ವಿಷಯಕ್ಕೆ ಹೋಗಿ
ಬೆಂಗಳೂರು, ಅ, 27 ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಇಂದಿನಿಂದ ನವೆಂಬರ್ 5 ರ ವರೆಗೆ ಬೆಂಗಳೂರು ಉತ್ಸವ ಆಯೋಜಿಸಿದ್ದು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಿತ್ರನಟಿ ಭೂಮಿ ಶೆಟ್ಟಿ ಚಾಲನೆ ನೀಡಿದರು.ಚಿತ್ರಕಲಾ ಪರಿಷತ್ತಿನಲ್ಲಿ 80 ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದ್ದು, ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು, ಕಲಾಕೃತಿಗಳು, ಅನೇಕ ವಸ್ತುಗಳ ಮಾರಾಟಕ್ಕೆ ವೇದಿಕೆ ಅಣಿಗೊಳಿಸಲಾಗಿದೆ.ಭೂಮಿ ಶೆಟ್ಟಿ ಮಾತನಾಡಿ, ದೇಶದ್ಯಾಂತ ಆಗಮಿಸಿರುವ ಕಲಾವಿದರ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ. ದೀಪಾವಳಿ ಪ್ರಯುಕ್ತ ದೇಶದ ಎಲ್ಲಾ ಕಲಾವಿದರ ಕೈಚಳಕ ಮತ್ತು ಕುಶಲತೆಯನ್ನು ಒಂದೇ ಕಡೆ ನೋಡಲು ಇದು ನಿಜಕ್ಕೂ ಉತ್ತಮ ಅವಕಾಶವಾಗಿದೆ. ಬೆಂಗಳೂರು ನಗರದ ಜನತೆಗೆ ಇದು ಸೂಕ್ತವಾದ ಕರಕುಶಲ ಮೇಳವಾಗಿದ್ದು, ನಾಗರಿಕರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು