ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಬಸ್ತ್ವಾಡ ಗ್ರಾಮ ದಲ್ಲಿ ಶುಕ್ರವಾರ ದಿನಾಂಕ 27/10/.2023 ರಂದು ಸಂತೆಯನ್ನು ಪ್ರಾರಂಭಿಸಲು ದೀನದಲಿತರ ಬಂಧು ಸಹಕಾರಿ ಮುಖಂಡರು ಸನ್ಮಾನ್ಯ ಶ್ರೀ ವಿವೇಕ್ ರಾವ್ ಅಣ್ಣಾ ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯರು ಬೆಳಗಾವಿ ಜಿಲ್ಲಾ ಕೆಎಂಎಫ್ ಅಧ್ಯಕ್ಷರು ಇವರ ಅಮೃತ ಹಸ್ತದಿಂದ ಸಂಜೆ 4 ಗಂಟೆಗೆ ಸಂತೆಯನ್ನು ಪ್ರಾರಂಭಿಸಿದರು ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಕನ್ನದಾಳ ಬಿರುನಾಳ ಬ್ಯಾಕೋಡ,ಸವಸುದ್ದಿ, ನಿಡಗುಂದಿ ಮತ್ತು ಹಿಡಕಲ್ ಗ್ರಾಮದ ಗ್ರಾಮಸ್ಥರು ಮತ್ತು ಸಾರ್ವಜನಿಕರು ಗ್ರಾಮದ ಸಂತೆಯ ಲಾಭವನ್ನು ಪಡೆದುಕೊಂಡು ಗ್ರಾಮದ ವ್ಯಾಪಾರಸ್ಥರಿಗೆ ಸಹಕಾರ ಮಾಡಬೇಕೆಂದು ಶ್ರೀ ವಿವೇಕ್ ರಾವ್ ಅಣ್ಣಾ ಪಾಟೀಲ್ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶ್ರೀ ಬಾಳಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್, ಶ್ರೀ ಮಹದೇವ್ ವಡಗಾವಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀ ಜೋತೆಪ್ಪ ಪಾಟೀಲ್, ಶ್ರೀ ರಾಮಕೃಷ್ಣ ಲಟ್ಟಿ, ಶ್ರೀಕಾಂತ ಒಡಗಾವಿ, ಶ್ರೀ ಲಕ್ಕಪ್ಪ ಮಂಗಸುಳೆ,ಶ್ರೀ ಸುನಿಲ್ ಕಾಂಬಳೆ, ಶ್ರೀ ಮುತ್ತಪ್ಪ ಕಾಂಬಳೆ, ವಿವೇಕ್ ಹೋಳ್ಕರ್, ಶ್ರೀ ಆನಂದ್ ಕಾಂಬಳೆ, ಶ್ರೀ ಬಸು ವಡಗಾವಿ ಹಾಗೂ ಬಸ್ಥವಾಡ ಗ್ರಾಮದ ಸಮಸ್ತ ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಯವರು ಹಾಜರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು