ವಿಷಯಕ್ಕೆ ಹೋಗಿ
ಚಿಕ್ಕೋಡಿ : ಸೆಪ್ಟೆಂಬರ್ 01-2023 ಇದು ವಿಶೇಷ ದಿನ. ಈ ದಿನದಂದು ಕರ್ನಾಟಕ ಯುವ ಧ್ವನಿ ಸೇವಾ ಸಂಘ ರಾಜ್ಯ ಕಮಿಟಿಯನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಉದ್ಘಾಟನೆ ಮಾಡಲಾಯಿತು ಈ ಸುದಿನದಂದು ಕರ್ನಾಟಕ ಯುವ ಧ್ವನಿ ಸೇವಾ ಸಂಘ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಯುವರಾಜ್ ಕಾಂಬಳೆ ಅವರು ಹುಟ್ಟಿದ ದಿನವು ಕೂಡ. ಹೌದು ನೂತನವಾಗಿ ಸ್ಥಾಪನೆಗೊಂಡ ಕರ್ನಾಟಕ ಯುವ ಧ್ವನಿ ಸೇವಾ ಸಂಘ ಉದ್ಘಾಟನೆ ದಿನವನ್ನು ಮತ್ತಷ್ಟು ಮೆರಗುಗೊಳಿಸಲು ಆಗಮಿಸಿದ ಗಣ್ಯಮಾನ್ಯರು , ವಿವಿಧ ಸಂಘಟನೆಯ ಮುಖಂಡರು ಜಿಲ್ಲಾ ಹಾಗೂ ತಾಲೂಕಾ ಮುಖಂಡರು, ಹಾಗೂ ಸಂಘಟನೆಯ ಎಲ್ಲಾ ಕುಟುಂಬದವರಿಗೆ ರಾಜ್ಯ ಕಮಿಟಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಿ ಗೌರವ ಸಲ್ಲಿಸಿದರು. ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಸ್ವಂತ ಸಂಘಟನೆ ಆರಂಭಿಸಿ, ಸಮಾಜಕ್ಕೆ ತನ್ನಿಂದ ಆದಷ್ಟು ಒಳ್ಳೆ ಕಾರ್ಯಗಳನ್ನು ಮಾಡುವ ಮತ್ತು ಅಭಿವೃದ್ದಿ, ಮಾಡಬೇಕಂದು ಹೊರಟಿರುವ ಯುವರಾಜ್ ಕಾಂಬಳೆ ಅವರಿಗೆ ತಮ್ಮೆಲ್ಲರ ಆಶೀರ್ವಾದ,ಬೆಂಬಲ ಸದಾ ಹೀಗೇ ಇರಲಿ. ಅಂತಾ ಬಯಸುತ್ತೇವೆ. ಕರ್ನಾಟಕ ಯುವ ಧ್ವನಿ ಸೇವಾ ಸಂಘವು ಸಮಾಜದಲ್ಲಿರುವ ಹಲವು ಉತ್ತಮ ಕಾರ್ಯಗಳೊಂದಿಗೆ ಮುಂದಿನ ದಿನಗಳಲ್ಲಿ ಪರಿಚಯಿಸುತ್ತದೆ ಎಂದು ಕರ್ನಾಟಕ ಯುವ ಧ್ವನಿ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಯುವರಾಜ್ ಕಾಂಬಳೆ ಅವರು ತಿಳಿಸಿದರು . ಈ ಸಂಘಟನೆಯನ್ನು ಇನ್ನು ಹೆಚ್ಚಿಗೆ ಬೆಳೆಸಲು ತಾವು ಬನ್ನಿ ತಮ್ಮವರನ್ನು ಕರೆತನ್ನಿ ಎಂಬ ಮೂಲ ಮಂತ್ರದಿಂದ ಕಾರ್ಯ ಈಗ ಪ್ರಾರಂಭ ವಾಗಿದೆ ಸಮಾಜದ ಬದಲಾವನೆ ಮತ್ತು ಅಭಿವೃದ್ದಿಗಾಗಿ ತಮ್ಮದು ಅಳಿಲು ಸೇವೆ ಸಲ್ಲಿಸಿ.ಕರ್ನಾಟಕ ಯುವಧ್ವನಿ ಸೇವಾ ಸಂಘವನ್ನು ಬೆಂಬಲಿಸಿ..ಬದಲಾವನೇ ಮುಡಿಸಿ. ಎಂದು ಸಂಘಟನೆಯ ಕಾರ್ಯದರ್ಶಿಗಳಾದ ಶ್ರೀ ನಾಗರಾಜ್ ಕೆರಬಾ ಅವರು ಮಾತನಾಡಿದರು ಕಾರ್ಯಕ್ರಮ ನಿರೂಪಣೆಯನ್ನು ಮುಕೇಶಕುಮಾರ ಲಂಬುಗೊಳ , ಅವರು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ರಾಕೇಶ್ ಶಿಂಗೆ, ಬೈರು ಕಾಂಬಳೆ , ಸಂತೋಷ್ ಹುಂಚಾಳೆ, ರಾಜು ಮಾದರ ವಿನೋದ್ ಗಸ್ತಿ, ಸಂದೀಪ್ ಕುರೆ , ಸದಾಶಿವ್ ಸನದಿ, ಪ್ರವೀಣ್ ಮೈತ್ರಿ, ವಿಶಾಲ್ ಲಂಬುಗೋಳ್ , ಚೇತನ್ ಕಾಣದಾಳ ಶಿವರಾಜ್ ರನ್ವೀರ್ ಸಿಂಗೆ , ಬಸವರಾಜ್, ಅರುಣ ವಡ್ಡರ್, ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಉಪಸ್ಥಿತರಿದ್ದರು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು