ವಿಷಯಕ್ಕೆ ಹೋಗಿ
ಚಿಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಬಸ್ ತಡೆದು ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ*. ಕಳೆದ ಎರಡು ತಿಂಗಳಿಂದ ಬಸ್ ಗಳು ತುಂಬಿ ಬರುತ್ತಿದ್ದು ಬಸ್ಸಿನಲ್ಲಿ ಜಾಗವಿಲ್ಲ ಎಂದು ಡ್ರೈವರ್ ಕಂಡೆಕ್ಟರ್ ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೆ ಹೋಗುತ್ತಿವೆ.ಶಾಲಾ ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿ ಆಗುತ್ತಿದೆ. ಎಂದು ಬಸ್ ತಡೆದು ಪ್ರತಿಭಟನೆಗೆ ಮುಂದಾದರು.ನಂತರ ಚಿಕ್ಕೋಡಿ ತಾಲೂಕಾ ರೈತ ಸಂಘದ ಅಧ್ಯಕ್ಷರು ಮಂಜುನಾಥ ಪರಗೌಡರಿಗೆ ವಿಧ್ಯಾರ್ಥಿಗಳು ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.ಸ್ಥಳಕ್ಕೆ ಬಂದ ಮಂಜುನಾಥ ಪರಗೌಡರು ಪೋಲಿಸ್ ಇಲಾಖೆಗೆ ವಿಷಯ ತಿಳಿಸಿ ಡ್ರೈವರ್ ಮತ್ತು ಕಂಡೆಕ್ಟರ್ ಗೆ ಸಮಸ್ಯೆ ಕೇಳಿ ಘಟಕದ ವ್ಯವಸ್ಥಾಪಕರಿಗೆ ಮಾತನಾಡಿ ನಾಳೆಯಿಂದ ವಿಧ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಕೇರೂರ ಕಾಡಾಪೂರ ಕೆಂಪಟ್ಟಿ ಹಣಬರಟ್ಟಿ ಗ್ರಾಮಗಳಿಗೆ ಬಸ್ ಸೇವೆ ಕಲ್ಪಿಸಲು ತಿಳಿಸಿದರು. ಇಲ್ಲವಾದಲ್ಲಿ ಚಿಕ್ಕೋಡಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡುವುದಾಗಿ ಚಿಕ್ಕೋಡಿ ತಾಲೂಕು ರೈತ ಸಂಘದ ಅಧ್ಯಕ್ಷರು ವ್ಯವಸ್ಥಾಪಕರಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.ಎಲ್ಲಾ ವಿದ್ಯಾರ್ಥಿಗಳಿಗೆ ಮಾತನಾಡಿ ನಾಳೆಯಿಂದ ಬಸ್ ಬರತ್ತೆ ಎಂದು ತಿಳಿ ಹೇಳಿ ಬಸ್ ಹತ್ತಿಸಿದರು.ಸ್ಥಳಕ್ಕೆ ಬಂದ ಪೊಲೀಸ್ ಇಲಾಖೆ ಅಹಿತಕರ ಘಟನೆ ನಡೆಯದಂತೆ ವಿದ್ಯಾರ್ಥಿಗಳ ಜೊತೆ ಮಾತನಾಡಿ ಬಸ್ ಕಳಿಸಿದರು. ಈ ಸಮಯದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಧ್ಯಕ್ಷರು ವಿಠ್ಠಲ್ ವಾಳಕೆ. ಮತ್ತು ನೂರಾರು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು