ವಿಷಯಕ್ಕೆ ಹೋಗಿ
ರಾಯಬಾಗ ಸಬ್ ರಿಜಿಸ್ಟ್ರಾರ್ ಅಧಿಕಾರಿ ರವಿ ಸಂಕನಗೌಡ್ ಅಧಿಕಾರ ಅವಧಿಯಲ್ಲಿ ನಡೆದ ಮೂಲ ಮಾಲೀಕರ ಜಮೀನು ನಕಲಿ ಸಹಿ ನಕಲಿ ಫೋಟೋ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಇನ್ಯಾರೋ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದಾರೆ.ರಾಯಬಾಗ ತಾಲೂಕಿನ ಅಳಗವಾಡಿಯ ಗ್ರಾಮದ ಯಲ್ಲವ್ವ ಸಿದ್ದಪ್ಪ ಕಬ್ಬೂರೆ 74 ವರ್ಷ ಇವರ ಆಸ್ತಿ No 72/1 ಇದರ ಪೈಕಿ 12 ಗುಂಟೆ ಜಮೀನನ್ನು ವಿಠ್ಠಲ್ ಲಕ್ಷ್ಮಣ್ ಹಳ್ಳೂರು ಸಾಕಿನ್ ಹಾರೂಗೇರಿ ಇವರಿಗೆ ವರ್ಗಾವಣೆ ಮಾಡಲಾಗುತಿದೆ ಮತ್ತು ""ನಾನು ಒಂದು ದಿನ ಸುಮ್ಮನಿದ್ದಿದ್ದರೆ ವಿಠ್ಠಲ್ ಲಕ್ಷ್ಮಣ ಹಳ್ಳೂರು ಜಮೀನು ವರ್ಗಾವಣೆಯಾಗುತ್ತಿತ್ತು"" ಎಂದು ತಿಳಿದು ಅಜ್ಜಿ ಯಲ್ಲವ್ವ ಸಿದ್ದಪ್ಪ ಕಬ್ಬೂರೆ ಸಬ್ ರಿಜಿಸ್ಟ್ರಾರ್ ಅಧಿಕಾರಿ ವಿರುದ್ದ ಆರೋಪ ಮಾಡಿದ್ದಾರೆ.ಇನ್ನೂ ರಾಯಬಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಕಬಳಿಕೆ ವರ್ಗಾವಣೆ ನಡೆದಿದ್ದು ನಾಲ್ಕನೇ ಬಾರಿ ಎಂದು ಸ್ಥಳದಲ್ಲಿ ಸೆರಿದ್ದ ಜನ ಹೇಳುತ್ತಿದ್ದಾರೆ.ಸಬ್ ರಿಜಿಸ್ಟ್ರಾರ್ ಅಧಿಕಾರಿ ರವಿ ಸಂಕಣಗೌಡ್ ಅವರನ್ನ ಕೇಳಿದರೆ ""ನಾನು ಆ ದಿನ ಇರಲಿಲ್ಲ ಬೇರೆ ಅಧಿಕಾರಿ ಇಂನ್ ಚಾರ್ಜ್ ಮೇಲೆ ಇದ್ದರು"" ಈ ಕಚೇರಿಯಲ್ಲಿ ಬೇರೆ ಆಫೀಸರ್ ಇದ್ದರೂ ಎಂದು ಉಡಾಪಿ ಉತ್ತರ ನೀಡುತ್ತಿದ್ದಾರೆ.""ಸಬ್ ರಿಜಿಸ್ಟ್ರಾರ್ ಅಧಿಕಾರಿ ಹಣ ತೆಗೆದುಕೊಂಡು ಈ ನನ್ನ ಜಮೀನು ವರ್ಗಾವಣೆ ಮಾಡಿದ್ದಾರೆ"" ಎಂದು ಅಜ್ಜಿ ಯಲ್ಲವ್ವ ಕಬ್ಬೂರೆ ರಾಯಬಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮುತ್ತಿಗೆ ಹಾಕಿದ್ದಾಳೆ.ಈ ವೇಳೆ ಪತ್ರಕರ್ತರು ವಿಡಿಯೋ ಮಾಡುತಿದ್ದಾಗ ಸಬ್ ರಿಜಿಸ್ಟ್ರಾರ್ ಅಧಿಕಾರಿ ರವಿ ಸಂಕನಗೌಡ್ ಪತ್ರಕರ್ತರಿಗೆ ನಾಲಿಗೆ ಹರಿ ಬಿಟ್ಟು ತನ್ನ ಸಿಬ್ಬಂದಿಗಳಿಂದ ಮೊಬೈಲ್ ನಲ್ಲಿ ವಿಡಿಯೋ ಮಾಡುವುದಕ್ಕೆ ಮುಂದಾಗಿದ್ದಾರೆ.ಅಷ್ಟೇ ಅಲ್ಲದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ನಿರಂತರ ಇದ್ದರೂ ಬೆಳಗಾವಿ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ.ಇನ್ನೂ ಈ ಅಜ್ಜಿ ತನ್ನ ಜಮೀನು ""ನನ್ನ ಹೆಸರಿಗೆ ಆಗುವ ವರೆಗೂ ಈ ಕಚೇರಿ ಬಿಟ್ಟು ಹೋಗುವುದಿಲ್ಲ"" ಎಂದು ಪಟ್ಟು ಹಿಡಿದಿದ್ದಾರೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವರದಿ :- ರಮೇಶ ಕಾಂಬಳೆ. ರಾಯಬಾಗ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು