ವಿಷಯಕ್ಕೆ ಹೋಗಿ
ಕರವೇ ರಾಜ್ಯಾಧ್ಯಕ್ಷ ನಾರಾಯನಗೌಡರನ್ನು ಸೇರಿ 29 ಜನ ಕನ್ನಡ ಕಾರ್ಯಕರ್ತರನ್ನು, 14 ದಿವಸಗಳ ಕಾಲ ನ್ಯಾಯಾಂಗ ಬಂಧನ ಮಾಡಿದ್ದು ಖಂಡನೀಯ, ಕೂಡಲೇ ಎಲ್ಲರನ್ನು ಬಿಡುಗಡೆಗೊಳಿಸಲು, ಕರವೇ ಚಿಕ್ಕೋಡಿ ಘಟಕದಿಂದ ಯಾಚ್ಚರಿಕೆ ಘಂಟೆ,. ಚಿಕೋಡಿ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಏ ನಾರಾಯಣಗೌಡರ ಬಂಧನ ಮಾಡಿರುವುದು ಸರಿ ಇಲ್ಲ, ಕನ್ನಡ ನಾಡು ನುಡಿ ಜನಕೋಸ್ಕರ ಕಳೆದ 35 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ನಾರಾಯಣಗೌಡರ ಬಗ್ಗೆ ರಾಜ್ಯ ಸರ್ಕಾರ ಇವರ ಕಾಳಜಿ ವಹಿಸಬೇಕಾಗಿತ್ತು. ಮೊನ್ನೆ ನಡೆದ ನಾಮಪಲಕ ಹೋರಾಟದಲ್ಲಿ ಯಾವುದೇ ರೀತಿ ಕಾನೂನು ಕೈಗೆ ತೆಗೆದುಕೊಳ್ಳದೆ ಯಾವುದೇ ತಪ್ಪು ಮಾಡದೆ ಮೊದಲೇ ರಾಜ್ಯ ಸರ್ಕಾರಕ್ಕೂ ಮತ್ತು ಅಂಗಡಿ ಕಾರರಿಗೆ ಸೂಚನೆ ನೀಡಿ ಹೋರಾಟ ಮಾಡಿದ್ದಾರೆ ಆದರೂ ಕೂಡ ಇವರ ಬಂದನವಾಗಿದ್ದು ನಾವು ಖಂಡಿಸುತ್ತೇವೆ ಇನ್ನು 24 ಗಂಟೆ ಒಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಕನ್ನಡ ಹೋರಾಟಗಾರ ಸಂತೋಷ್ ಪೂಜಾರಿ ಒತ್ತಾಯಿಸಿದ್ದಾರೆ ಸಂಜಯ್ ಪಾಟೀಲ್ ನಂದ ಕುಮಾರ್ ನಂದಿ. ರವಿ ನಾಯಕ್ ಸೇರಿದಂತೆ ಉಪಸ್ಥಿತರಿದ್ದರು
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು