ವಿಷಯಕ್ಕೆ ಹೋಗಿ
ರಾಯಬಾಗ್ : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ.ತಾಲೂಕು ದಂಡಾಧಿಕಾರದ ಕಾರ್ಯಾಲಯದಲ್ಲಿ ದಂಡಾಧಿಕಾರಿಗಳಾದ ಪ್ರಶಾಂತ ಚನಗೊಂಡ ಅವರ ಅಧ್ಯಕ್ಷತೆಯಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವುದರೊಂದಿಗೆ 133 ನೇ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪೃಥ್ವಿ ದಶವಂತ್ ವಿದ್ಯಾರ್ಥಿನಿಯಾದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದಳು ಇತಿಹಾಸವನ್ನು ಮರೆತವ ಇತಿಹಾಸವನ್ನು ಸೃಷ್ಟಿಸಲಾರ, ಭಾರತ ರತ್ನ, ವಿಶ್ವದ ಧ್ಯಾನ, ಮಹಾ ಮಾನವತಾವಾದಿ, 193 ರಾಷ್ಟ್ರಗಳು ಗೌರವ ಸೂಚಿಸುವ ಏಕೈಕ ಮಹಾನ್ ವ್ಯಕ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತ್ರ. ಭಾರತದ ಸಂವಿಧಾನವನ್ನೂ ಕೊಡುಗೆಯಾಗಿ ನೀಡಿರುವ ಮಹಾನ್ ವ್ಯಕ್ತಿ ಬಿ ಆರ್ ಅಂಬೇಡ್ಕರ್, ಸಂವಿಧಾನ ಶಿಲ್ಪಿಯ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಈ ಸಂಸ್ಕೃತಿಯನ್ನು ನೀಡೋಣ ಎಂದು ತನ್ನ ಅಚ್ಚುಕಟ್ಟಾದ ಭಾಷಣದಲ್ಲಿ ಮನಮಟ್ಟಿಸಿದಳು.ಈ ಸಂದರ್ಭದಲ್ಲಿ ಪ್ರಶಾಂತ್ ಚನಗೊಂಡ ತಹಶೀಲ್ದಾರರು ರಾಯಬಾಗ್, ಪರಮಾನಂದ ಮಂಗಸುಳೆ ಗ್ರೇಡ್ ಟು ತಹಶೀಲ್ದಾರರು, ಅಯ್ ಕೆ ಹಿರೇಮಠ ರೆಕಾರ್ಡರ್ ಸಿರಸ್ತಿದಾರರು, ರವಿ ಸಂಕನಗೌಡ ಸಬ್ ರಿಜಿಸ್ಟರ್ ಅಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವರದಿ :- ರಮೇಶ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು