ವಿಷಯಕ್ಕೆ ಹೋಗಿ
"" ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು"", ವಿಧ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಈ ನಾಡಿಗೆ ಕೊಡುಗೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದರೆ ಇಲ್ಲಿ ಶಿಕ್ಷಕರ ಕಿತ್ತಾಟದಿಂದಾಗಿ ಮಕ್ಕಳ ಭವಿಷ್ಯ ಬಲಿಯಾದಂತಿದೆ. ಹೌದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಂಡೊಳ್ಳಿ ಗ್ರಾಮದ ಶಾಲೆಯಲ್ಲಿ ಈ ಪರಸ್ಥಿತಿ ನಿರ್ಮಾಣ ವಾಗಿದೆ.ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸುಮಾರು 40 ಬಡ ವಿಧ್ಯಾರ್ಥಿಗಳಿಗೆ ಇಬ್ಬರೂ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಶಿಕ್ಷಕರ ಹೊಂದಾಣಿಕೆ ಕೊರತೆಯಿಂದಾಗಿ ಪ್ರತಿನಿತ್ಯ ಶಿಕ್ಷಕರಿಬ್ಬರು ಜಗಳವಾಡುತ್ತಾ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗಿದ್ದಾರೆ.ಮುಖ್ಯ ಶಿಕ್ಷಕ ರಾಮಣ್ಣ ಮತ್ತು ಸಹ ಶಿಕ್ಷಕಿ ವಿಜಯಲಕ್ಷ್ಮೀ ಅವರ ನಡುವಿನ ಹೊಂದಾಣಿಕೆ ಕೊರತೆಯಿಂದ ಪ್ರತಿನಿತ್ಯ ಚೀರಾಟ, ಕೂಗಾಟಕ್ಕೆ ಬೇಸತ್ತ ಬಂಡೊಳ್ಳಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ, ಶಾಲೆ ಬಂದ ಮಾಡಿದ್ದಾರೆ. ಶಿಕ್ಷಕರ ಸಮಸ್ಯೆ ಬಗೆಹರಿಸಿದ ನಂತರವಷ್ಟೇ ಶಾಲೆ ಬಾಗಿಲು ತೆಗೆಯುವಂತೆ ಗ್ರಾಮಸ್ಥರು ಬೀಗಿ ಪಟ್ಟು ಹಿಡಿದಿದ್ದಾರೆ. ವರದಿ : ಪರಶುರಾಮ ನಾಯಕ ಸುರಪುರ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು