ವಿಷಯಕ್ಕೆ ಹೋಗಿ
ಶಚಿಕ್ಕೋಡಿ : ಶಾಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಸನ್ 2023 -24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶ್ರೀ ಅಮಾನುಲ್ಲಾ ಖಾದಿರ ಕಿಲ್ಲೇದಾರ್ ಹಿಂದಿ ಭಾಷಾ ಶಿಕ್ಷಕರಿಗೆ ಪ್ರಕಟವಾಗಿದೆ. ಅಥಣಿ ತಾಲೂಕಿನ ಪ್ರೌಢಶಾಲಾ ಹಿಂದಿ ಶಿಕ್ಷಕರ ಅಧ್ಯಕ್ಷರಾದ ಇವರು ಪ್ರಸ್ತುತ ಅಥಣಿ ತಾಲೂಕಿನ ಪ್ರೌಢಶಾಲೆ ಪಾರ್ಥನಹಳ್ಳಿ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಅಮಾನುಲ್ಲಾ ಖಾದಿರ್ ಕಿಲ್ಲೇದಾರ್ ಅವರು ಮೂಲತಃ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದವರು ಈಗ ಪ್ರಸ್ತುತ ತಾಲೂಕಿನ ಪಾರ್ಥನಹಳ್ಳಿ ಗ್ರಾಮ ಸರಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದು ಹತ್ತು ವರ್ಷಗಳಿಂದ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಸಪ್ಟೆಂಬರ್ 5 ರಂದು ಜರುಗಿರುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಿಗೆ ಮಾಂಜರಿ ಗ್ರಾಮದ ಗಣ್ಯ ವ್ಯಕ್ತಿಗಳಾದ ಶ್ರೀ ದಸ್ತಗಿರ್ ಮತ್ತೆಭಾಯಿ , ಸಿಕಂದರ್ ತಾಂಬೋಳಿ, ಬಾಬಾಸಾಹೇಬ್ ಕೋಥಳಿ, ಕಲಂದರ್ ಕಿಲ್ಲೇದಾರ, ಯಾಲೆಖಾನ್ ತರಾಳ, ಕ್ವಾಜಾಸಾಹೇಬ್ ಗೌಂಡಿ, ಜಾವೇದ್ ಮುಲ್ಲಾ , ಬುಡನ್ ಮುಲ್ಲಾ, ಬಾಬಾಸಾಹೇಬ್ ಗಣೇಶ್ವಾಡೆ, ಇನ್ನಿತರ ಸೇರಿ ಗೌರವ ಸತ್ಕಾರ ಸಮಾರಂಭ ಮಾಡಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು