ವಿಷಯಕ್ಕೆ ಹೋಗಿ
ಚಿಕ್ಕೋಡಿ: ಅಂತರ ರಾಜ್ಯ ರಾತ್ರಿ ಮನೆ ಕಳ್ಳರ ಬಂಧನ ಚಿಕ್ಕೋಡಿ ಪಟ್ಟಣದ ರಾಜೀವ ನಗರದಲ್ಲಿ ದಿನಾಂಕ: 11.12.2023 ರಂದು 23:00 ಗಂಟೆಯಿಂದ” ದಿನಾಂಕ: 12.12.2023 ರಂದು 04:30 ಗಂಟೆಯ ನಡುವಿನ ವೇಳೆಯಲ್ಲಿ ಪಿರ್ಯಾದಿ ಭಾರ್ಗವಿ ತಂದೆ ಬಸವಂತ ಕಂಟಕರ ಸಾ|| ಚಿಂಚಣಿ ಹಾಲಿ-ಚಿಕ್ಕೋಡಿ ರಾಜೀವ ನಗರ ಇವರ ಮನೆಯನ್ನು ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಮನೆ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಚಿಕ್ಕೋಡಿ ಪೋಲೀಸ್ ಠಾಣೆ ಅಪರಾಧ ಸಂಖ್ಯೆ: 283/2023 ಕಲಂ: 457, 380 ಐಪಿಸಿನೇ ಪ್ರಕರಣ ದಾಖಲಾಗಿರುತ್ತದೆ.ಈ ಪ್ರಕರಣವನ್ನು ಪತ್ತೆ ಮಾಡುವ ಕುರಿತು ಮಾನ್ಯ ಡಾ|| ಭೀಮಾಶಂಕರ ಗುಳೇದ, ಐಪಿಎಸ್, ಆರಕ್ಷಕ ಅಧೀಕ್ಷಕರು ಬೆಳಗಾವಿ ಜಿಲ್ಲೆ ಬೆಳಗಾವಿ ಹಾಗೂ ಮಾನ್ಯ ಶ್ರೀ ರಾಮಗೊಂಡ ಬಸರಗಿ ಹೆಚ್ಚುವರಿ ಪೊಲೀಸ ಅಧೀಕ್ಷರು ಬೆಳಗಾವಿ ಮತ್ತು ಮಾನ್ಯ ಶ್ರೀ ಗೋಪಾಲಕೃಷ್ಣ ಗೌಡರ ಪೊಲೀಸ್ ಉಪಾದೀಕ್ಷಕರು ಚಿಕ್ಕೋಡಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶ್ರೀ ಎನ್. ಸಿ. ಕಾಡದೇವರ ಸಿಪಿಐ ಚಿಕ್ಕೋಡಿರವರ ನೇತೃತ್ವದಲ್ಲಿ ಶ್ರೀ ಸಚೀನಕುಮಾರ ದಾಸರಡ್ಡಿ ಪಿಎಸ್‌ಐ (ಕಾ & ಸು) ಚಿಕ್ಕೋಡಿ, ಶ್ರೀಮತಿ ಸುನಂದಾ ತಮಗೊಂಡ ಪಿಎಸ್‌ಐ (ಹೆಚ್ಚುವರಿ) ಚಿಕ್ಕೋಡಿ, ಹಾಗೂ ಸಿಬ್ಬಂದಿ ಜನರಾದ ಎಸ್. ಜೆ. ಬಡಿಗೇರ, ಶ್ರೀಮತಿ ರೇಣುಕಾ ಮಾದರ, ಗಜಾನನ ಎಸ್. ಕಾಂಬಳೆ, ಎಸ್. ಪಿ. ಗಲಗಲಿ, ಆರ್. ಜಿ. ಕುಳ್ಳೋಳ್ಳಿ, ಎಮ್. ಪಿ. ಸತ್ತಿಗೇರಿ, ಸಚೀನ ಚೌಗಲಾ, ಸುನೀಲ ಕುಂಬಾರ, ರಮೇಶ ಶೀಳನವರ ಹಾಗೂ ಟೆಕ್ನಿಕಲ್ ಸೆಲ್ ವಿಭಾಗದ ವಿನೋದ ಠಕ್ಕಣ್ಣವರ ಇವರು ತನಿಖೆ ಕೈಕೊಂಡು ಇಬ್ಬರೂ ಆರೋಪಿತರಿಗೆ ಬಂಧಿಸಿದ್ದು, ಸದರಿ ಆರೋಪಿತರು ಚಿಕ್ಕೋಡಿ ಪಟ್ಟಣದ ರಾಜೀವ ನಗರದಲ್ಲಿ ರಾತ್ರಿ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಆರೋಪಿತರಿಂದ 6.5 ಲಕ್ಷ ರೂಪಾಯಿ ಕಿಮ್ಮತ್ತಿನ ಒಟ್ಟು 100ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದು ಇರುತ್ತದೆ. ಸದರಿ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ.. ವರದಿ ಸಂತೋಷ್ ಪಾಟೀಲ್, ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು