ವಿಷಯಕ್ಕೆ ಹೋಗಿ
ಗೋಕಾಕ : ವಿಶ್ವ ಅಂಚೆ ದಿನಾಚರಣೆ ನಿಮಿತ್ತ ನಗರದ ಪ್ರಧಾನ ಅಂಚೆ ಕಚೇರಿಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.ಅಂಚೆ ಅಧೀಕ್ಷಕರಾದ ಶ್ರೀ ಆರ್. ವಾಯ್. ಮದುಸಾಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಭಾರತದಲ್ಲಿ ಪ್ರತಿವರ್ಷ ಅಂಚೆ ಸೇವೆಗಳ ಪಾತ್ರ ಮತ್ತು ಕಾರ್ಯಚಟುವಟಿಕೆಗಳ ಅರಿವು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 9 ರಿಂದ ಅಕ್ಟೋಬರ್ 13 ರ ವರೆಗೆ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. 1874 ರಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪನೆಯ ನೆನಪಿಗಾಗಿ ೮.೧ ಅನ್ನು ವಿಶ್ವ ಪೋಸ್ಟ್ ದಿನವನ್ನಾಗಿ ಆಚರಿಸಲಾಗುತ್ತಿದೆ. 1969 ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ಈ ದಿನವನ್ನು ವಿಶ್ವ ಅಂಚೆ ದಿನವನ್ನಾಗಿ ಘೋಷಿಸಲಾಯಿತು ಎಂದರು. ಹಾಗೇಯೆ ನಮ್ಮ ಭಾರತದಲ್ಲಿ ಪ್ರತಿವರ್ಷ ಅಂಚೆ ಸೇವೆಗಳ ಪಾತ್ರ ಮತ್ತು ಕಾರ್ಯಚಟುವಟಿಕೆಗಳ ಅರಿವು ಮೂಡಿಸಲು ಅಕ್ಟೋಬರ 9 ರಿಂದ ಅಕ್ಟೋಬರ 13 ರ ವರೆಗೆ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸದ್ಯ ಎಲ್ಲ ಅಂಚೆ ಕಛೇರಿಗಳು ಆಧುನಿಕರಣಗೊಂಡಿದ್ದು ಪೋಸ್ಟ್ ಕಾರ್ಡ್ ಸೇವೆ, ಸಣ್ಣ ಉಳಿತಾಯ ಖಾತೆಗಳು, ಅಂಚೆ ಜೀವ ವಿಮೆ ಸೇವೆಗಳ ಜೊತೆಗೆ ಡಿಜಿಟಲಿಕರಣಗೊಂಡು ಇಬ್ಯಾಂಕಿಂಗ ಇಪೋಸ್ಸ, ಇ ಮನಿಆರ್ಡರ ಹಾಗೂ 2018 ರಲ್ಲಿ ಪರಚಯವಾದ ಇಂಡಿಯಾ ಪೋಸ್ಸ ಪೇಮೆಂಟಬ್ಯಾಂಕ, ಗ್ರಾಹಕರ ಯಾವುದೇ ಬ್ಯಾಂಕಿನಲ್ಲಿ ಇರುವಂತಹ ಹಣವನ್ನು ಆಧಾರ ಆದಾರಿತ ಹಣ ಪಾವತಿ ಮಾಡುವ ವಿಧಾನದ ಮೂಲಕ ಮನಯ ಮುಂದೆಯೆ ಎ.ಟಿ.ಎಮ್. ಸೇವೆಯನ್ನು ಒದಗಿಸಲಾಗುತ್ತಿದೆ ಈ ಸೇವೆಯನ್ನು ಎಲ್ಲರೂ ಪಡೆಯಬೇಕೆಂದು ಹೇಳಿದರು, ವಿದೇಶಗಳಿಗೆ ಪಾರ್ಸಲ್ ದಫ್ತು ಮಾಡುತ್ತಿರುವ ಉದ್ದಿಮೆದಾರರ ಅನುಕೂಲಕ್ಕಾಗಿ ಢಾಕ್ ನಿರ್ಯಾತ್ ಕೇಂದ್ರ ಎಂಬ ಹೊಸ ಸೇವೆಯನ್ನು ಆರಂಬಿಸಲಾಗಿದೆ. ಈ ಸೇವೆಯು ಅತೀ ಕಡಿಮೆ ದರದಲ್ಲಿ ವಿಶ್ವದಾದ್ಯಂತ ಉದ್ದಿಮೆದಾರರು ತಮ್ಮ ಉತ್ಪನ್ನಗಳನ್ನು ಸರಳ ಹಾಗೂ ವೇಗವಾಗಿ ರಫ್ತು ಮಾಡಬಹುದಾಗಿದೆ. ಪ್ರಾಮಾಣಿಕತೆ ಎಂಬ ಭದ್ರ ಬುನಾದಿಯ ಮೇಲೆ ನಿಂತಿರುವ ಅಂಚೆ ಇಲಾಖೆಯು, ಕಾಯಕವೇ ಕೈಲಾಸ ಎಂಬ ಧೈಯವನ್ನೋಳಗಂಡು ದೇಶದ ಮೂಲೆ ಮೂಲೆಗೂ ಬಡವ ಬಲ್ಲಿದರನ್ನದೆ, ವೃದ್ಧರು, ಅಶಕ್ತರು, ವಿಕಲಚೇತನರುಗಳ ಮನ ಮನ ಬಾಗಿಲಿಗೆ ಸೇವೆಯನ್ನು ಒದಗಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆಪಾಲಕರಾದ ಶ್ರೀಮತಿ ಜಿ. ಆರ್. ದಾವನಿ, ಅಂಚನಿರೀಕ್ಷರಾದ ಶ್ರೀ ಶಿವಮೂರ್ತಿ ಹುಳಿಬುತ್ತಿ, ಎಸ್. ಎಸ್. ಪರೀಟ ಹಾಗೂ ಎಲ್ಲ ಅಂಚೆ ಅಣ್ಣಂದಿರು ಹಾಜರಿದ್ದರು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು