ವಿಷಯಕ್ಕೆ ಹೋಗಿ
ಹುಬ್ಬಳ್ಳಿ : ನಗರದ ಬೈರಿದೆರಾವಕೊಪ್ಪ ಮಿಲನ್ ಗೌಡ ಚಾಳದಲ್ಲಿ ನಡೆದ ಇದ್ ಮಿಲಾದ್ ಮೆರವಣಿಗೆಯಲ್ಲಿ ಮದರಸಾ ವಿದ್ಯಾರ್ಥಿಗಳು ಮತ್ತು ಅಧ್ಯಪಕರು ಪಾಲಗೊಂಡಿದ್ದರು ಇಸ್ಲಾಂ ಧರ್ಮದ ಪ್ರವರ್ತಕ್ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ ಜನ್ಮದಿನ ನಿಮಿತ್ಯ ಹದೀಸ್, ನಾತ್ ಗಳನ್ನು ಚಿಕ್ಕ ಮಕ್ಕಳಿಂದ ಸ್ಪರ್ಧೆ ಎರಪಾಡಿಸಲಾಯಿತ್ತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೌಲಾಣಾ ಸ್ಯೆಯದ್ ಅಹ್ಮದ್ ರಜಾ ಖಾಜಿ ಅವರು ಪ್ರವಾದಿ ಮಹಮ್ಮದ್ ಪ್ಯೆಗಂಬರವರ ಮನುಕುಲದ ಏಳ್ಗೆಗಾಗಿ ಶ್ರಮಿಸಿದ್ದಾರೆ ಅವರ ಸತ್ಯ ಸಿದ್ಧಾಂತ ಗಳನ್ನು ಎಲ್ಲರು ಅಳವಡಿಸಕೊಳ್ಳಬೇಕೆಂದು ಕರೆ ನೀಡಿದರು .ಈ ಸಂದರ್ಭದಲ್ಲಿ ಮೌಲಾನಾ ಚಾಂದ ರಜಾ ,ಮಂಕೇಶ ಪತ್ರಿಕೆ ಸಂಪಾದಕರು ಆಕಬರ ಬೆಳಗಾಂವಕರ,ಖಾರಿ ಜಾನಿಸಾರ,ನಾಥಖಾ ಮೊಹಮ್ಮದ್ ಹುಸೇನ ಮುಂತಾದವರು ಉಪಸ್ಥಿತರಿದ್ದರು .ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪಾರಿತೋಷಕ ಹಾಗೂ ಬಹುಮಾನ ವಿತರಿಸಿದರು.ನಂತರ ಪ್ರಸಾದ ವಿತರಣೆ ಮಾಡಿದ್ದರು .
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು