ವಿಷಯಕ್ಕೆ ಹೋಗಿ
ರಾಯಭಾಗ ತಾಲೂಕಾ ಆಡಳಿತ ,ತಾಲೂಕ ಪಂಚಾಯತ ಪಟ್ಟಣ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲ್ಲಾಖೆ ರಾಯಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪ ಡಾ// ಬಿ ಆರ್ ಅಂಬೇಡ್ಕರ್ ರವರ 133 ನೇ ಜನ್ಮ ದಿನಾಚರಣೆಯನ್ನು ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ ರಾಯಬಾಗ್ ಈ ದಿವ್ಯ ವೇದಿಕೆಯ ಮೇಲೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಈ ಸಂದರ್ಭದಲ್ಲಿ ಗಣ ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾದ ಡಾ. ಪ್ರಮೊದ ಹಳೆಮನಿ ಅವರು ಮಾತನಾಡಿ ಅಂಬೇಡ್ಕರ್ ರವರು ನುಡಿದ ಮಾತನ್ನು ನೆನಪಿಸಿದರು" ನಾನೋಬ ಸಮಾಜ ಸುದಾರಕ, ಕ್ರಾಂತಿಕಾರಿ ಎಂದು ಕರೆಯಿರಿ " ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳು ಏನಾಗಿದ್ದವು ಎಂದರೆ ಶಿಕ್ಷಣ, ಸಂಘಟನೆ, ಹೋರಾಟ, ಇವುಗಳನ್ನು ಸಾಕಾರಗೊಳಿಸುವುದು ಶಿಕ್ಷಣ ಎಂಬುದು ಹುಲಿ ಹಾಲು ಇದ್ದಂತೆ ಹುಲಿ ಹಾಲು ಕುಡಿದವ ಘರ್ಜಿಸಲೇಬೇಕು, ಎಲ್ಲರನ್ನು ಮೇಲೆ ಕೆತ್ತುವ ಒಂದೇ ಒಂದು ಮಂತ್ರ ಅದುವೇ ಶಿಕ್ಷಣ, ಶಿಕ್ಷಣ ಕಲಿಯಿರಿ ಪಡೆಯಿರಿ ಮತ್ತೆ ಮುಂದಿನ ಪೀಳಿಗೆಗೆ ಒಂದು ಬಾವಿ ಭವಿಷ್ಯತ್ ರೂಪಿಸುವ ಶಿಕ್ಷಣವನ್ನು ನೀಡಿ. ಸಂಘಟನೆ ಎಂದರೆ ಗುಂಪು ಗಣ ಇದರ ಮುಖಾಂತರ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿ, ಇವತ್ತಿನ ಸಂಘಟನೆಗಳು ಅಂಬೇಡ್ಕರ್ ಹೆಸರನ್ನು ಬಿಜನೇಸಕ್ಕಾಗಿ ಬಳಸಿಕೋಳುತ್ತಿದಾರೆ ಎಂದು ಕೆಲ ಸಂಘಟನೆಗಳು ಅಂಬೇಡ್ಕರ್ ರವರ ಹೆಸರು ಕೆಡಿಸಬಾರದು ಎಂದು ಕಿವಿ ಮಾತು ಹೇಳಿದರು. ಕೊನೆಯದಾಗಿ ಹೋರಾಟ ಹೋರಾಟ ಮಾಡಿ ಯಾವುದಕ್ಕಾಗಿ ಅದರ ಉದ್ದೇಶ ಏನು ಅದರ ಪರಿಣಾಮವೇನು ಅದರ ಲಾಭವೇನು ಎಂಬುದನ್ನು ತಿಳಿದುಕೊಂಡು ಹೋರಾಟಕ್ಕೆ ಇಳಿಯಿರಿ ಅನಾವಶ್ಯಕವಾಗಿ ಯಾರೋ ಹೇಳಿದ್ದಾರೆ ಎಂದು ನೀವು ಹೊಡೆದಾಡಲಿಕ್ಕೆ ಹೋಗಬೇಡಿ ಹೊಡೆದಾಡಿದ ಬಳಿಕ ನೀವು ಸ್ಟೇಷನ್ ದಲ್ಲಿ ಹೊಡೆದಾಡಲಿಕ್ಕೆ ಹೇಳಿದವರು ಫಾರಿನ್ ನಲ್ಲಿ, ಸಮಾನ ಕೆಲಸಕ್ಕೆ ಸಮಾನ ವೇತನ, ಮತದಾನದ ಹಕ್ಕು, ಮೀಸಲಾತಿ ನಾನಾ ರೀತಿಯ ಸೌಲತ್ತುಗಳನ್ನು ಒದಗಿಸಿಕೊಟ್ಟವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅವರ ತತ್ವ ಆದರ್ಶಗಳ ಹಾದಿಯಲ್ಲಿ ಸಾಗೋಣ ಎಂದರು.ಈ ಸಂದರ್ಭದಲ್ಲಿ ಪ್ರಶಾಂತ ಚೆನ್ನಗೊಂಡ ತಹಶಿಲ್ದಾರರು ರಾಯಬಾಗ್, ಆನಂದ್ ಕುಮಾರ್ ಬಾಳಪ್ಪನವರ್ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಬಾಗ್, ಮನೋಜ ಕುಮಾರ ಗುರಿಕಾರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ರಾಯಬಾಗ,ವಿ ಎಸ್ ಚಂದರಗಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ರಾಯಬಾಗ, ಬಸವರಾಜಪ್ಪ ಆರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಯಬಾಗ, ಅರುಣ ಕುಮಾರ್ ಆರಕ್ಷಕ ನಿರೀಕ್ಷಕರು ರಾಯಭಾಗ, ಐಶ್ವರ್ಯ ನಾಗರಾಳೆ ಪಿಎಸ್ಐ ರಾಯಭಾಗ,ವಿಶ್ವನಾಥ ಹಾರೂಗೇರಿ, ಸೋಮಗೌಡ ಪಾಟೀಲ ಆರೋಗ್ಯ ಇಲಾಖೆಯ ಅಧಿಕಾರಿಗಳು, ಡಾ ಅರುಣ ಕಾಂಬಳೆ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಬಾಗ ಹಾಗೂ ಗಣೇಶ ಕಾಂಬಳೆ DSS ಅಧ್ಯಕ್ಷರು,ಯುವ ದುರಿನರು ಉಪಸ್ಥಿತರಿದ್ದರು. ವರದಿ :- ರಮೇಶ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು