ವಿಷಯಕ್ಕೆ ಹೋಗಿ
ಹುಕ್ಕೇರಿ ತಾಲೂಕಿನ ಶಿರಹಟ್ಟಿ B.K. ಶಿರಹಟ್ಟಿ K.D.ಮತ್ತು ಸಾರಾಪೂರ , ಗ್ರಾಮಗಳಲ್ಲಿ. ವೆಲ್ನೆಸ್ ನ್ಯೂಟ್ರಿಷನ್ ಹೆಲ್ತ್ ಕೇರ್ ಸೆಂಟರ್ ಬೆಳಗಾವಿಯ ವತಿಯಿ0ದ , ದಿನಾಂಕ 21-22 ಮಾರ್ಚ ರಂದು ಪೌಷ್ಠಿಕ ಆಹಾರ ಮತ್ತು ಆರೋಗ್ಯ ಬಗ್ಗೆ ಸಮಗ್ರ ಮಾಹಿತಿ, ಜಾಗೃತಿ ಮತ್ತು ಚಿಕಿತ್ಸೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಪುಣೆಯ ಪ್ರಸಿದ್ಧ ವೈದ್ಯರಾದ , Dr.ಮಿಲಿಂದ್ ಬಿಂದು , MBBS. DA.MPH. ಮತ್ತು ಬೆಳಗಾವಿಯ ಪೌಷ್ಠಿಕ ಮತ್ತು ಪ್ರಾಕೃತಿಕ ಚಿಕಿತ್ಸಾ ವೈದ್ಯರ ಮತ್ತು ಸ0ಸ್ಥೆಯ ಮುಖ್ಯಸ್ಥರಾದ Dr. ಸಿದ್ಧಾರ್ಥ್ ನಿನ್ನೆಕರ್ . ಅವರಗಳ ಆಧಿನದಲ್ಲಿ ಚಿಕಿತ್ಸಾ ಹಮ್ಮಿಕೊಳ್ಳಲಾಯಿತು,ಕಾರ್ಯಕ್ರಮದಲ್ಲಿ ಮಾತನಾಡುತ್ತಾ Dr.ಸಿದ್ಧಾರ್ಥ್ ನಿನ್ನೇಕೆರ್ , ಈಗಿನ ಎಲ್ಲ ಪ್ರಮುಖ ರೋಗ ಗಳಿಗೆ ತಪ್ಪು ಆಹಾರ ಪದ್ಧತಿ, ಬದಲಾದ ಜೀವನಶೈಲಿಗಳು ಮತ್ತು ಮಾಹಿತಿ ಇಲ್ಲದ ಪ್ರಾಕೃತಿಕ ಚಿಕಿತ್ಸೆ ಗಳು ಮುಖ್ಯ ಕಾರಣವೆ0ದು ತಿಳಿ ಹೇಳಿದರು.ಈಗಿನ ದಿನಗಳಲ್ಲಿ ಮುಖ್ಯ ರೋಗಗಳಾದ ಚಿಕ್ಕ ಮಕ್ಕಳ ಕಡಿಮೆ ಎತ್ತರ ಮತ್ತು ತೂಕ, ಹಸಿವು ಕಡಿಮೆಯಾಗುವುದು, ಕೈಕಾಲು ನೋವು, ಬೆನ್ನು ನೋವು, ಮೊಣಕಾಲು ನೋವು, ಸೋಂಟು ನೋವು, ಮೂಳೆ ಮತ್ತು ನರಗಳ ಸಮಸ್ಯೆ, ಕೈ ಕಾಲು ಜುಮ್ಮು , ಪಿತ್ತ, ಗ್ಯಾಸ್, ಅಸಿಡಿಟಿ, ದೇಹದಲ್ಲಿ ಶಕ್ತಿಯ ಕೊರತೆ, ಕಿಶೋರಿಯರ ಮತ್ತು ಮಹಿಳೆಯರ ರಕ್ತ ಹೀನತೆ , ಗುಪ್ತರೋಗ ಸಮಸ್ಯೆಗಳಿಗೆ ಇತರೆ ರೋಗಗಳಿಗೆಆಹಾರ, ಡಯಟ್ ಚಾರ್ಟ್ , ಜೀವನ ಶೈಲಿ ಬದಲಾವಣೆಗಳ ಸಮಾಲೋಚನೆ ಬಗ್ಗೆ ಮಾಹಿತಿ ಚಿಕಿತ್ಸೆ ಮತ್ತು ಬಿಎಂಡಿ ಸ್ಕಾನಿಂಗ್ ನೀಡಲಾಯಿತು. ಈ ಶಿಬಿರನಲ್ಲಿ ಸ0ಸ್ಥೆಯ ಮಹಿಳಾ ಆರೋಗ್ಯ ಸಮಾಲೋಚಕಿ ಭಾಗ್ಯಶ್ರೀ, ಆಶಾ ಕಾರ್ಯಕರ್ತೆಯರು , ಹಿರಿಯ PRO ರಮೇಶ್ , ಇತರೆ PRO ರೋಹಿಣಿ, ಸುರೇಖಾ, ಗ್ರಾಮ ಪಂಚಾಯತ ಸಿಬ್ಬ0ದಿ, ಎಲ್ಲ ಗ್ರಾಮಸ್ಥರು ಸೇರಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು