ವಿಷಯಕ್ಕೆ ಹೋಗಿ
ಚಿಕ್ಕೋಡಿ: ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು, ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಬೆಂಬಲವನ್ನು ಸೂಚಿಸಿದ್ದಾರೆ.ಚಿಕ್ಕೋಡಿ ಮಿನಿವಿಧಾನ ಸೌಧದ ಮುಂದೆ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಬೆಂಬಲವನ್ನು ಸೂಚಿಸಿದರು. ಇದೇ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕ ಅಜೀತ ಕೋಳಿ ಮಾತನಾಡಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಕಳೆದ 2-3 ದಶಕಗಳಿಂದ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ. ಆದ್ರೆ ಇನ್ನೂವರೆಗೆ ಬೇಡಿಕೆ ಈಡೇರುತ್ತಿಲ್ಲಾ. ಸದ್ಯ ನಾವು ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರು ಬೆಂಬಲವನ್ನು ನೀಡುತ್ತಿದೇವೆ ಎಂದರು.ಬಳಿಕ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪದನಾ ಸ್ವಾಮೀಜಿಯವರು ಮಾತನಾಡಿ ಬೆಳಗಾವಿ 10 ದಿನಗಳ ಅದಿವೇಶನ ನಡೆಯತ್ತೆ ಅದರಲ್ಲಿ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕು. ಉತ್ತರ ಕರ್ನಾಟಕದಲ್ಲಿ ನೀರಾವರಿ, ಶಿಕ್ಷಣ ಸೇರಿದಂತೆ ಹತ್ತುಹಲವಾರು ಸಮಸ್ಯೆಗಳು ಇವೆ. ಈ ಸಮಸ್ಯೆಗಳ ಬಗ್ಗೆ ಉತ್ತರ ಕರ್ನಾಟಕದ ಶಾಸಕರು, ವಿಧಾನಪರಿಷತ ಸದಸ್ಯರು ಗಟ್ಟಿಯಾಗಿ ಧ್ವನಿ ಎತ್ತಬೇಕು ಅಂದಾಗ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯ ಎಂದರು.ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ, ಉಪಾಧ್ಯಕ್ಷ ಶ್ರೀಕಾಂತ ಅಸೋದೆ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಪುನಿತ್ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಅಮೂಲ ನಾವಿ, ಹೋರಾಟಗಾರರಾದ ರಾಜೇಂದ್ರ ಪಾಟೀಲ, ಶ್ರೀಕಾಂತ ಚೌಗಲಾ, ಬಾಳು ಕೋರೆ, ಖಾನಪ್ಪಾ ಬಾಡಕರ,ಸಾಗರ ಬೋಸಲೆ, ಯಲ್ಲಪ್ಪಾ ಖೋತ, ಶೇಖರ್ ಪ್ರಭಾತ, ಅಶೋಕ ಭಂಡಾರಕರ, ನಾಗವ್ವಾ ಕುರಣಿ, ಮಹಾದೇವ ಪೂಜಾರಿ, ಕುಮಾರ ನಂದಿ, ಮಹೇಶ ಕಾಂಬಳೆ, ರಫೀಕ್ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು