ವಿಷಯಕ್ಕೆ ಹೋಗಿ
ಮತದಾನ ಜಾಗೃತಿ ಅಭಿಯಾನ.ಮತದಾನ ಶ್ರೇಷ್ಠದಾನ ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಮೋಟೋ ದಡಿಯಲ್ಲಿ.ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ ಕರ್ನಾಟಕ, ಅಧ್ಯಕ್ಷರು ಜಿಲ್ಲಾ ಸ್ವಿಫ್ ಸಮಿತಿ ಬೆಳಗಾವಿ ಅಧ್ಯಕ್ಷರು ತಾಲೂಕ ಸ್ವಿಫ್ ಸಮಿತಿ ಚಿಕ್ಕೋಡಿ, ಇವುಗಳ ಸಂಯುಕ್ತ ಆಶ್ರಯದಲ್ಲಿ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಬೆಳಗಾವಿ ಜಿಲ್ಲೆಯ ಮಾಂಜರಿ ಅಭಿವೃದ್ಧಿ ಅಧಿಕಾರಿಗಳಾದ ವಿ ಎಸ್ ಪೋತದಾರ್ ಅವರ ನೇತೃತ್ವದಲ್ಲಿ ಕ್ಯಾಂಡಲ್ ಬೆಳಗಿಸುವುದರೊಂದಿಗೆ. ಜಾಥಾ ಮೂಲಕ ಗ್ರಾಮದ ಜನರಿಗೆ ಮತದಾನದ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ವಿ ಎಸ್ ಪೋತದಾರ ಪಿಡಿಒ ಮಾಂಜರಿ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರು ಪಾಲ್ಗೊಂಡಿದ್ದರು. ವರದಿ :- ರಮೇಶ ಕಾಂಬಳೆ.ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು