ವಿಷಯಕ್ಕೆ ಹೋಗಿ
ಬೆಳಗಾವಿ : ಅಬಕಾರಿ ಇಲಾಖೆಯ ದಾಳಿ, ಬೆಳಗ್ಗೆ 3:30 ಘಂಟೆಗೆ ಸುವರ್ಣ ಸೌಧ ಬಳಿಯ ಎನ್ಎಚ್4 ನಲ್ಲಿ ದಾಳಿ ಮಾಡಿ ಭಾರತ್ ಬೆಂಜ್ ವಾಹನ ಸಂಖ್ಯೆ ಕೆ ಎ 25 ಎ ಎ 6469 ರಲ್ಲಿ ಅಕ್ರಮವಾಗಿ ಗೋವಾ ರಾಜ್ಯದಿಂದ ಸಾಗಾಣಿಕೆ ಮಾಡುತ್ತಿದ್ದ 208 ರಟ್ಟಿನ ಪೆಟ್ಟಿಗೆಗಳಲ್ಲಿ 18 ವಿವಿಧ ನಮೂನೆಯ ಮಧ್ಯ ಹಾಗೂ ಬಿಯರ್ ವಶಪಡಿಸಿ ಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿತನಾದ ಉತ್ತರ ಪ್ರದೇಶದ ವಾರಣಾಸಿಯ ವೀರೇಂದ್ರ ಕಲ್ಪನಾಥ್ ಮಿಶ್ರಾ ವಯಸ್ಸು 34 ವಶಕ್ಕೆ ಪಡೆಯಲಾಗಿದೆ. ಮಧ್ಯದ ಒಟ್ಟು ಮೌಲ್ಯ 28 ಲಕ್ಷ 4 ಸಾವಿರ ಹಾಗೂ ವಾಹನದ ಮೌಲ್ಯ 25 ಲಕ್ಷ ಹೀಗೆ ಒಟ್ಟು ಪ್ರಕರಣದ ಮೌಲ್ಯ 53 ಲಕ್ಷ 4 ಸಾವಿರ ರೂಪಾಯಿ ಆಗುತ್ತದೆ. ಆರೋಪಿತನನ್ನು ನ್ಯಾಯಾಂಗ ಬಂಧನ ಕೆ ವಳಪಡಿಸಲಾಗಿದೆ . ಡಾಕ್ಟರ್ ವೈ ಮಂಜುನಾಥ್ ಅಪರ ಅಬಕಾರಿ ಆಯುಕ್ತರು ಬೆಳಗಾವಿ, ಫಿರೋಜ್ ಖಾನ್ ಕಿಲ್ಲೆದಾರ್ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ, ವನಜಾಕ್ಷಿ ಎಂ ಅಬಕಾರಿ ಉಪ ಆಯುಕ್ತರು ಬೆಳಗಾವಿ ದಕ್ಷಿಣ ಜಿಲ್ಲೆ ಇವರ ಮಾರ್ಗದರ್ಶನದಲ್ಲಿ ವಿಜಯ್ ಕುಮಾರ್ ಹಿರೇಮಠ್ ಅಬಕಾರಿ ಅಧೀಕ್ಷಕರು ನೇತೃತ್ವದಲ್ಲಿ ರವಿ ಮುರುಗೋಡ್ ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ರವೀಂದ್ರ ಹೊಸಳ್ಳಿ ಅಬಕಾರಿ ನಿರೀಕ್ಷಕರು ಹಾಗೂ ಎಸ್ ಹೆಚ್ ಸಿಂಗಾಡಿ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯವರಾದ ಬಿಎಸ್ ಅಟಗಲ್ ಮಹದೇವ್ ಕಟಿಗಣ್ಣನವರ್ ಚಾಲಕರಾದ ಸೈಯದ್ ಜಲಾನಿ ಇವರ ತಂಡವು ದಾಳಿ ನಡೆಸಿ ಯಶಸ್ಸು ಗೊಂಡಿದ್ದಾರೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು