*ದಿ.ನಾಗಪ್ಪ ಶೇಖರಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ . ಗೋಕಾಕ : ನಮ್ಮ ಕುಟುಂಬವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣಲಿಕ್ಕೆ ಹಲವು ಮಹನೀಯರು ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬದ ಸಾಮ್ರಾಜ್ಯದಲ್ಲಿ ದಿ. ನಾಗಪ್ಪ ಶೇಖರಗೋಳ ಪಾತ್ರವೂ ಇದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ. ಅಗಲಿರುವ ನಾಗಪ್ಪನ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಮಂಗಳವಾರದಂದು ತಮ್ಮ ಗೃಹ ಕಛೇರಿಯಲ್ಲಿ ಜರುಗಿದ ದಿ. ನಾಗಪ್ಪ ಶೇಖರಗೋಳ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಮತ್ತು ನಾಗಪ್ಪ ಶೇಖರಗೋಳ ಅವರ ಸುಮಾರು 15 ವರ್ಷಗಳ ಒಡನಾಟವನ್ನು ಸ್ಮರಿಸಿಕೊಂಡರು. ಅವಿಭಜಿತ ಗೋಕಾಕ ತಾಲೂಕಿನ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಕಳೆದ 4 ದಶಕಗಳಿಂದ ನಮ್ಮ ಜಾರಕಿಹೊಳಿ ಸಾಮ್ರಾಜ್ಯವನ್ನು ನಿರ್ಮಿಸಿದ್ದೇವೆ. ಇದರಲ್ಲಿ ಬಹಳಷ್ಟು ಜನ ತಮ್ಮ ತ್ಯಾಗವನ್ನು ಅರ್ಪಿಸಿದ್ದಾರೆ. ಅಂತಹದರಲ್ಲಿ ನಾಗಪ್ಪ ಕೂಡ ಒಬ್ಬನು. ನನ್ನ ಅನುಪಸ್ಥಿತಿಯಲ್ಲಿ ಅರಭಾವಿ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಜನರ ಕಷ್ಟಗಳಿಗೆ ತಕ್ಷಣವೇ ನನ್ನ ಸೂಚನೆಯ ಮೇರೆಗೆ ಸ್ಪಂದಿಸುವ ಗುಣವಿತ್ತು. ಆದರೆ ವಿಧಿಯಾಟ ನಾಗಪ್ಪನನ್ನು ಇಷ್ಟು ಬೇಗ ಕರೆದೊಯ್ತು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬಂತೆ ನಾಗಪ್ಪ ಕೂಡ ಹೃದಯಾಘಾತಕ್ಕೆ ಬಲಿಯಾದ. ಆತನ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಯುವ ನಾಯಕರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಖ್ಯಾತ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಉದ್ಯಮಿಗಳಾದ ವಿಕ್ರಮ ಅಂಗಡಿ, ಪ್ರಭು(ಅಪ್ಪು) ಕಲ್ಯಾಣಶೆಟ್ಟಿ, ರಾಜೇಸಾಬ ಅಂಡಗಿ, ಶಿವು ಪಾಟೀಲ, ಸದಾನಂದ ಕಲಾಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಪರಸಪ್ಪ ಬಬಲಿ ಸೇರಿದಂತೆ ಕ್ಷೇತ್ರದ ಅನೇಕ ಮುಖಂಡರು ಉಪಸ್ಥಿತರಿದ್ದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾಗಿದ್ದ ದಿ. ನಾಗಪ್ಪ ಶೇಖರಗೋಳ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು. ದಿ. ನಾಗಪ್ಪ ಶೇಖರಗೋಳ ನಿಧನಕ್ಕೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಮತ್ತೀತರರು ಉಪಸ್ಥಿತರಿದ್ದರು...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಮಾದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಗಳನ್ನು ನಡೆಸಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಮದಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿ ವರ್ಗ ಸರ್ವ ಸದಸ್ಯ ಮಂಡಳಿ ಮೊದಲನೆಯದ್ದು "ಜಮಾಬಂದಿ ಕಾರ್ಯಕ್ರಮ" ಎರಡನೆಯದು "ಕಾವಲು ಸಮಿತಿ ಸಭೆ" ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮದಿಹಳ್ಳಿ ಗ್ರಾಮವನ್ನು ಅಭಿವೃದ್ಧಿಯ ಹಾದಿಯತ್ತ ಕರೆದೊಯ್ಯಲು ಶ್ರಮಿಸುತ್ತಿರುವ ಮಾದಿಹಳ್ಳಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ತಳವಾರ, ಅಧ್ಯಕ್ಷರಾದ ಲಕ್ಕವ್ವ ಬಾಗಿ, ಉಪಾಧ್ಯಕ್ಷರಾದ ಕೋಮಲ್ ಹೊಸಮನಿ, ಪಶು ವೈದ್ಯಾಧಿಕಾರಿ ರಮೇಶ್ ಕದಮ, ಅಂಗನವಾಡಿ ಮೇಲ್ವಿಚಾರಕರು ಜಿ. ಎನ್. ಮಾನಗಾವಿ, ಸದಸ್ಯರಾದ ಮಾನಿಕ ಬಾಗಿ, ಗಣಪತಿ ವಾಳಕಿ, ಕಾಶಪ್ಪ ಮುತಗಿ, ಶಿವಾಜಿ ಗಾಡಿವಡ್ಡರ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.