ವಿಷಯಕ್ಕೆ ಹೋಗಿ
ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದಲ್ಲಿ ಕಳೆದ ವಾರ ನಡೆದ ಕಾಂಗ್ರೆಸ್ ಮುಖಂಡನ ಭೀಕರ ಕೊಲೆ ಮಾಡಿದ 4 ಆರೋಪಿಗಳ ಬಂಧನ ಮಾಡಿದ ಪೊಲೀಸರು.ಅಥಣಿ : ಖಿಳೇಗಾಂವ ಗ್ರಾಮದ ಕಾಂಗ್ರೆಸ್ಸ್ ಮುಖಂಡ ಹಾಗೂ PKPS ಅಧ್ಯಕ್ಷನ ಕೊಲೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಪೊಲೀಸರು. ಖಿಳೇಗಾಂವ ಗ್ರಾಮದ ಹೊರವಲಯದಲ್ಲಿ ಏಪ್ರಿಲ್ 3 ರಂದು ಸುಮಾರು 4 ರಿಂದ 5 ಜನರ ಗುಂಪೊಂದು ಭೀಕರ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದ ಆರೋಪಿಗಳನ್ನು 5 ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೇಲ್ನೋಟಕ್ಕೆ ಇದು ಜಮೀನು ವಿವಾದಕ್ಕೆ ಕೊಲೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಪೋಲಿಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಪಾಂಡೆಗಾಂವ್ ಗ್ರಾಮದ ವಿಠ್ಠಲ ಶ್ರವಣಕುಮಾರ ಪೂಜೇರಿ (30), ಶಿರೂರು ಗ್ರಾಮದ ಶಿವಾಜಿ ಹಜಾರೆ(26), ಸುಖದೇವ್ ಹಜಾರೆ(26), ಹಾಗೂ ಸಂತೋಷ ಹೊನಮೋರೆ (24).ಬಂಧಿತ ಆರೋಪಿಗಳು ವರದಿ :-ಮುಕೇಶಕುಮಾರ್ ಲಂಬುಗೊಳ್, ಅಥಣಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು