ವಿಷಯಕ್ಕೆ ಹೋಗಿ
ಚಿಕ್ಕೋಡಿ ಸುದ್ದಿ.: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಸಂಘಟನೆಯ ಕಾರ್ಯಕರ್ತರು ಪತ್ರಕರ್ತರನ್ನು ಕುರಿತು ಅವಹೇಳನ ಹೇಳಿಕೆ ಖಂಡಿಸಿ ಪತ್ರಕರ್ತರ ಹೋರಾಟ.ವಾರ್ತಾ ವರದಿಯೆಂಬ ಒಂದು ವರದಿಯಲ್ಲಿ ವರದಿಯಾದ ಈ ಹೇಳಿಕೆಯನ್ನು ಖಂಡಿಸಿ ಚಿಕ್ಕೋಡಿ ಸಮಾಜ ಸೇವಕರು ಹಾಗೂ ಜಿಲ್ಲಾ ಸಂಘಟನೆ ಹಾಗೂ ಪತ್ರಕರ್ತರು ಅವಮಾನ ಖಂಡಿಸಿ ಹೋರಾಟ ಮಾಡಲಾಯಿತು.ಈ ರೀತಿಯಾಗಿ ಪತ್ರಕರ್ತರನ್ನು ನಿಂದಿಸುವುದು ಹಾಗೂ ಅವರ ಮೇಲೆ ಇಲ್ಲಸಲ್ಲದ ಅವಮಾನ ಹೇಳಿಕೆಯನ್ನು ನೀಡುವುದು ತಪ್ಪು. ನಕಲಿ ಪತ್ರಕರ್ತರು ಎಂದು ಕಂಡುಬಂದಲ್ಲಿ ಅದನ್ನು ಕಾನೂನುಕ್ಕೆ ಒಪ್ಪಿಸಿ ಅದನ್ನು ಪರಿಶೀಲಿಸಿ, ನಕಲಿ ಎಂದು ಸಾಬೀತದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳುವುದು ಸರಿ. ಆದರೆ ಇವರು ಬೇರೆ ತಾಲೂಕಿನ ಪತ್ರಕರ್ತರು ನಮ್ಮ ಕಾಗವಾಡ ತಾಲೂಕನವಳಗಡೆ ಬಂದರೆ ಅವರ ಮುಖಕ್ಕೆ ಮಸಿ ಬಡಿಯುತ್ತಿವೆ ಅವರ ಗಾಡಿಗಳನ್ನು ಸೀಜ್ ಮಾಡುತ್ತೆ ಎನ್ನಲು ಇವರ ಯಾರು? ಇವರಿಗೆ ಏನು ಅಂತಹ ಹಕ್ಕು ಎಂಬುದು ಪತ್ರಕರ್ತರಿಗೆ ತಾಳಲಾರದ ಅವಮಾನವಾಗಿದೆ ಇದನ್ನು ಖಂಡಿಸುತ್ತೇವೆ.ಇದನ್ನು ಖಂಡಿಸಿ ರಾಜ್ಯ ಹಾಗೂ ಜಿಲ್ಲೆಯ ತಾಲೂಕಿನ ಮಟ್ಟದ ಪತ್ರಕರ್ತರು ಹೋರಾಟ ಮಾಡಲು ನಿರ್ಧರಿಸಿದ್ದಾರೆ ಆದ ಕಾರಣ ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಖಂಡಿಸಬೇಕು ಈ ರೀತಿ ಹೇಳಿಕೆ ನೀಡಿದ ಬಗ್ಗೆ ಕಾನೂನು ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಹೋರಾಟ ಮುಗಿಲು ಮುಟ್ಟುವುದು ಸತ್ಯ.ಇದೇ ವಿಷಯ ಕುರಿತು ಇವತ್ತು ಚಿಕ್ಕೋಡಿಯಲ್ಲಿ ಅಲ್ಲಂಪ್ರಭು ಅನುದಾನ ಸಮಿತಿ ಹಾಗೂ ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ, ರಕ್ಷಣಾ ವೇದಿಕೆ ಸಂಘಟನೆಯ ಚಿಕ್ಕೋಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಸಂಜು ಬಡಿಗೇರ, ಚಿಕ್ಕೋಡಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾದ ರಾಜು ಮುಂಡೆ, ಸುದರ್ಶನ್ ಟಿವಿ ನ್ಯೂಸ್ ರಿಪೋರ್ಟರರಾದ ಪ್ರಮೇಶ್ ಬಿಂದ, ಜನಶ್ರೀ ನ್ಯೂಸ್ ಚಿಕ್ಕೋಡಿ ರಿಪೋರ್ಟ ರಾದ ಕುಮಾರ್ ಪಾಟೀಲ್, ಸಿಬಿ ನ್ಯೂಸ್ ಎಡಿಟರರಾದ ಹನುಮಂತ ಸಾಕಳೆ, ರಾಜೇಂದ್ರ ಪಾಟೀಲ್, ಇನ್ನುಳಿದ ಎಲ್ಲ ಪತ್ರಕರ್ತರ ಸಂಘಟನೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಹೋರಾಟ ಮಾಡಲಾಯಿತು. ವರದಿ : ರಾಜು ಮುಂಡೆ ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು