ಮೂಡಲಗಿ :- ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ಎಲ್ಲ ಕನ್ನಡ ಪರ ಸಂಘಟನೆಗಳು ಒಂದಾಗಿ, ಒಗ್ಗಟ್ಟಾಗಿ ಶ್ರಮಿಸಬೇಕು, ಈ ಮೂಲಕ ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕು, ನಮ್ಮ ಭಾರತದಲ್ಲಿಯೇ ಕನ್ನಡ ಭಾಷೆಯು ಅತ್ಯಂತ ಸುಂದರ ಹಾಗೂ ಸರಳ ಭಾಷೆಯಾಗಿದೆ ಎಂದು ಶಾಸಕ, ಕೆ.ಎಮ್.ಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶನಿವಾರ ಸಂಜೆ ಪಟ್ಟಣದ ಬಸವರಂಗ ಮಂಟಪದಲ್ಲಿ ಕರ್ನಾಟಕವೆಂದು ನಾಮಕರಣವಾಗಿ ೫೦ ವರ್ಷ ತುಂಬಿದ ಪ್ರಯುಕ್ತ ವಿವಿಧ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡ ಸುವರ್ಣ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಅನ್ಯ ಭಾಷೆಗಳ ಬಗ್ಗೆ ಗೌರವಾಭಿಮಾನ ಬೆಳೆಸಿಕೊಳ್ಳುವಂತೆ ಕನ್ನಡಾಭಿಮಾನಿಗಳಿಗೆ ಕರೆ ನೀಡಿದರು. ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು ಈ ವರ್ಷಕ್ಕೆ ೫೦ ವರ್ಷ ತುಂಬಿದೆ, ಇದಕ್ಕೂ ಮೊದಲು ಮೈಸೂರು ರಾಜ್ಯವಾಗಿತ್ತು, ಡಿ.ದೇವರಾಜು ಅರಸು ಅವರ ಆಳ್ವಿಕೆಯಲ್ಲಿ ಮೈಸೂರು ಹೆಸರಿನ ಬದಲು ಕರ್ನಾಟಕ ಎಂದು ನಾಮಕರಣವಾಯಿತು. ಈ ಸಂಭ್ರಮಕ್ಕೆ ಈಗ ಸುವರ್ಣ ಸಂಭ್ರಮ. ಇಡೀ ವರ್ಷ ರಾಜ್ಯಾದ್ಯಂತಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ದೇಶದಲ್ಲಿಯೇ ನಮ್ಮ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯ ಜೊತೆಗೆ ದೇಶದಲ್ಲಿರುವ ವಿವಿಧ ರಾಜ್ಯಗಳ ಭಾಷೆಗಳನ್ನು ಮಾತನಾಡುವ ಮೂಲಕ ಅನ್ಯ ಭಾಷೆಗಳಿಗೆ ಗೌರವ ನೀಡುತ್ತಿದ್ದಾರೆ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ, ಕನ್ನಡ ಭಾಷೆಗೆ ಕುತ್ತು ಬಂದಾಗ ಪ್ರತಿಯೊಬ್ಬ ಕನ್ನಡಿಗನು ತನ್ನ ಜೀವವನ್ನು ಒತ್ತೆಯಿಟ್ಟು ಕನ್ನಡವನ್ನು ಕಾಪಾಡಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟು ಇವೆ, ಭಾರತವು ಹಲವು ಭಾಷೆಗಳ ಸಮಾಗಮವಾಗಿದ್ದರೂ ಕನ್ನಡ ಭಾಷೆಗಿರುವ ಗಮ್ಮತ್ತು, ಗೌರವ ಹೆಚ್ಚುತ್ತಲೇ ಇದೆ, ಇದಕ್ಕೆ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದೇ ನಮಗೆ ದೊಡ್ಡ ಗೌರವವಾಗಿದೆ ಎಂದು ಹೇಳಿದರು. ಎಲ್ಲರೂ ಒಂದಾಗಿ ವಿವಿಧ ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಮೂಡಲಗಿಯಲ್ಲಿ ಅತ್ಯಂತ ಯಶಸ್ವಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ ಎಂದು ಮನಸಾರೆ ಕೊಂಡಾಡಿದ ಅವರು, ಕನ್ನಡ ನಾಡು-ನುಡಿ, ಉಳಿವಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು. ಇಲ್ಲಿನ ಸಂಘಟನೆಗಳು ವೈಮನಸ್ಸನ್ನು ತೊರೆದು ಕನ್ನಡದ ಕೆಲಸಕ್ಕೆ ಒಗ್ಗಟ್ಟಾಗಿ ದುಡಿಯಬೇಕು, ಅಂದಾಗ ಮಾತ್ರ ನಾವು ಹೆತ್ತ ತಾಯಿಗೆ ಗೌರವ ನೀಡುವಂತಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿ, ಕನ್ನಡ ಪರ ಸಂಘಟನೆಗಳ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾರಂಭಕ್ಕೂ ಮುನ್ನ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಸುವರ್ಣ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಬೃಹತ್ ಮೆರವಣಿಗೆಯು ಪಟ್ಟಣದ ಎಸ್.ಎಸ್.ಆರ್ ಕಾಲೇಜಿನಿಂದ ಸಭಾಮಂಟಪವರೆಗೆ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಶಾಲಾ ಬಾಲಕ-ಬಾಲಕಿಯರಿಂದ ವಿವಿಧ ರೂಪಕಗಳು, ವಿವಿಧ ವಾಧ್ಯವೃಂದಗಳು ಕನ್ನಡಾಭಿಮಾನಿಗಳ ಗಮನ ಸೆಳೆಯಿತು. ಅದ್ದೂರಿ ಪ್ರಮಾಣದಲ್ಲಿ ಮೆರವಣಿಗೆ ನಡೆಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಕಸಾಪ ಅಧ್ಯಕ್ಷರಿಗೆ ಮೆರವಣಿಗೆ ಉದ್ದಕ್ಕೂ ಪುಷ್ಪಾರ್ಪಣೆ ಮಾಡುವ ಮೂಲಕ ಅಭಿಮಾನಿಗಳು ತಮ್ಮ ಗೌರವ ಅರ್ಪಿಸಿದರು. ಅಧ್ಯಕ್ಷತೆಯನ್ನು ಕಸಾಪ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ವಹಿಸಿದ್ದರು. ಮುಖ್ಯ ಅತಿಗಳಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮೂಡಲಗಿ ತಹಶಿಲ್ದಾರ ಮಹಾದೇವ ಸನಮೂರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡರಾದ ರವೀಂದ್ರ ಸೋನವಾಲಕರ, ಬಸವಪ್ರಭು ನಿಡಗುಂದಿ, ಸಂತೋಷ ಸೋನವಾಲಕರ, ಸಂತೋಷ ಪಾರ್ಶಿ, ಮಹಾದೇವ ಶೆಕ್ಕಿ, ಡಾ.ಎಸ್.ಎಸ್.ಪಾಟೀಲ, ಮರೆಪ್ಪ ಮರೆಪ್ಪಗೋಳ, ಹಣಮಂತ ಗುಡ್ಲಮನಿ, ಅನ್ವರ ನದಾಫ್, ಈರಪ್ಪ ಬನ್ನೂರ, ಅಜೀಜ ಡಾಂಗೆ, ಸಿ.ಬಿ.ನಿರ್ವಾಣಿ, ರಾಮಣ್ಣ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಅನ್ವರ ನದಾಫ್, ಬಸಗೌಡ ಪಾಟೀಲ, ಚಿದಾನಂದ ಶೆಟ್ಟರ, ಶಿವನಿಂಗ ಗೋಕಾಕ, ಹುಸೇನ ಶೇಖ, ಲಾಲಸಾಬ ಸಿದ್ಧಾಪೂರ, ರಾಮು ಝಂಢೇಕುರಬರ, ಸುಭಾಸ ಪಾಟೀಲ, ಪುರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ರಾಯಬಾಗ : ಇಂದು ನಾವು 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. 1947 ರ ಆಗಸ್ಟ್ 15 ರಂದು ನಾವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ದಿನವನ್ನು ಸ್ಮರಿಸುತ್ತೇವೆ. ಈ ದಿನವನ್ನು ಆಚರಿಸುವಾಗ, ನಾವು ನಮ್ಮ ದೇಶಕ್ಕಾಗಿ ಹೋರಾಡಿದ ಎಲ್ಲ ಮಹಾನ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತೇವೆ.ಭಾರತವು ಒಂದು ಬೃಹತ್ ಮತ್ತು ವೈವಿಧ್ಯಮಯ ದೇಶ. ನಾವು ಅನೇಕ ಭಾಷೆಗಳು, ಸಂಸ್ಕೃತಿಗಳು ಮತ್ತು ಧರ್ಮಗಳನ್ನು ಹೊಂದಿದ್ದೇವೆ, ಆದರೆ ನಾವು ಒಂದೇ ರಾಷ್ಟ್ರದ ಭಾಗವಾಗಿದ್ದೇವೆ. ನಮ್ಮೆಲ್ಲರನ್ನೂ ಒಂದುಗೂಡಿಸುವ ಅಂಶವೆಂದರೆ ನಮ್ಮ ದೇಶದ ಮೇಲಿನ ಪ್ರೀತಿ ಮತ್ತು ಗೌರವ.ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಇದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ. ನಾವು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಬೇಕು. ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಅಧ್ಯಕ್ಷರಾದ ಉಮೇಶ ಭೂಪಾಲ ಪೋಳ ಹೇಳಿದರು, ಅವರು ರಾಯಬಾಗ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು ತಿಳಿಸುತ್ತಾ ಮಾತನಾಡಿದರು, ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ್ ಕದ್ದು, ರಾಜ್ಯ ಪರಿಷತ್ ಸದಸ್ಯರಾದ ಮಲಿಕಜಾನ್ ಕೊರ್ಬು, ಸಂಘಟನಾ ಕಾರ್ಯದರ್ಶಿ ಕಲ್ಲಪ್ಪ ಗುಡಿಮನಿ, ನಾಮ ನಿರ್ದೇಶಿತ ನಿರ್ದೇಶಕರಾದ ಭಗವಂತ ಮಸಾಲಜಿ, ನಿಂಗಪ್ಪ ಬೀರಣಗಡ್ಡಿ, ಸದಾಶಿವ ಕಾಂಬಳೆ, ಪರಶುರಾಮ ಕುಂಬಾರ, ಸವಿತಾ ಜೋಲಾಪೂರೆ, ಮತ್ತಿತರು ಹಾಜರಿದ್ದರು.