ವಿಷಯಕ್ಕೆ ಹೋಗಿ
ರಾಯಬಾಗ : ತಾಲೂಕೀನ ರಾಯಬಾಗ ಪಟ್ಟಣದ ಪ್ರವಾಸಿಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮೀತಿ ಯಿಂದ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ರಾಯಬಾಗ ಉಪ ತಾಲೂಕ ಘಟಕದ ಪಧಾಧಿಕರಿಗಳ ಆಯ್ಕೆ ನಡೆಯಿತು, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅದ್ಯಕ್ಷ ಸಂಜು ಬಡಗೇರ ರವರ ನೇತ್ರತ್ವದಲ್ಲಿ ನೇಡೆದ ಪಧಾಧಿಕಾರಿಗಳ ಆಯ್ಕೆ ನೂತನ ರಾಯಭಾಗ ತಾಲೂಕ ಅದ್ಯಕ್ಷರಾಗಿ ಕುಮಾರ ನಂದಿ ಉಪಾಧ್ಯಕ್ಷ ರಾಗಿ ರಾಕೇಶ ಅವಳೆ ಚಿಕ್ಕೋಡಿ ಜಿಲ್ಲಾ ನಗರ ಸಭಾ ಸದಸ್ಯರಾಗಿ ಸಂಜಿವ ದೊಡಮನಿ ಇವರನ್ನು ಆಯ್ಕೆ ಮಾಡಲಾಯಿತು.ಈ ಸಮಯದಲ್ಲಿ ಸಂಘದ ಅದ್ಯಕ್ಷರಾದ ಸಂಜು ಬಡಗೇರ ಮಾತನಾಡಿ ಚಿಕ್ಕೋಡಿ ಜಿಲ್ಲೆ ಆಗಬೇಂದು ಹಲವಾರು ವರ್ಷಗಳಿಂದ ಹೋರಾಟ ಮಾಡಿದರು ಕೂಡ ರಾಜಕೀಯ ವ್ಯಕ್ತಿಗಳ ಹಿತಾಶಕ್ತಿಕೊರತೆಯಿಂದ ಇನ್ನೂವರೆಗೆ ಚಿಕ್ಕೋಡಿ ಜಿಲ್ಲೆ ಮಾಡಲು ಹಿಂದೆಟು ಹಾಕುತ್ತಿದ್ದಾರೆ,ಬರುವ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯನ್ನ ಘೋಷಿಸಬೇಂದು ಆಗ್ರಹಿದರು,ಸಮಾಜ ಸೇವಕರಾದ ಚಂದ್ರಕಾತ ಹುಕ್ಕೆರಿ ರವರು ಕರ್ನಾಟಕ ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆ ಬೆಳಗಾವಿ ಇಲ್ಲಿ ಐವತ್ತು ಲಕ್ಷ ಜನಸಂಖ್ಯೆ ಹೊಂದಿದ್ದು ಇಂತಹ ದೊಡ್ಡ ಜಿಲ್ಲೆಯನ್ನು ವಿಭಜನೆಮಾಡದೆ ರಾಜಕಾರಣಿಗಳು ತಮ್ಮ ಸಂತ ಲಾಭಕ್ಕಾಗಿ ಜಿಲ್ಲೆ ವಿಭಜನೆ ಮಾಡಲು ಹಿಂದೆಟು ಹಾಕೂತ್ತಿದ್ದಾರೆ.ಇಲ್ಲಿ ಬಡವರು ಬೆಳೆಯಬಾರದು ನಾವು ನಮ್ಮ ಕುಟುಂಬ ಮಾತ್ರ ಬೆಳೆಯಬೇಕು ಎನ್ನುವ ಕಾರಣಕ್ಕಾಗಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಲು ಹಿಂದೆಟು ಹಾಕೂತ್ತಿದ್ದಾರೆ ಎಂದು ಮಾದ್ಯಮ ಪ್ರತಿನಿಗಳ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರುಈ ಸಂದರ್ಭ ದಲ್ಲಿ ತ್ಯಾಗರಾಜ್ ಕದಮ್ ,ಸಂಜಯ ಪಾಟೀಲ,ಸತೀಶ ಚಿಂಗಳೆ ,ಜಿಲಾ ಹೊರಾಟ ಸಮಿತಿಯ ಮುಖಂಡ ,ರವಿ ನಾಯಕ ,ಸಚಿನ ದೊಡಮನಿ ,ಸತೀಶ ಚಿಂಗಳೆ, ಮಾರೂತಿ ನಂದಿ ,ಮುಬಾರಕ್ ಡೊಂಗರೆ , ಪ್ರಕಾಶ ಬೆಡರ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು