ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆಯ ಪಿಎಸ್ಐ ಅವರ ಅಧಿಕೃತ ಕುರ್ಚಿಯ ಮೇಲೆ ಸ್ವಾಮೀಜಿ ಕುಳಿತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಪೊಲೀಸ್ ಠಾಣೆ ಅಂದ್ರೆ ಶಿಸ್ತು ಪಾಲನೆ ಕಾನೂನು ಚೌಕಟ್ಟು..ಅಲ್ಲಿ ಮೇಲಾಧಿಕಾರಿ ಅಂಥ ಒಬ್ಬರು ಇದ್ದೆ ಇರುತ್ತಾರೆ... ಆ ಮೇಲಾದಿಕಾರಿಗೆ... ಇಲಾಖೆ ತನ್ನದೇ ಗೌರವ ಕೊಟ್ಟಿರುತ್ತೆ...ಆದರೆ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ಅಧಿಕಾರಿ..ಮಾಳಪ್ಪ ಪೂಜೇರಿ... ಠಾಣೆಯಲ್ಲಿ ಆಗಮಿಸಿದ ಸ್ವಾಮೀಜಿ ಒಬ್ಬರಿಗೆ ತನ್ನ ಕುರ್ಚಿಯನ್ನು ಕೊಟ್ಟು ಸ್ವಾಮೀಜಿ ಮುಂದಗಡೆ ಕೈ ಕಟ್ಟಿಕೊಂಡು ಕೂತಿಕೊಂಡಿರೋ ಫೋಟೋ ಈಗ ವೈರಲ್ ಆಗುತ್ತಿದೆ...ಲೋಕಸಭೆ ಚುನಾವಣೆ ಹೊತ್ತಲ್ಲಿ ಪೊಲೀಸ್ ಠಾಣೆಗಳಲ್ಲಿ ಕಾನೂನು ಕ್ರಮಗಳು ಪೊಲೀಸ್ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.. ವರದಿ :-ಚಂದ್ರು ಮಾನೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು