ವಿಷಯಕ್ಕೆ ಹೋಗಿ
ಅಥಣಿ : ಎರಡು ಟಾಟಾ ಯೆಸ್ ಹಾಗು ಎರಡು ಬೈಕ್ ಗಳ ಮದ್ಯ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಜರುಗಿದೆ. ಅಥಣಿ ತಾಲೂಕಿನ ಜತ್ತ - ಜಾಂಬೋಟಿ ಮುಖ್ಯ ಹೆದ್ದಾರಿಯ ಗುಂಡೇವಾಡಿ ಸಮೀಪವಿರುವ ಹಳೆ ರಿಮೊಲ್ಡ್ ಟೈರ್ ಅಂಗಡಿ ಹತ್ತಿರ ಸಂಭವಿಸಿದೆ. ಎರಡು ಟಾಟಾ ಯೆಸ್ ವಾಹನ ಹಾಗು ಎರಡು ಬೈಕ್ ಮದ್ಯ ಅಪಘಾತ ಸಂಭವಿಸಿದೆ. ಬೈಕ್ ಮೇಲೆ ಅಥಣಿಗೆ ಹೊರಟ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಗನಾಪುರ ಗ್ರಾಮದ ದಂಪತಿಗಳಾದ ಅನೀಲ ಅಣ್ಣಪ್ಪ ಪಾಟೀಲ (49) ಅನಿತಾ ಅನೀಲ ಪಾಟೀಲ (38) ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಬೈಕ್ ಮೇಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಸಮುದಾಯ ಆಸ್ಪತ್ರೆಗೆ ಕಳಿಸಲಾಗಿದೆ. ಘಟನಾ ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ನಾಯ್ಕೊಡಿ, ಪಿಎಸ್ಐ ಕಾರಜೋಳ ಹಾಗು ಸಿಬ್ಬಂದಿ ಬೆಟ್ಟಿ ನೀಡಿ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಥಣಿ ಸಮುದಾಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು