ವಿಷಯಕ್ಕೆ ಹೋಗಿ
ಚಿಕ್ಕೋಡಿ : ಶಕ್ತಿ ಯೋಜನೆಯ ಪರಿಣಾಮವಾಗಿ ಬಸ್ಸಿನಲ್ಲಿ ಸೀಟ್‌ಗಾಗಿ ಮಹಿಳೆಯರಿಂದ ಕಾಳಗ,ಬಸ್‌ನಲ್ಲಿ ಸೀಟಗಾಗಿ ಮಹಿಳೆಯರ ಕಾಳಗದ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ಹರಿದಾಡುತ್ತಲಿದೆ,ಶಕ್ತಿ ಯೋಜನೆಯಿಂದ ಮಹಿಳೆಯರ ಬಸ್ಸ ಪ್ರಯಾಣ ದಿನ-ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಹಲವಾರು ಕಡೆ ದೊಡ್ಡ ಮಟ್ಟದಲ್ಲಿ ಮಹಿಳಾ ಮನಿಗಳು ಜಗಳಾಡುವುದು ಸರ್ವೆ ಸಾಮಾನ್ಯವಾಗಿದೆ. ಬೆಳಗಾವಿಯಲ್ಲಿ ಸರ್ಕಾರಿ ಬಸ್‌ನಲ್ಲಿ ಸೀಟ್‌ಗಾಗಿ ಇಬ್ಬರು ಮಹಿಳೆಯರ ನಡುವೆ ಜಗಳ ನಡೆದು, ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಪರಸ್ಪರ ಜಗಳಾಡುವ ಹಂತಕ್ಕೆ ತಲುಪಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ – ಬೆಳಗಾವಿ ಮಾರ್ಗದ ಬಸ್‌ನಲ್ಲಿ ನಡೆದ – ಹೊಡೆದಾಟದ ದೃಶ್ಯ ಈಗ ಎಲ್ಲೆಡೆ ಸಾಮಾಜಿಕ ಜಾಲ ತಾನಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಸೀಟ್‌ಗಾಗಿ ಇಬ್ಬರು ಮಹಿಳೆಯರ ನಡುವೆ ದೊಡ್ಡ ಕಿತ್ತಾಟವೇ ನಡೆಯುತ್ತದೆ. ಅರಂಭದಲ್ಲಿ ಸೀಟಿನ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ನಂತರ ಹೊಡೆದಾಡುವ ಹಂತಕ್ಕೆ ತಲುಪಿದೆ, ಸಹ ಪ್ರಯಾಣಿಕರು ಸಮಾಧಾನ ಮಾಡಲು ಎಷ್ಟೇ ಪ್ರಯತ್ನಿಸಿದರೂ ಆ ಮಹಿಳೆಯರು ವಾಗ್ವಾದ ಮತ್ತು ಹೊಡೆದಾಟವನ್ನು ಬಿಡಲಿಕ್ಕೆ ಸಿದ್ಧರಾಗಲಿಲ್ಲ. ಸರಕಾರದ ಸ್ತ್ರೀಶಕ್ತಿ ಯೋಜನೆ ಬಹಳ ಜನಪರವಿದೆ ಆದರೆ ಸಂಪೂರ್ಣ ಉಚಿತ ಇದ್ದ ಕಾರಣ ಇದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿ, ಇಂತಹ ಘಟನೆಗಳು ಅಲ್ಲಲ್ಲಿ ಕಂಡು ಬರುತ್ತಲಿವೆ, ಸರಕಾರವು ಇನ್ನಾದರೂ ಎಚ್ಚತ್ತುಕೊಂಡು ಕಣಿಷ್ಟ ಅರ್ಧದಷ್ಟಾದರೂ ದರ ಆಕರಣೆ ಮಾಡುವ ಮೂಲಕ ಶಾಂತಿ- ಸುವ್ಯವಸ್ಥೆ ಕಾಪಾಡಬೇಕು ಎಂದು ಪ್ರಜ್ಞಾವಂತರ ವಾದವಾಗಿದೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು