ಮಾತ್ರ ಈ ಧರಣಿ ಪ್ರತಭಟನೆಯಲ್ಲಿ ಭಾಗಿಯಾಗಿ ನಮ್ಮ ಮೂಲಭೂತ ಹಕ್ಕಿಗಾಗಿ ಹೋರಾಡೋಣ. ಯಂದು ರಾಜ್ಯಾಧ್ಯಕ್ಷರಾದ್ ಬಂಗ್ಲೆ ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ...
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು