ವಿಷಯಕ್ಕೆ ಹೋಗಿ
ಚಿಕ್ಕೋಡಿ : ಡಾ. ಪುನೀತ ರಾಜಕುಮಾರ ಅಭಿಮಾನಿಗಳ ಸಂಘ ಚಿಕ್ಕೋಡಿ, ತಾಲೂಕಾ ಅಧ್ಯಕ್ಷರಾಗಿ ಕೇರೂರ ಗ್ರಾಮದ ಯುವಕ, ಅಮೂಲ ನಾವಿ ಇವರು ಆಯ್ಕೆಯಾಗಿದ್ದಾರೆ, ಸಂಘಟನೆಯ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಸಂಜು ಬಡಿಗೇರ ಇವರು ಆಯ್ಕೆ ಮಾಡಿ ಆದೇಶ ನೀಡಿ, ಪ್ರಕಟನೆಯಲ್ಲಿ ತಿಳಿಸಿದ್ದಾರೆ, ನಂತರ ಮಾತನಾಡಿದ ಅಮೂಲ ನಾವಿ ಇವರು, ನಮ್ಮ ಈ ಸಂಘಟನೆಯು ನಾಡು, ನುಡಿ, ಜಲ ರಕ್ಷಣೆಗಳ ಕುರಿತಾಗಿ ನಿರಂತರ ಹೋರಾಟ ಮಾಡಲಿದೆ ಇದಲ್ಲದೇ ಪುನೀತ ಇವರು ಮಾಡುವ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುವುದು, ಇದಕ್ಕಾಗಿ ಎಲ್ಲರ ಸಹಕಾರ ಅತೀ ಮುಖ್ಯ ಎಂದು ಹೇಳಿದರು, ಅಮೂಲ ನಾವಿ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಲಿದೆ.. ಈ ಸಂಧರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಕನ್ನಡ ಮನಸುಗಳಾದ, ಬಸವರಾಜ ಸಾಜನೆ, ಸಂಜಯ ಪಾಟೀಲ, ಮಹೇಶ ಕಾಂಬಳೆ, ಬಸವರಾಜ ಮಾನೆ, ದುಂಡಪ್ಪಾ ಚೌಗುಲೆ, ಕುಮಾರ ಪಾಟೀಲ, ಸಂತೋಷ ಪೂಜೇರಿ, ಪ್ರತಾಪ ಪಾಟೀಲ, ಖಾನಪ್ಪಾ ಬಾಡಕರ, ವಿಠ್ಠಲ ವಾಳಕೆ, ಸಿದ್ಧು ಕಾಂಬಳೆ, ವಿಜಯ ಬ್ಯಾಳೆ, ಸಚೀನ ದೊಡ್ಡಮನಿ ಸೇರಿದಂತೆ ನೂರಾರು ಯುವ ಹೋರಾಟಗಾರರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು