ವಿಷಯಕ್ಕೆ ಹೋಗಿ
ನಿಪ್ಪಾಣಿ : ನಕಲಿ ವೈದ್ಯನ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ನಡೆದಿದೆ. ಶೇಜಲ್ ಅನಿಕೇತ ಮಾಳಿ(22) ಮೃತ ಗರ್ಭಿಣಿ .ಆರ್‌ಎಂಪಿ ವೈದ್ಯ ಮಹಾವೀರ ಬಂಕಾಪುರೆ ಎಂಬಾತನಿಂದ ಅಚಾತುರ್ಯ ನಡೆದಿದ್ದು, ಹೆರಿಗೆಗೆಂದು ಗರ್ಭಿಣಿ ಶೇಜಲ್ ಮಾಳಿ ಬಂಕಾಪುರೆ ಆಸ್ಪತ್ರೆ ಬಂದಿದ್ದರು. ಗರ್ಭಿಣಿ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಹೆರಿಗೆ ಅರ್ಧಕ್ಕೆ ಬಿಟ್ಟು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಧಕ್ಕೆ ಹೆರಿಗೆ ಮಾಡಿಸುವುದನ್ನು ಬಿಟ್ಟಿದ್ದರಿಂದ ಗರ್ಭಿಣಿ ಶೇಜಲ್ ಮಾಳಿ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರಿಂದ ಆರೋಪಿಸಿದ್ದಾರೆ. ಮಾತ್ರವಲ್ಲದೆ, ನಕಲಿ ವೈದ್ಯನ ಮನೆಯೆದುರು ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟಿಸಿದ್ದಾರೆ. ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುವಂತೆ ಕುಟುಂಬಸ್ಥರ ಆಗ್ರಹಿಸಿದ್ದಾರೆ..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು