ವಿಷಯಕ್ಕೆ ಹೋಗಿ
.ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಹಾಗೂ ಪ್ರಪಂಚದ ಅತಿ ದೊಡ್ಡ ಗಣ ಜನತಂತ್ರ ಸಂವಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಹೃದಯವೇ ಪ್ರಜೆಗಳು. ಚುನಾವಣೆ ಮತ್ತು ಮತದಾನ ಇವು ಒಂದೇ ನಾಣ್ಯದ ಎರಡು ಮುಖಗಳು ಚುನಾವಣೆ ಪ್ರಕ್ರಿಯೆಯು ಪರಿಪೂರ್ಣವಾಗುವುದು ಮತದಾರರಿಂದ ಮತ ಚಲಾಯಿಸುವುದರಿಂದ.ಜಾತಿ,ಲಿಂಗ, ಧರ್ಮ, ಸಾಮಾಜಿಕ ಸ್ಥಾನ - ಮಾನ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೆ ಈ ಭಾರತ ದೇಶದಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲ ವಯಸ್ಕ ಪ್ರೌಢ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನಮ್ಮ ದೇಶದ ಹೃದಯ ಎನಿಸಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ರವರ ರಚಿತ ಭಾರತದ ಸಂವಿಧಾನದಲ್ಲಿ ನೀಡಲಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ಭಾರತ ದೇಶ ಪ್ರಜೆಗಳೇ ದೇವರುಗಳು ಪ್ರಭುಗಳೇ ಪೂಜಾರಿಗಳು ಎಂಬ ಮಾತನ್ನು ಎಲ್ಲರೂ ತಿಳಿದುಕೊಂಡು ಮತದಾನದ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ 5 ವರ್ಷಕ್ಕೊಮ್ಮೆ ಬರುವ ಈ ಚುನಾವಣೆಯ ಪರ್ವದಲ್ಲಿ ಮತದಾನ ಪ್ರಭುಗಳು ಮೊದಲು ಬುದ್ಧಿವಂತರಾಗಬೇಕು ಆದರೆ ಈ ಬುದ್ಧಿವಂತಿಕೆ ಬರುವುದು ದೇವರ ಅನುಗ್ರಹದಿಂದಲ್ಲ ಹೊರತು ಶಿಕ್ಷಣದಿಂದ ಮೊಟ್ಟ ಮೊದಲು ನಾವೆಲ್ಲರೂ ಶಿಕ್ಷಣ ಪಡೆಯಬೇಕು ಶಿಕ್ಷಣ ವೆಂಬ ಚಿಲುಮೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಚಿಂತನ ಮಂಥನ ನ್ಯಾಯ - ಅನ್ಯಾಯ ವರೆಗೆ ಹಚ್ಚಲು ಒಂದು ಅದ್ವಿತೀಯ ಜ್ಞಾನ ನೀಡುತ್ತದೆ ಈ ದೇಶದ ಭವಿಷ್ಯವನ್ನು ಬರೆಯುವುದು ದೇವ ದೇವತೆಗಳಲ್ಲ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ರಾಷ್ಟ್ರದ ಬಹುತೇಕ ಮತದಾರರು ಪೂರ್ವಾಗ್ರಹ ಪೀಡಿತರಾಗಿ ಮತದಾನ ಮಾಡುತ್ತಲೇ ಬಂದಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ ಕಾಟಾಚಾರಕ್ಕೆ ಮತದಾನ ಮಾಡದೆ ವಿವೇಚನೆಯಿಂದ ಮತ ಚಲಾಯಿಸಬೇಕು ನಮ್ಮ ಒಂದು ಮತ ಚಲಾಯಿಸದಿದ್ದರೆ ದೇಶವೇನೋ ಹಾಳಾಗುವುದಿಲ್ಲ ಎಂಬೆಂತಹ ಉಡಾಫೆಯನ್ನು ಬಿಟ್ಟು ನಮಗೆ ಯೋಗ್ಯ ಅನಿಸಿರುವ ಅಭ್ಯರ್ಥಿಗೆ ಮತ ಹಾಕಿ ನಮ್ಮ ಅಮೂಲ್ಯ ಹಕ್ಕನ್ನು ಸಾರ್ಥಕ ಪಡಿಸಿಕೊಳ್ಳೋಣ.ವಾಸ್ತವ ಸತ್ಯ ಚುನಾವಣಾ ಅಖಾಡಕ್ಕೆ ಇಳಿಯುವ ಇಂದಿನ ನಾಯಕರು ಇತ್ತೀಚಿನ ಚುನಾವಣೆಗಳಲ್ಲಿ ಮತದಾರರನ್ನು ತಮತ್ತ ಸೆಳೆಯಲು ತೆರೆ ಮೆರೆಯಲ್ಲಿ ಅನೇಕ ಕಸರತ್ತುಗಳನ್ನು ಮಾಡಿ ವಸ್ತು, ಆಭರಣ, ಗರಿ-ಗರಿ ನೋಟು ಸಾರಾಯಿ ಪ್ಯಾಕೆಟ್ಟುಗಳನ್ನು ಕೊಟ್ಟು ಮತದಾರ ಪ್ರಭುಗಳನ್ನು ತಾತ್ಕಾಲಿಕವಾಗಿ ತೃಪ್ತಿಗೊಳಿಸುವ ಕಾರ್ಯ ಮಾಡುತ್ತಾರೆ ವಿನಹ ಇಲ್ಲಿ ಮತದಾರ ಪ್ರಭುಗಳು ಸ್ವಲ್ಪ ಆಲೋಚನೆ ಮಾಡಬೇಕು ಹಳ್ಳಿಗಳು ಸಮೃದ್ಧಿಯನ್ನು ಕಾಣಬೇಕಾದರೆ ಯೋಗ್ಯ ವ್ಯಕ್ತಿಗೆ ಮತ ಹಾಕುವ ದೃಢ ನಿರ್ಧಾರ ಮಾಡಬೇಕು ಇತ್ತೀಚಿಗೆ ಈ ಜಾತ್ಯಾತೀತ ರಾಷ್ಟ್ರದಲ್ಲಿ ನಾಯಕರಾಗಲು ಹೊರಟವರು ಜಾತಿಯ ಆಧಾರದ ಮೇಲೆ ಮತದಾರರ ಮೇಲೆ ಪ್ರಭಾವ ಬೀರಿ ಮತ ನೀಡಬೇಕು ಎಂದು ಪ್ರೇರೇಪಿಸುವ ಕಾರ್ಯ ಮಾಡುತ್ತಿರುವದೂ ಅತ್ಯಂತ ವಿಷಾದನೀಯ ಪ್ರಜಾಪ್ರಭುತ್ವದ ಕಗ್ಗೊಲೆಯ ಸಂಗತಿಯಾಗಿದೆ.ಪ್ರಸ್ತುತ ಭಾರತ ದೇಶದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಲವು ಹಂತಗಳಲ್ಲಿ ಮುಹೂರ್ತ ನಿಗದಿಯಾಗಿದೆ ಮತದಾನವೆಂಬುದು ನಮ್ಮ ಪವಿತ್ರ ಹಕ್ಕು ಸುಸಂಸ್ಕೃತ ಸಮೃದ್ಧ ಯೋಗ್ಯತೆ ಇರುವ ವ್ಯಕ್ತಿಗೆ ನಮ್ಮ ಅಮೂಲ್ಯ ಮತ ನೀಡಿ ಮತದಾನದ ಹಕ್ಕನ್ನು ಸಫಲತೆ ಮಾಡಿಕೊಳೋಣ ನಮ್ಮ ಒಂದು ಮತ ಕೋಟಿ ಕೋಟಿ ರೂಪಾಯಿಗಿಂತಲೂ ಅಮೂಲ್ಯವಾದದ್ದು ಅದಕ್ಕೆ ಬೆಲೆ ಕಟ್ಟಲಾಗದು. ಮತದಾರರು ತಮ್ಮ ಆತ್ಮಸಾಕ್ಷಿಯಾಗಿ ಸ್ವಯಂ ಪ್ರೇರಿತರಾಗಿ ನಿಗದಿಪಡಿಸಿದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿ ಬರಬೇಕು ಮತ ಹಾಕುವ ಪೂರ್ವದಲ್ಲಿ ಮತದಾರರಿಗೆ ಪಕ್ಷ ನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆ ಕಾಡುವುದು ಸಹಜ ಈ ಸಂದರ್ಭದಲ್ಲಿ ನಿಮಗೆ ಸರಿ ಎಂದೇನಿಸಿದ ಯೋಗ್ಯ ಅಭ್ಯರ್ಥಿಗೆ ಮತ ನೀಡಿ ಅಥವಾ ನಿಮಗೆ ಪಕ್ಷನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆ ಬೇಡ ಎನಿಸಿದರೆ ನೋಟಾಗೆ ಮತ ನೀಡಿ ಈ ಮೂಲಕ ತಿರಸ್ಕಾರ ಮಾಡುವ ಅನುಕೂಲತೆಯನ್ನು ಚುನಾವಣಾ ಆಯೋಗ ನೀಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ ನನ್ನ ಒಂದು ಮತ ಹಾಕದಿದ್ದರೆ ನಡೆಯುತ್ತದೆ ಎಂದುಕೊಂಡು ಮನೆಯಲ್ಲಿ ಕುಳಿತು ಉದಾಸೀನ ಮಾಡದೆ, ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ನಿಷ್ಠೆ ಪ್ರಾಮಾಣಿಕವಾಗಿ ಪಾಲ್ಗೊಂಡು ದೇಶದ ಹಿತ ಕಾಪಾಡುವ ಸುಸಂಸ್ಕೃತ ಸಮೃದ್ಧ ನಿಷ್ಠಾವಂತ ಪ್ರಾಮಾಣಿಕ ಕ್ರಿಯಾಶೀಲ ಪ್ರಜೆಗಳ ಪ್ರೀತಿ-ವಿಶ್ವಾಸ ಸಂಪಾದಿಸುವ ಜಾತ್ಯತೀತ ಜನಪರ ಕಾಳಜಿ ಹೊಂದಿರುವ ಕರುಣಾಮಯಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡುವ ಸಮರ್ಥ ವ್ಯಕ್ತಿಗೆ ಹಾಗೂ ಸಂವಿಧಾನದ ಆಶಯಗಳಿಗೆ ಬದ್ಧರಿರುವ ವ್ಯಕ್ತಿಗೆ ಮತ ನೀಡುವ ಮೂಲಕ ಈ ನಾಡು ಕಲ್ಯಾಣ ಕರ್ನಾಟಕವಾಗಲು ಹಾಗೂ ಈ ವಿಶಾಲವಾದ ರಾಷ್ಟ್ರವೂ ಪ್ರಭುದ್ಧ ರಾಷ್ಟ್ರವಾಗಲು ಕಾರಣಿ ಕರ್ತರಾಗಬೇಕು."ನಾನು ನಿಮಗೆ ಮತದಾನದ ಅಧಿಕಾರ ಕೊಡಿಸಿದ್ದು ರಾಜರಾಗಲು ಹೊರತು ಗುಲಾಮರಾಗಿ ಎಂದಲ್ಲ" ಸಂವಿಧಾನ ಶಿಲ್ಪಿ, ವಿಶ್ವ ರತ್ನ, ಭಾರತರತ್ನ, ಡಾ ಬಿ ಆರ್ ಅಂಬೇಡ್ಕರ್ ನುಡಿಯನ್ನು ಪ್ರತಿಯೊಬ್ಬ ಭಾರತೀಯನು ಚಿಂತನ-ಮಂಥನ ಮಾಡಬೇಕು ರಾಜನಾಗುವುದು ಗುಲಾಮನಾಗುವುದು ನಮ್ಮ ಕೈಯಲ್ಲಿದೆ ವ್ಯಕ್ತಿಯನ್ನು ಆಯ್ಕೆ ಮಾಡುವ ಮುನ್ನ ಆಳವಾಗಿ ಆಲೋಚಿಸಬೇಕು ಭ್ರಷ್ಟ - ದುಷ್ಟರನ್ನು ದೂರಿಡಿ ಒಳ್ಳೆಯವರಿಗೆ ಮೊದಲ ಆದ್ಯತೆಯನ್ನು ಕೊಟ್ಟು ಆಯ್ಕೆ ಮಾಡಿದರೆ ನಮಗೂ ಹಿತ ನಾಡಿಗೂ ಹಿತ ದೇಶಕ್ಕೂ ಹಿತ ಹೀಗೆ ನಾವೆಲ್ಲರೂ ಮಾಡುವುದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳ್ಳುವುದರಲ್ಲಿ ಎರಡು ಮಾತಿಲ್ಲ " ಮತ ಮನೆಮಗಳು ಇದ್ದಂತೆ ಅದನ್ನು ಅಯೋಗ್ಯರಿಗೆ ಕೊಡಬಾರದು " ಇದು ಡಾ. ಬಿ. ಆರ್. ಅಂಬೇಡ್ಕರರ ಉಕ್ತಿ ಮತ್ತು ಮಾತು ಈ ನಿಟ್ಟಿನಲ್ಲಿ ಪ್ರಜೆಗಳು ಪ್ರಜ್ಞಾವಂತರಾಗಬೇಕು ಪ್ರಭುದ್ಧರಾಗಬೇಕು ಬುದ್ಧಿವಂತರಾಗಬೇಕು ಭೀಮರಾವ್ ಅಂಬೇಡ್ಕರ್ ಅವರು ಹೇಳಿದ ಈ ಅಮೂಲ್ಯ ಉಕ್ತಿಯನ್ನು ಅರ್ಥ ಮಾಡಿಕೊಂಡು ಮತ ಮೌಲ್ಯದ ಮಹತ್ವ ಮನಗಂಡು ಮತದಾನ ಮಾಡೋಣ ಪ್ರಜಾಪ್ರಭುತ್ವ ಬಲಗೊಳ್ಳಲು ನಾವೆಲ್ಲರೂ ಪರಿಶ್ರಮಿಸೋಣ ಕೈಜೋಡಿಸೋಣ.ಲೇಖನ - ರಮೇಶ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು