ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾಗವಾಡ, ಅಥಣಿ ಚೆಕ್ಪೋಸ್ಟ್. ಗಳಿಗೆ ಬೆಳಗಾವಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಬೆಳಗಾವಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾಕ್ಟರ್ ಭೀಮಾಶಂಕರ್ ಗುಳೇದ್ ಚಿಕ್ಕೋಡಿ ಉಪ ವಿಭಾಗ ಅಧಿಕಾರಿ ಮೆಹಬೂಬಿ ಭೇಟಿ ನೀಡಿದ್ದು ಕಾಗವಾಡ, ಅಥಣಿ, ಮಂಗಸೂಳಿ,ಮದಬಾವಿ ಚೆಕ್ಪೋಸ್ಟ್ ಗಳಲ್ಲಿ ಮಹಾರಾಷ್ಟ್ರದಿಂದ ಬರುವ ಎಲ್ಲಾ ಖಾಸಗಿ ವಾಹನ ಸರ್ಕಾರಿ ಬಸ್ಸುಗಳನ್ನು ತಡೆದು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳು ನಿತೇಶ್ ಪಾಟೀಲ್ ಮಾತನಾಡಿ ಸಾರ್ವಜನಿಕರಲ್ಲಿ ಮನವಿ ಮಾಡಿ 50,000₹ ಕ್ಕಿಂತ ಅಧಿಕ ಹಣವನ್ನು ತೆಗೆದುಕೊಂಡು ಹೋಗಬಾರದೆಂದು ಹೆಚ್ಚು ಇದ್ದರೆ ಅದಕ್ಕೆ ಸೂಕ್ತ ದಾಖಲೆ ಇರಬೇಕು ಇಲ್ಲವೆಂದರೆ ಅವಕಾಶವಿಲ್ಲ ಎಂದು ತಿಳಿಸಿ ಎಲ್ಲರೂ ಕಾನೂನು ಪಾಲನೆ ಮಾಡಬೇಕೆಂದು ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 20 ಲಕ್ಷಕ್ಕಿಂತ ಅಧಿಕ ನಗದು ಜಪ್ತಿಯಾಗಿದ್ದು ಇನ್ನೂ ಹೆಚ್ಚು ಜಪ್ತಿ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಅನುಮಾನಾಸ್ಪದಕವಾಗಿ ಬರುವ ಎಲ್ಲಾ ವಾಹನ ಹಾಗೂ ವ್ಯಕ್ತಿಯ ತಪಾಸನೆ ನಡೆಸಿ ಕಳಿಸಬೇಕು, ಚುನಾವಣೆ ನೈತಿಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು. ಕಾಗವಾಡ ತಾಲೂಕಿನ ದಂಡಾಧಿಕಾರಿ ಎಸ್ ಬಿ ಇಂಗಳೇ, ಸಿಪಿಐ ರವೀಂದ್ರ ನಾಯಕವಾಡಿ ಎಲ್ಲ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ :- ಮೋಸಾ ನದಾಫ್, ಕಾಗವಾಡ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು