ವಿಷಯಕ್ಕೆ ಹೋಗಿ
ಪುಣೆ : ನಗರಿಯ ಚಿಂಚವಾಡ ಭಾಗದಲ್ಲಿರುವ ಎಲ್ಟ್ರೋ ಸಭಾಗ್ರಹದಲ್ಲಿ ಕನ್ನಡಿಗರ ನಮ್ಮವರ ಸಂಘ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ಧ ನಮ್ಮವರ ಹಬ್ಬ ಕನ್ನಡಿಗರ ಹಬ್ಬ 2023 ರ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರ ಜನಪದ ಹಾಡುಗಾರಿಕೆ ಹಾಸ್ಯ ಕಲಾ ಪ್ರದರ್ಶನ ಎಲ್ಲರ ಗಮನಸೆಳೆಯಿತು.ಗವಿಶಿದ್ಧಯ್ಯ ನವರ"ಗುರುವೇ ನಿನ್ನಾಟ ಬಲ್ಲವರು ಯಾರ್ಯರೋ " ತರವಲ್ಲ ತಗೀ ನಿನ್ನ ತಂಬೂರಿ ಸ್ವರ" ಮುಂತಾದ ಜನಪದ ತತ್ವ ಪದಗಳಿಗೆ ಚಪ್ಪಾಳಿ ತಟ್ಟುವದರೊಂದಿಗೆ ,ಗ್ರಾಮೀಣ ಶೈಲಿಯ ಹಾಸ್ಯ ಪ್ರಸಂಗದ ಮಾತುಗಳಿಗೆ ಜನ ನಗೆಗಡಲಲ್ಲಿ ತೇಲಿದರು.ಕನ್ನಡ ನಾಡಿನ ಮೂಲ ಪರಂಪರೆಯ ಜನಪದ ಕಲೆಗಳ ಮಹತ್ವ ಸಾರಿದ ಗವಿಶಿದ್ಧಯ್ಯ ನವರು ತಮ್ಮ ಜನಪದ ಕಲೆಯ ಮೂಲಕ ಕನ್ನಡ ಪ್ರೇಮತ್ವ ತುಂಬಿದರು.ವಾವ್ ಪವರ್ ಯೋಗದ ಸಂಸ್ಥಾಪಕಿಯಾದ ಕನ್ನಡತಿ ಡಾ.ಭಾಗೀರಥಿ, ಶ್ರೀ ಶಿವಲಿಂಗ ಡವಳೇಶ್ವರ,ಶ್ರೀ ಚಂದ್ರಕಾಂತ ಹಾರಕೋಡ,ನಮ್ಮವರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಹೀರೆಮಠ ,ಬಸವರಾಜ ಪಟ್ಟಣಶೆಟ್ಟಿ,ಶರತ್ ಐರಾಣಿ,ಅವಿನಾಶ ಹೊಸಮನಿ,ಮುರಗೇಶ ಗಿರಿಸಾಗರ,ಅಮಿತ್ ಇನಾಮದಾರ,ಪರಾಗ ಮುಳಗುಂದ,ಬಿಂದು ಮಾಧವ ದೇಸಾಯಿ,ಜಾನ್ಸಿರಾವ್,ನೀಲಾ ಹೀರೆಮಠ, ಮಾಲತೇಶ ಕುಲಕರ್ಣಿ,ಸೇರಿದಂತೆ ಮುಂತಾದವರು ಪಾಲ್ಲೋಂಡಿದ್ಧರು.ಪುಣೆಯ ನಮ್ಮವರ ಸಂಘ ಹಮ್ಮಿಕೊಂಡಿದ್ಧ ಕನ್ನಡ ರಾಜ್ಯೋತ್ಸವದ ಇ ಕಾರ್ಯಕ್ರಮದಲ್ಲಿ 600ಕ್ಕೂ ಅಧಿಕ ಜನರು ಭಾಗವಹಿಸಿದ್ಧರು.---------ದಿನಾಂಕ-7-12-2023.ಹೆಚ್ಚಿನ ಮಾಹಿತಿಗಾಗಿ-9962513970,6362270699.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು