ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಅಂಕಲಿ ಪೊಲೀಸ್ ಠಾಣೆಯ ಪಿ ಎಸ್ ಐ ಹಾಗೂ ಸಿಬ್ಬಂದಿಯವರು ಗಸ್ತ ಹಾಕುತ್ತಿರುವಾಗ ರಾಯಬಾಗ್ ಅಂಕಲಿ ರಸ್ತೆಯಲ್ಲಿ ಲಕ್ಷ್ಮಿ ಮಂದಿರ ಹತ್ತಿರ ಯುವಕರನ್ನು ಅನುಮಾನನಾಸ್ಪದವಾಗಿ ತನಿಖೆ ಮಾಡಿದಾಗ ಅವರು ಅಂತರರಾಜ್ಯ ಕಳ್ಳರೆಂದು ಪತ್ತೆಯಾಗಿದೆ. .ಅಂಕಲಿ ಪೊಲೀಸ್ ಠಾಣೆಯ ಪಿ ಎಸ್ ಐ ಕಾಡಪ್ಪಾ ಜಕ್ಕಣ್ಣವರ್ ಇವರು ತಮ್ಮ ಸಿಬ್ಬಂದಿ ಜೊತೆಗೆ ಮುಂಜಾನೆ ರಾಯಭಾಗ ನಸ್ಲಾಪುರ ಬಳಿ ಇರುವ ಲಕ್ಷ್ಮಿ ಮಂದಿರ್ ಹತ್ತಿರ ಗಸ್ತ ಹಾಕುತಿರುವಾಗ 3 ಯುವಕರನ್ನು ವಶಪಡಿಸಿ ತನಿಖೆ ಮಾಡಿದಾಗ ಅವರು ಅಂತರ್ ರಾಜ್ಯ ಕಳ್ಳರಂದು ದೃಢಪಟ್ಟಿದರಿಂದ ಸದರಿ ಯುವಕರು ಚಿಕ್ಕೋಡಿ ತಾಲೂಕಿನ ಗಡಿ ಭಾಗದ ಇನ್ನಿತರ ಗ್ರಾಮಗಳಲ್ಲಿ ಸುಮಾರು 5 ಲಕ್ಷ 75,000 ಸಾವಿರ ಬೆಲೆಬಾಳುವ 11 ಮೋಟರ್ ಸೈಕಲ್ಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ ಸದರಿಯ ಯುವಕರ ಮೇಲೆ ಪ್ರಕಣ ದಾಖಲಿಸಿ ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿ ಪಿ ಐ ವಿಶ್ವನಾಥ್ ಚೌಗುಲಾ ತಿಳಿಸಿದ್ದಾರೆ. ಇಂಚಲಕರಂಜಿ ಪಟ್ಟಣದ ಬಜಾರ್ ಪೇಟ್ ಖೋತವಾಡಿ ರಹಿವಾಸಿಯಾದ ನಾಗೇಶ್ ಬಾಜಿರಾವ್ ಕಾಂಬಳೆ ವಯಸ್ಸು 28,ಮಹೇಶ್ ಬನ್ನಿಲಾಲ್ ಪಟೇಲ್ ವಯಸ್ಸು 23 ಹಾಗೂ ವಿಕಾಸ್ ಮನೋಹರ್ ಬೋಸ್ಲೆ ಬಂಧಿತ ಆರೋಪಿ, ಕಳ್ಳತನ ಮಾಡಿರುವ 11 ಮೋಟರ್ ಸೈಕಲ್ಗಳನ್ನು ವಶಪಡಿಸಿದ್ದಾರೆ. ಸದರಿ ಪ್ರಕರಣವು ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು