ವಿಷಯಕ್ಕೆ ಹೋಗಿ
ಅಪ್ಪಾಸಾಹೇಬ ಕುರಣೆ ಸಣ್ಣ ವಯಸ್ಸಿನಲ್ಲಿಯೇ ಸಾಮಾಜಿಕ ಕಳಕಳಿಯನ್ನು ರಾಜಕೀಯ ಚತುರತೆಯನ್ನು ಹೊಂದಿರುವ ಯುವ ನಾಯಕ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಎಕ್ಸಂಬ ಗ್ರಾಮದ ಬಡ ಕುಟುಂಬದಿಂದ ಬಂದ ಈ ಯುವನಾಯಕ ಇಂದು ತನ್ನ ಸಾಮಾಜಿಕ ಸೇವೆ, ಹೋರಾಟಗಳಿಂದ ಈ ಭಾಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಆಂಟಿ ಕರಪ್ಷನ್ ದಲ್ಲಿ ರಾಜ್ಯಮಟ್ಟದ ಹುದ್ದೆಯೊಡನೆ ಗೋವಾ ರಾಜ್ಯದಲ್ಲಿ ಆಂಟಿ ಕರಪ್ಷನ್ ದ ಪ್ರಮುಖ ಹುದ್ದೆಯ ಜೊತೆ ಪತ್ರಕರ್ತನಾಗಿಯೂ ಸೇವೆ ಸಲ್ಲಿಸುತ್ತಿರುವ ಕರುಣೆಯವರು ಈ ಭಾಗದ ಹುಲಿ ಎಂದೆ ಖ್ಯಾತರಾಗಿದ್ದಾರೆ. ವ್ರಕಾಶ್ ಹುಕ್ಕೇರಿಯವರ ವಿರುದ್ಧ ಎಂ ಎಲ್ ಎ ಹಾಗೂ ಎಮ್ ಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಈ ಭಾಗದ ವಯಸ್ಸಾದ ಧೂರೀಣರ ನಡುವೆ ತೃತೀಯ ಶಕ್ತಿ ಎಂದೇ ಗುರುತಿಸಿಕೊಂಡಿರುವ ನಾಯಕ ಹಣ ಬಲವೊಂದಿದ್ದರೆ ಈಗಾಗಲೇ ಶಾಸಕರಾಗಿರುತ್ತಿದ್ದರು. ಆದರೂ ತಮ್ಮ ಸಂಘಟನಾತ್ಮಕ ಹೋರಾಟ, ಸಮಾಜ ಸೇವೆಗಳಿಂದ ಬರುವ ವರ್ಷಗಳಲ್ಲಿ ಈ ಭಾಗದ ಶಾಸಕರಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಾರೆ ಎಂಬದು ಬಹುತೇಕ ಜನರ ಅಭಿಪ್ರಾಯ.ಏಕೆಂದರೆ ಈ ಭಾಗದಲ್ಲಿ ಯಾರೇ ಬಡವರು,ಹಿಂದುಳಿದವರು ಏನೇ ಸಹಾಯ ಕೇಳಿದರು ಹೃದಯಪೂರ್ವಕವಾಗಿ ಮಾಡುತ್ತಾರೆ. ಸದಾ ನಗುತ್ತಾ, ನಗಿಸುತ್ತ ದೊಡ್ಡ ಸ್ನೇಹ ಬಳಗವನ್ನು ಹೊಂದಿರುವ ಅಪ್ಪಾ ಸಾಹೇಬ್ ಕೊರಣೆ ಇವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲ ಆಗಲಿ ಎಂಬ ಹಾರೈಕೆ ನಮ್ಮದು. ವರದಿ :- ಮೋಸಾ ನದಾಫ್, ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು